ಬೆಂಗಳೂರು: ಕೋಲಾರದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಒತ್ತಡಗಳು ಹೆಚ್ಚಾಗುತ್ತಿದ್ದು, ಒಂದು ಹಂತದಲ್ಲಿ ಕೋಲಾರದಿಂದಲೇ ಚುನಾವಣಾ ಕಣಕ್ಕೆ ಇಳಿಯಲು ಕೂಡ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ.
ಆದರೆ, ಕೋಲಾದರಲ್ಲಿ ಸ್ಪರ್ಧಿಸುವುದು ಅಷ್ಟಾಗಿ ಫಲಕೊಡುವುದಿಲ್ಲ. ಹೀಗಾಗಿ ಅವರು ತಮ್ಮ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸಿರುವ ವರುಣಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲಿ ಎಂದು ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ 20 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಕೋಲಾರಕ್ಕಿಂತ ವರುಣದಲ್ಲಿ ನಿಂತುಕೊಂಡರೆ ಉತ್ತಮ. ಕಾರಣ ಕೋಲಾರಕ್ಕಿಂತ ವರುಣಾದಲ್ಲಿ ಅಪಾರ ಅಭಿಮಾನಿಗಳು ಇರುವುದರಿಂದ ಎಂದು ಹೇಳಿದ್ದಾರೆ.
[wp-rss-aggregator limit=”4″ pagination=”on”]