NEWSಶಿಕ್ಷಣ-

ವಿಮಾನದ ಮೂಲಕ ಅಂತಾರಾಜ್ಯ ಶೈಕ್ಷಣಿಕ ಪ್ರವಾಸ ಮಾಡಿದ AIPS ಸ್ಕೂಲ್‌ ಮಕ್ಕಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಏಷಿಯನ್‌ ಇಂಟರ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಅಂತಾರಾಜ್ಯ ಶೈಕ್ಷಣಿಕ ಪ್ರವಾಸವನ್ನು ಸ್ಕೂಲ್‌ ವತಿಯಿಂದ ಆಯೋಜನೆ ಮಾಡಲಾಗಿತ್ತು.

ಇದೇ ಡಿ.3ರಂದು ತಮಿಳುನಾಡಿನ ಚೆನ್ನೈಗೆ ಒಂದು ದಿನದ ವಿಮಾನದ ಮೂಲಕ( by Flight) ಶೈಕ್ಷಣಿಕ ಪ್ರವಾಸ (Educational tour) ಮಾಡಿದ ಶಾಲೆಯ 100 ಮಕ್ಕಳು ಬೆಂಗಳೂರಲ್ಲಿ  ಬೆಳಗ್ಗೆ 5.15ಕ್ಕೆ ಫ್ಲೈಟ್ ಹತ್ತಿದ್ದು 6.30ಕ್ಕೆ ಚೆನ್ನೈ ತಲುಪಿದರು.

ಚೆನ್ನೈನಲ್ಲಿ ವಿಮಾನ ಇಳಿಯುತ್ತಿದ್ದಂತೆ ಮೊದಲಿಗೆ ಲಕ್ಷ್ಮೀನಾರಾಯಣ ಅಷ್ಟಲಕ್ಷ್ಮೀ ದೇವಾಲಯದಲ್ಲಿ ದೇವರ ದರ್ಶನ ಪಡೆದು ಬಳಿಕ ತಾರಾಲಯದಲ್ಲಿ (The planetarium) ತ್ರೀಡಿಯ ಅನುಭವ ಪಡೆದು ಪುಳಕಿತರಾದರು.

ಇನ್ನು ಮಕ್ಕಳ ಪಾರ್ಕ್ ನಲ್ಲಿ ಉಯ್ಯಾಲೆ, ಆನೆಯ ಜಾರು ಬಂಡಿ, ಓಟದ ಕ್ರೀಡಾಟಗಳಲ್ಲಿ ತೊಡಗಿ ಸಂಭ್ರಮಿಸಿದರು. ಆ ನಂತರ ಸ್ನೇಕ್ ಪಾರ್ಕ್ ನಲ್ಲಿ ಮಿರರ್ ಇಮೇಜ್ ನೋಡಿ ಖುಷಿಪಟ್ಟ ಮಕ್ಕಳು ಅಲ್ಲಿನ ಅನುಭವವನ್ನು ಮೆಲುಕುಹಾಕಿದರು.

ಮರೀನಾ ಬೀಚ್‌ನಲ್ಲಿ ಕುದುರೆ ಸವಾರಿ, ಗಿರಿ ಗಿಟಲೆ ಆಟಗಳನ್ನು ಆಡಿ ರೋಮಾಂಚನಗೊಂಡರು. ಈ ಎಲ್ಲದರ ಸವಿಯನ್ನು ಸವಿಯುವಷ್ಟರಲ್ಲಿ ರಾತ್ರಿ 9 ಗಂಟೆ ಮೀರಿತ್ತು. ಆದರೂ ಹುಮ್ಮಸ್ಸಿನಿಂದಲೇ ಇಲ್ಲೆ ಇನ್ನಷ್ಟು ಹೊತ್ತು ಇರೋಣ ಎಂಬ ದಾಟಿಯಲ್ಲಿ ತಮ್ಮ ಕಣ್ಣುಗಳನ್ನು ಮಿಟುಕಿಸುತ್ತಾ ಶಿಕ್ಷಕರ ಹೇಳಿದ ಸಮಯವಾಯಿತು ಬನ್ನಿ ಎಂಬುದಕ್ಕೆ ತಲೆಯಾಡಿಸಿ ವಲ್ಲದ ಮನಸ್ಸಿನಿಂದ ಬೆಂಗಳೂರಿನತ್ತ ಪಯಣ ಬೆಳೆಸಲು ಸಿದ್ಧರಾದರು.

ಈ ವೇಳೆ ಮಾತನಾಡಿ ಶಾಲೆಯ ಪ್ರಾಂಶುಪಾಲರಾದ ಡಿಂಪಲ್ ಆರ್. ಗೌಡ, ಮಕ್ಕಳ ಉತ್ಸಾಹ, ಖುಷಿ ಮತ್ತು ಪ್ರವಾಸ ತಾಣಗಳನ್ನು ನೋಡುವ ಹಂಬಲವನ್ನು ಕಂಡು ಜತೆಗೆ ಮಕ್ಕಳ ಜೊತೆ ಕಳೆದಂತಹ ಸುಂದರವಾದ ಕ್ಷಣಗಳನ್ನು ಎಂದು ಮರೆಯಲು ಸಾಧ್ಯವಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಮಕ್ಕಳು ಕೂಡ ಫ್ಲೈಟ್ ಟ್ರಿಪ್ ಅನುಭವವನ್ನು ಹಂಚಿಕೊಂಡಿದ್ದು, ಪ್ರತಿ ವರ್ಷ ಇಂಥ ಶೈಕ್ಷಣಿಕ ಪ್ರವಾಸ ಮಾಡುವುದಕ್ಕೆ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.

ಚೆನ್ನೈನಲ್ಲಿ ರಾತ್ರಿ 9.30ಕ್ಕೆ ವಿಮಾನದಲ್ಲಿ ಹೊರಟು ರಾತ್ರಿ 10.45ಕ್ಕೆ ಬೆಂಗಳೂರು ತಲುಪಿದ ಮಕ್ಕಳು, ವಿಮಾನ ನಿಲ್ದಾಣದಿಂದ ಹೊರಟು ಶಾಲೆಗೆ ಬಂದಿದ್ದು ಡಿ.6ರ ಬೆಳಗಿನ ಜಾವ 2ಕ್ಕೆ ಬಳಿಕ ಶಾಲೆಯಿಂದ ತಮ್ಮತಮ್ಮ ಮನೆಗಳಿಗೆ ಹೊರಟಿದ್ದು 2.30ಕ್ಕೆ.

ಇನ್ನು ಶಾಲೆಯಿಂದ ಆಯೋಜನೆ ಮಾಡಿದ್ದ ಒಂದು ದಿನದ ವಿಮಾನ ಮೂಲಕ ಶೈಕ್ಷಣಿಕ ಪ್ರವಾಸದಲ್ಲಿ ಯಾವುದೇ ಚ್ಯುತಿ ಬಾರದಂತೆ ಶಾಲೆಯ ವ್ಯವಸ್ಥಾಪಕರಾದ ಮಹೇಶ್, ಪ್ರಾಂಶುಪಾಲರಾದ ಡಿಂಪಲ್ ಆರ್. ಗೌಡ ವ್ಯವಸ್ಥೆ ಮಾಡಿದ್ದರೆ ಅವರಿಗೆ ಶಿಕ್ಷಕಿಯರಾದ ಸೌಮ್ಯ, ಲತಾ, ಅಂಜು, ಸುಜಾತ, ವೀಣಾ ಮತ್ತು ಶಾಲೆಯ ವಾಹನ ಚಾಲಕ ಸಂತೋಷ್ ಸಾಥ್‌ ನೀಡಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ