NEWSಆರೋಗ್ಯನಮ್ಮಜಿಲ್ಲೆ

ಮಧುಮೇಹದಿಂದ ಅಂಗಚ್ಛೇದನ ತಡೆಗಾಗಿ “ಸುರಕ್ಷಿತ ಪಾದಗಳು – ಸುರಕ್ಷಿತ ಸವಾರಿ”

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮಧುಮೇಹದಿಂದ ಅಂಗಚ್ಛೇದನವನ್ನು ತಡೆಗಟ್ಟುವ ಸಲುವಾಗಿ “ಸುರಕ್ಷಿತ ಪಾದಗಳು – ಸುರಕ್ಷಿತ ಸವಾರಿ” (Safe Feet – Safe Ride) ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿರುವ ದ್ವಿಚಕ್ರ ಸವಾರಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಧುಮೇಹದಿಂದ ಅಂಗಚ್ಛೇದನವನ್ನು ತಡೆಗಟ್ಟುವ ಸಲುವಾಗಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಗುಂಪು ಇಂದು “ಸುರಕ್ಷಿತ ಪಾದಗಳು – ಸುರಕ್ಷಿತ ಸವಾರಿ”(‘Safe Feet – Safe Ride’) ಘೋಷವಾಕ್ಯದೊಂದಿಗೆ ದ್ವಿಚಕ್ರ ಸವಾರಿ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ರೆಫರಲ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.

ಇನ್ನು ಪ್ರತಿ 20 ಸೆಕೆಂಡ್‌ಗಳಿಗೆ ಮಧುಮೇಹದಿಂದ ಒಂದು ಅಂಗಗಳು ಕಳೆದುಹೋಗುತ್ತದೆ. ಇದರ ಜತೆಗೆ ಸುಮಾರು 200 ಮಿಲಿಯನ್ ಜನರು ತಮ್ಮ ಜೀವಿತಾವಧಿಯಲ್ಲಿ ಮಧುಮೇಹದಿಂದ ಪಾದದಲ್ಲಿ ಹುಣ್ಣಿನ ಸಮಸ್ಯೆ ಒಳಗಾಗುತ್ತಿದ್ದಾರೆ ಎಂದು ವಿವರಿಸಿದರು.

ಭಾರತದಲ್ಲಿ 2021ರ ಹೊತ್ತಿಗೆ 74 ಮಿಲಿಯನ್ ಗಿಂತಲೂ ಹೆಚ್ಚು ಮಧುಮೇಹಿಗಳಾಗಿದ್ದಾರೆ ಮತ್ತು ಸುಮಾರು 24 ಮಿಲಿಯನ್ ಜನರು ಪಾದದ ಹುಣ್ಣುಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು 4 ಮಿಲಿಯನ್ ಅಂಗಚ್ಛೇದನೆಗಳಿಗೆ ಕಾರಣವಾಗುತ್ತದೆ. ಮಧುಮೇಹಿಗಳಲ್ಲಿ ನರರೋಗದ ಪರಿಸ್ಥಿತಿಗಳು ಮೂಲಭೂತ ಕಾರ್ಯಗಳನ್ನು ನಿರ್ವಹಿಸಲು ಅಸಮರ್ಥತೆಗೆ ಕಾರಣವಾಗುತ್ತವೆ. ಪಾದದಲ್ಲಿನ ಸಂವೇದನೆಯ ನಷ್ಟದಿಂದಾಗಿ ಸವಾರಿ ಅಥವಾ ಚಾಲನೆಯ ವೇಳೆ ಅನೇಕ ಅಪಘಾತಗಳಿಗೆ ಕಾರಣವಾಗುತ್ತದೆ.

ಹೀಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 19 ನವೆಂಬರ್ 2022 ರಂದು ವೈದ್ಯರು, ಆರೋಗ್ಯ ಪಾಲಕರು ಆರೋಗ್ಯ ಕಾರ್ಯಕರ್ತರು ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ರೆಫರಲ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಬಾಲಸುಂದರ್, ವಿಶೇಷಾಧಿಕಾರಿ ಡಾ. ಭಾಸ್ಕರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕ ಅಂತಃಸ್ರಾವಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆ(KIER), ಕರ್ನಾಟಕ ಸರ್ಕಾರ, ಬಿಬಿಎಂಪಿ, ಭಾರತೀಯ ಪೊಡಿಯಾಟ್ರಿ ಅಸೋಸಿಯೇಷನ್(ಐಪಿಎ), ಆರೋಗ್ಯಸೇವಾ ಮತ್ತು ಫೂಟ್ ಸೆಕ್ಯೂರ್ ಜೊತೆಗೆ “ಸುರಕ್ಷಿತ ಪಾದಗಳು – ಸುರಕ್ಷಿತ ಸವಾರಿ”(ಸೇಫ್ ಫೀಟ್-ಸೇಫ್ ರೈಡ್) ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ದ್ವಿಚಕ್ರ ಸವಾರಿ ನಡೆಸಲಾಗಿದೆ.

ದ್ವಿಚಕ್ರ ಸವಾರಿಯ ವಿವರ: ಇಂದಿರಾನಗರದ ಕರ್ನಾಟಕ ಅಂತಃಸ್ರಾವಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆ(KIER)ಯಿಂದ ಪ್ರಾರಂಭವಾಗಿ ದೊಮ್ಮಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಹಲಸೂರಿನ ದೊಮ್ಮಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಬಿಎಂಪಿ ಕೇಂದ್ರ ಕಚೇರಿ, ದಾಸಪ್ಪ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಪಿ.ಜಿ.ಹಳ್ಳಿ(ಪ್ಯಾಲೆಸ್ ಗುಟ್ಟಹಳ್ಳಿ) ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 14ನೇ ಕ್ರಾಸ್ ಮಲ್ಲೇಶ್ವರದವರೆಗೆ ಸುಮಾರು 50 ದ್ವಿಚಕ್ರ ವಾಹನಗಳ ಮೂಲಕ ಸವಾರಿ ಮಾಡಿ ನಾಗರಿಕ/ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ