NEWSನಮ್ಮಜಿಲ್ಲೆನಮ್ಮರಾಜ್ಯ

ಪತ್ರಿಕಾರಂಗ ಜನರಲ್ಲಿ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ : ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

ವಿಜಯಪಥ ಸಮಗ್ರ ಸುದ್ದಿ

ಹನೂರು : ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕಾರಂಗ ಜನರಲ್ಲಿ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಾ ಬಂದಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಕಿದ್ದಾರೆ.

ಭಾನುವಾರ ಪಟ್ಟಣದ ಬೆಟ್ಟಳ್ಳಿ ಮಾರಮ್ಮ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಬೆಳಗಾವಿಯ ಹನೂರು ತಾಲೂಕು ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಧ್ಯಮಗಳು ಸಮಾಜದಲ್ಲಿ ಜನರಿಗೆ ಮಾಹಿತಿ ನೀಡುವ ಮೂಲಕ ಅತ್ಯಂತ ಪ್ರಭಾವ ಶಾಲಿಯಾಗಿ ಜನರ ನಡುವೆ ಇದೆ. ಜನರ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ, ಸಂವಿಧಾನದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆ ಪತ್ರಿಕಾ ರಂಗ ಮಹತ್ವ ವನ್ನು ಪಡೆದಿದೆ. ಇಲ್ಲಿನ ಕರ್ನಾಟಕ ಪತ್ರಕರ್ತರ ಸಂಘ ಸಮಾಜ ಮುಖಿ ಕಾರ್ಯಕ್ರಮದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹದೇಶ್ವರಬೆಟ್ಟ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಶ್ರೀಗಳು ಮಾತಾನಾಡಿ, ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದತ್ತ ಪಾದರ್ಪಣೆ ಮಾಡಿರುವ ಕರ್ನಾಟಕ ಪತ್ರಕರ್ತರ ಸಂಘ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಪ್ರಪಥಮವಾಗಿ ಉದ್ಘಾಟನೆ ಆಗುತ್ತಿರುವುದು ಸಂತಸಕರದ ವಿಷಯವಾಗಿದೆ ಸಂಘದ ಧ್ಯೇಯೋದ್ದೇಶಗಳನ್ನು ಗಮನಿಸಿದರೆ ಪ್ರತಿಕಾ ವಿತರಕರು ಸೇರಿ ಪತ್ರಿಕಾ ಏಜೆಂಟ್ ಗಳು ವರದಿಗಾರರಿಗೂ ವಿಮಾ ಸೌಲಭ್ಯ ಸೇರಿದಂತೆ ಪ್ರತಿಯೊಬ್ಬ ಸದಸ್ಯನಿಗೂ ಸಾಕಷ್ಟು ಭದ್ರತೆ ಸೌಲಭ್ಯಗಳು ದೊರೆಯುತ್ತಿರುವುದು ಪತ್ರಿಕಾ ರಂಗದ ಬಳಗಕ್ಕೆ ಒಳ್ಳೆಯ ಬೆಳವಣಿಗೆ ಎಂದು ಆಭಿಪ್ರಾಯಪಟ್ಟರು.

ಬಳಿಕ ಕರ್ನಾಟಕ ಪತ್ರಿಕೆ ಸಂಘದ ರಾಜ್ಯಾಧ್ಯಕ್ಷ ಮುರುಗೇಶ್ ಶಿವಪೂಜಿ ಮತನಾಡಿ, ಕರ್ನಾಟಕ ಪತ್ರಕರ್ತರ ಸಂಘವು ದೆಹಲಿಯ ಇಂಡಿಯನ್ ಜನರ್ಲಿಸ್ಟ್ ಯೂನಿಯನ್ ಅಡಿಯಲ್ಲಿ ಸದಸ್ಯತ್ವವನ್ನು ಹೊಂದಿದ್ದು ರಾಷ್ಟ್ರ ಮಟ್ಟದಲ್ಲಿ ಸಂಘ ಗುರುತಿಸಿಕೊಂಡಿದೆ. ನಮ್ಮ ಸಂಘದಲ್ಲಿ ಸದಸ್ಯತ್ವವನ್ನು ತೆಗೆದುಕೊಂಡ ಸದಸ್ಯರಿಗೆ ಅಂದರೆ ಪತ್ರಿಕ ವಿತರಕ, ಪತ್ರಿಕ ಏಜೆಂಟ್, ಪತ್ರಿಕಾ ವರದಿಗಾರ ಹಾಗೂ ಪತ್ರಿಕ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಸಹ 4 ಲಕ್ಷ ರೂ. ಅಪಘಾತ ವಿಮೆಯ ಸಾಮಾಜಿಕ ಭದ್ರತೆ ಸೌಲಭ್ಯವಿದೆ.

ಸುಮಾರು ಎಂಟು ಜನ ಟ್ರಸ್ಟಿಗಳು ಸೇರಿಕೊಂಡು ಒಂದು ನಿಧಿಯನ್ನು ಸ್ಥಾಪಿಸಿ ಸದಸ್ಯತ್ವ ಪಡೆದ ಸದಸ್ಯರುಗಳಿಗೆ ಆಕಸ್ಮಿಕ‌ ದುರಂತಗಳು ಸಂಭವಿಸಿದ್ದಲ್ಲಿ ನಿಧಿಯ ಹಣವನ್ನು ವಿನಿಯೋಗಿಸಲಾಗುತ್ತಿದೆ. ಆಲ್ಲದೆ ಸಮಾಜದಲ್ಲಿ ಸಂಘಟನೆಗಳು ಎಷ್ಟು ಇದೆ ಎಂಬುದು ಮುಖ್ಯವಲ್ಲ ಸಂಘಟನೆಗಳಿಂದ ಸದಸ್ಯರಿಗೆ ಏನು ಭದ್ರತೆ ಸೌಲಭ್ಯ ದೊರೆಯುತ್ತದೆ ಎಂಬುದೇ ಮುಖ್ಯ ಎಂದರು.

ಇದೆ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಜಕೀಯ‌ಕ್ಷೇತ್ರದಲ್ಲಿ ಮರಗದಮಣಿ,ಸಮಾಜಸೇವೆ ಅಡಿಯಲ್ಲಿ ಕೃಷ್ಣೇಗೌಡ ಪಿಎಚ್ ಡಿ ಪದವೀಧರ ಡಾ‌.ಚಂದ್ರಪ್ಪ, ಪರಿಸರ ಪ್ರೇಮಿ ವಕೀಲ ವೆಂಕಟೇಶ್, ನರ್ಗಿಸ್ ಆಲಿಖಾನ್ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇತ್ತೀಚಿಗೆ ಜಿಲ್ಲಾ ಹಿರಿಯ ಪತ್ರಕರ್ತ ರಹಮಾನ್ ನಿಧನದ ಹಿನ್ನೆಲೆ ಒಂದು ನಿಮಿಷಗಳ ಕಾಲ ಮೌನಚರಣೆ ನಡೆಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಾಲೂರು ಶ್ರೀಗಳು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಕಚೇರಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ ಉಪಾಧ್ಯಕ್ಷ ಗಿರೀಶ್ ಸದಸ್ಯರಾದ ಹರೀಶ್, ಮಹೇಶ್, ಮಹೇಶ್ ನಾಯ್ಕ್, ಮುಮ್ತಾಜ್ ಭಾನು, ಡಿವೈಎಸ್ಪಿ ಮಹಾನಂದ್ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಾವಾದ್ ಅಹಮದ್, ಮುಖಂಡರಾದ ಕೊಪ್ಪಾಳಿಮಹದೇವ್, ಮಂಗಲ ಪುಟ್ಟರಾಜು ಪ್ರಜಾಕೀಯ ಮುಖಂಡ ನಾಗರಾಜ್, ಪಕ್ಷೇತರ ಆಭ್ಯರ್ಥಿ ಮುಜಾಮೀಲ್ ಪಾಷಾ, ರೈತ ಸಂಘದ ಅಧ್ಯಕ್ಷರಾದ ಗೌಡೇಗೌಡ, ಚಂಗಡಿಕರಿಯಪ್ಪ, ಹಿರಿಯ ಪತ್ರಕರ್ತರಾದ ವೆಂಕಟೇಗೌಡ ರೂಪೇಶ್ ಕುಮಾರ್, ನಾಗೇಶ್, ಪತ್ರಿಕಾ ಸಂಪಾದಕ ಎಚ್.ಎಂ.ಕೀರ್ತಿಕೇಶ್ವರ್, ಆಮ್ ಆದ್ಮೀ ಪಕ್ಷದ ಮುಖಂಡ ನಾಗೇಂದ್ರ, ಸೇರಿದಂತೆ ಹಲವರು ಇದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ