NEWSನಮ್ಮಜಿಲ್ಲೆನಮ್ಮರಾಜ್ಯ

ವಿಜಯಪಥ ವರದಿ ಪರಿಣಾಮ: KKRTC ಲಿಂಗಸುಗೂರು ಡಿಎಂ ವರ್ಗಾವಣೆ

ವಿಜಯಪಥ ಸಮಗ್ರ ಸುದ್ದಿ

ರಾಯಚೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಲಿಂಗಸುಗೂರು ಘಟಕ ವ್ಯವಸ್ಥಾಪಕ ಅದೆಪ್ಪ ಅವರನ್ನು ಮಸ್ಕಿ ಘಟಕಕ್ಕೆ ವರ್ಗಾವಣೆ ಮಾಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಕಳೆದ 2022ರ ಡಿಸೆಂಬರ್‌ 10ರಂದೆ ಅದೆಪ್ಪ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಆ ವರ್ಗಾವಣೆ ಆದೇಶವನ್ನು ತಡೆಹಿಡಿಯಲಾಗಿತ್ತು. ಮತ್ತೆ ಆ ಆದೇಶವನ್ನು ಪರಿಶೀಲಿಸಿ ಈ ಮೊದಲೆ ವರ್ಗಾವಣೆಗೊಂಡಿದ್ದ ಮಸ್ಕಿ ಘಟಕಕ್ಕೇ ಹೋಗಿ ಕಾರ್ಯಭಾರ ವಹಿಸಿಕೊಳ್ಳಬೇಕು ಎಂದು ಗುರುವಾರ (ಜ.5) ಆದೇಶ ಹೊರಡಿಸಿದ್ದಾರೆ.

ಕೆಕೆಆರ್‌ಟಿಸಿ : ಲಿಂಗಸೂಗುರು ಘಟಕ ವ್ಯವಸ್ಥಾಪಕನ ದರ್ಪ – ಮಾಡದ ತಪ್ಪಿಗೆ 1200 ರೂ. ದಂಡ ಕಟ್ಟುತ್ತಿರುವ ಚಾಲಕರು

ಕಳೆದ ತಿಂಗಳು ತಮ್ಮ ಘಟಕದ ಚಾಲಕರೊಬ್ಬರ ಮೇಲೆ ನಮ್ಮ ವಾಹನವನ್ನು ಓವರ್‌ಟೇಕ್‌ ಮಾಡಲು ಬಿಡಲಿಲ್ಲ ಎಂದು 7-8 ಮಂದಿಯಿದ್ದ ಪುಂಡರ ಗುಂಪು ಹಲ್ಲೆ ಮಾಡಿತ್ತು. ಈ ವೇಳೆ ಚಾಲಕನ ಕೈ ಬೆರಳುಗಳನ್ನು ಮುರಿದು ಹಾಕಿದ್ದರು. ಆದರೂ ಆ ಪುಂಡರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬೇಕಿದ್ದ ಡಿಎಂ ಅದೆಪ್ಪ ಏನು ಗೊತ್ತೆ ಇಲ್ಲ ಎಂಬಂತೆ ನಡೆದುಕೊಂಡಿದ್ದರು.

ಈ ಬಗ್ಗೆ ಬಲ್ಲ ಮೂಲಗಳಿಂದ ಬಂದ ಮಾಹಿತಿ ಮೇರೆಗೆ ವಿಷಯವನ್ನು ಖಚಿತ ಪಡಿಸಿಕೊಂಡ ವಿಜಯಪಥ ಡಿಎಂ ಅವರ ನಡೆಯ ಬಗ್ಗೆ ಸವಿಸ್ತಾರವಾಗಿ ವರದಿ ಮಾಡಿತ್ತು. ಆ ಬಳಿಕ ಎಚ್ಚೆತ್ತುಕೊಂಡಿದ್ದ ಅದೆಪ್ಪ ಅಂದು ರಾತ್ರಿಯೇ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು.

ಕೆಕೆಆರ್‌ಟಿಸಿ: ಲಿಂಗಸೂಗುರು ಘಟಕದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಭ್ರಷ್ಟಾಚಾರ – ಕಡಿವಾಣ ಹಾಕಬೇಕಿರುವ ವ್ಯವಸ್ಥಾಪಕರೇ ಮೌನ

ಇನ್ನು ಅದಪ್ಪ ತಮ್ಮ ಘಟಕದ ಚಾಲನ ಸಿಬ್ಬಂದಿ ವರ್ಗದವರನ್ನು ಕೀಳು ಮಟ್ಟದಲ್ಲಿ ನಡೆಸಿಕೊಳ್ಳುತ್ತಿದ್ದ ಬಗ್ಗೆ ಹಾಗೂ ಮನಸೋ ಇಚ್ಛೆ ನೌಕರರಿಗೆ ದಂಡ ವಿಧಿಸುತ್ತಿದ್ದ ಬಗ್ಗೆಯೂ ವಿಜಯಪಥ ಸಮಗ್ರ ವರದಿ ಮಾಡಿತ್ತು. ಈ ಎಲ್ಲವನ್ನು ಗಮನಿಸಿದ ಮೇಲಧಿಕಾರಿಗಳು ಅದೆಪ್ಪ ಅವರನ್ನು ವರ್ಗಾವಣೆ ಮಾಡಿದ್ದಾರೆ.

ಕೆಕೆಆರ್‌ಟಿಸಿ: ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ- ಆದರೂ ಪೊಲೀಸ್‌ ದೂರು ದಾಖಲಿಸದಂತೆ ಡಿಎಂನಿಂದಲೇ ಬೆದರಿಕೆ

ಮಸ್ಕಿ ಘಟಕಕ್ಕೆ ವರ್ಗಾವಣೆಗೊಂಡಿರುವ ಅದೆಪ್ಪ ಅವರು ಅಲ್ಲಾದರೂ ನೌಕರರಿಗೆ ಸ್ಪಂದಿಸಿ ಅವರಿಂದ ಕೆಲಸ ತೆಗೆದುಕೊಳ್ಳುವ ಜಾಣ್ಮೆ ಮರೆಯಬೇಕಿದೆ. ಆ ಮೂಲಕ ನಾವು ಸಾರ್ವಜನಿಕ ಸೇವೆಯಲ್ಲಿರುವವರು ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ನಾಡಿನ ಜನರಿಗೆ ನಮ್ಮ ಸೇವೆಯನ್ನು ಉತ್ತಮವಾಗಿ ಸಲ್ಲಿಸೋಣ ಎಂಬ ನಿಲುವನ್ನು ತಾಳಲಿ ಎಂದು ನೊಂದ ನೌಕರರು ಮನವಿ ಮಾಡಿದ್ದಾರೆ.

[wp-rss-aggregator limit=”4″ pagination=”on”]

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ