NEWSಲೇಖನಗಳು

ಸಾರಿಗೆ ನೌಕರರಿಗೆ ಸರ್ಕಾರ ಕೊಟ್ಟಿರುವ ಭರವಸೆ ಈಡೇರಿಸಲು ಬದ್ಧ ಎಂದ ಆ ಸಚಿವರುಗಳು ಮಾಡಿದ್ದೇನು..!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ಮುಷ್ಕರದ ಸಮಯದಲ್ಲಿ ಆಗಿರುವ ಹಲವು ಸಮಸ್ಯೆಗಳ ನಿವಾರಣೆಗೆ ಹಾಗೂ ಸರ್ಕಾರ‌ ನೌಕರರಿಗೆ ಲಿಖಿತವಾಗಿ ಕೊಟ್ಟಿರುವ ಭರವಸೆಯನ್ನು ಈಡೇರಿಸಲು ಬದ್ಧರಿದ್ದೇವೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಮನವಿ ಕೊಟ್ಟ ನೌಕರರಿಗೆ ಅಭಯ ನೀಡಿದ್ದರು.

ಇತ್ತೀಚೆಗೆ ಬೀದರ್‌ ನಗರಕ್ಕೆ ಭೇಟಿ ಬೀಡಿದ ವೇಳೆ  ಶ್ರೀರಾಮುಲು ಅವರು ಮುಷ್ಕರದ ಸಮಯದಲ್ಲಿ ಆದ ತೊಂದರೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಈ ಬಗ್ಗೆ ಸರ್ಕಾರ ಕೂಡ ಸಂಬಂಧಪಟ್ಟ ಸಚಿವರು ಅಧಿಕಾರಿಗಳ ಜತೆ ಮಾತನಾಡಲಿದೆ ಎಂದು ಹೇಳಿದ್ದರು. ಆದರೆ ಈವರೆಗೂ ಅದನ್ನು ಈಡೇರಿಸುವ ಮನಸ್ಸು ಮಾಡಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಸವರು ಭರವಸೆಗಳನ್ನು ಮತ್ತೆ ಮತ್ತೆ ನೀಡುತ್ತಲೇ ಬರುತ್ತಿರುವ ಸಚಿವರು ಇನ್ನು ಈ ಸರ್ಕಾರದ ಅವಧಿ ಕೇವಲ 1-2 ತಿಂಗಳಷ್ಟೇ ಇದ್ದು ಈಗಲಾದರೂ ನಮಗೆ ಶಾಶ್ವತತ ಪೆಇಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಡಿಸೆಂಬರ್-2020 ರಲ್ಲಿ ಸಾರಿಗೆ ನೌಕರರಿಗೆ ಸರ್ಕಾರವೇ ನೀಡಿದ ಭರವಸೆಗಳು ಮತ್ತು ಏಪ್ರೀಲ್-2021 ರಲ್ಲಿ ನಡೆದ ಸಾರಿಗೆ ಮುಷ್ಕರದಲ್ಲಿ ಉಂಟಾದ ಹಲವು ಸಮಸ್ಯೆಗಳನ್ನು ಬಗೆಹರಿಸಿ ಕೊಟ್ಟು ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ನೀಡಬೇಕು ಎಂದು ಎಂಬುವುದು ನೌಕರರ ಪ್ರಮುಖ ಬೇಡಿಕೆಯಾಗಿದೆ.

ಈ ಬೇಡಿಕೆಗಳನ್ನು ಇಟ್ಟುಕೊಂಡು ಕಳೆದ ಮೂರು ವರ್ಷದಿಂದ ಈಚೆಗೆ ಹತ್ತಾರು ಹೋರಾಟಗಳನ್ನು ನೌಕರರು ಮಾಡಿಕೊಂಡು ಬಂದಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಆದರೆ ಸಾರಿಗೆ ಸಚಿವರು ಮತ್ತು ಸರ್ಕಾರ ಕೊಟ್ಟ ಭರವಸೆಗಳನ್ನೇ ಮರೆತು ನಿದ್ರೆಯ ಮಬ್ಬಿನಲ್ಲಿ ಇರುವಂತೆ ನಡೆದುಕೊಳ್ಳುತ್ತಿದೆ. ಈ ನಡೆಯಿಂದ ನೌಕರರು ಕಳೆದ 2 ವರ್ಷದಿಂದಲೂ ಸಮಸ್ಯೆ ಎದುರಿಸುವಂತಾಗಿದೆ.

ಹೀಗಾಗಿ ಸರ್ಕಾರ ಮತ್ತು ಸಾರಿಗೆ ಸಚಿವರು ನಮಗೆ ಶಾಶ್ವತ ಪರಿಹಾರ ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಪಟ್ಟು ಹಿಡಿದು ಹೋರಾಡುತ್ತಿದ್ದಾರೆ. ಆದರೆ, ನೌಕರರ ಹೋರಾಟಕ್ಕೆ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ ಇದು ರಾಜ್ಯದಲ್ಲರಿವ ಆಡಳಿತ ಸರ್ಕಾರದ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.

ಸಾವಿರಾರು ಕೋಟಿ ರೂಗಳನ್ನು ಬೇಡದ ಹಲವು ಕಾಮಗಾರಿಗಳಿಗೆ ಖರ್ಚು ಮಾಡುವ ಸರ್ಕಾರ ನೌಕರರಿಗೆ ಬೇಕಿರುವ 1-2 ಸಾವಿರ ಕೋಟಿ ರೂ.ಗಳನ್ನು ನೀಡುವುದಕ್ಕೆ ಮೀನಮೇಷ ಎಣಿಸುತ್ತಿರುವುದು ಏಕೆ ಎಂಬ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ. ಆ ಕಮಿಟಿ ರಚಿಸುತ್ತೇವೆ. ಈ ಕಮಿಟಿ ರಚಿಸುತ್ತೇವೆ ಎಂದು ಹೇಳಿಕೊಂಡು ಯಾವುದೇ ಒಂದು ಕಮಿಟಿ ಮಾಡಿ ಅದಕ್ಕೆ ನೂರಾರು ಕೋಟಿ ರೂ.ಗಳನ್ನು ವ್ಯಯಿಸಿ ಹಾಳುಮಾಡಿ ಬಳಿಕ ಚುನಾವಣೆ ಬಂತು ಮುಂದಿನ ಬಾರಿ ನೋಡೋಣ ಎಂದು ಜಾರಿಕೊಳ್ಳುವ ನಾಟಕ.

ಇದು ಈ ಹಿಂದಿನಿಂದಲೂ ನಮ್ಮನ್ನು ಆಳುತ್ತಿರುವ ಸರ್ಕಾರಗಳು ಪಾಲಿಸಿಕೊಂಡು ಬರುತ್ತಿರುವ ಪರಿ. ಅದನ್ನಿ ಈ ಬಿಜೆಪಿ ನೇತೃತ್ವದ ಸರ್ಕಾರ ಕೂಡ ಮುಂದುವರಿಸಿಕೊಂಡು ಬರುತ್ತಿದೆ. ಅದರೆ ಈ ಸರ್ಕಾರಕ್ಕೂ ಜವಾಬ್ದಾರಿ ಇಲ್ಲ ಇದು ಕೂಡ ಮೂರನ್ನು ಬಿಟ್ಟ ಸರ್ಕಾರ ಎಂದು ಸಾಬೀತು ಮಾಡಿಕೊಳ್ಳುತ್ತಿದೆ.

ಈ ಎಲ್ಲವನ್ನು ಬಿಟ್ಟು ಸಾರಿಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ ಪ್ರಕರಣಗಳನ್ನು ಯಾವುದೇ ಶಿಕ್ಷೆ ದಂಡ ಮತ್ತು ನಿಂಬಂಧನೆಗಳನ್ನು ವಿಧಿಸದೆ ಕೂಡಲೆ ಪುನರ್ ನೇಮಕ ಮಾಡಿಕೊಳ್ಳಲು ಮುಂದಾಗಬೇಕಿದೆ.

ಇನ್ನೂ ನನೆಗುದಿಗೆ ಬಿದ್ದಿರುವ ಮಾತೃ ಘಟಕಗಳಿಗೆ ವರ್ಗಾವಣೆ ಮಾಡುವುದು ಹಾಗೂ 22 ಮತ್ತು 23 ರ ಅಡಿಯಲ್ಲಿ ನೀಡಲಾದ ಎಲ್ಲ ಆಪಾದನಾ ಪತ್ರಗಳು ಮತ್ತು ಮುಷ್ಕರದ ಸಮಯದಲ್ಲಿ ದಾಖಲಿಸಿದ ಎಲ್ಲ ಪೊಲೀಸ್ ಪ್ರಕರಣಗಳು ಹಿಂಪಡೆದು ಏ.6-2021 ರ ಯಥಾಸ್ಥಿತಿ ಕಾಪಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಿದೆ ಈ ಸರ್ಕಾರ.

ಇದಿಷ್ಟೇ ಅಲ್ಲದೆ ಈ ಮೊದಲೇ ಹೇಳಿದಂತೆ ಡಿಸೆಂಬರ್-2020 ರ ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸರಿಸಮಾನ ವೇತನವನ್ನು ವೇತನ ಆಯೋಗದ ಮಾದರಿಯಲ್ಲಿ ನೀಡುವುದಾಗಿ ನೀಡಿದ ಲಿಖಿತ ಭರವಸೆಯನ್ನು ಈಡೇರಿಸಬೇಕಿದೆ.

ಅತಿ ಮುಖ್ಯವಾಗಿ ಆಗಲೇ ಬೇಕಿರುವುದರಲ್ಲಿ ಸಾರಿಗೆ ನಿಗಮಗಳಲ್ಲಿ ಕೂಡಲೇ ಕಾರ್ಮಿಕ ಸಂಘಗಳ ಚುನಾವಣೆ ನಡೆಸಬೇಕಿದೆ. ಅಧಿಕಾರಿಗಳಿಂದ ಆಗುತ್ತಿರುವ ತಾರತಮ್ಯ ಧೋರಣೆ ನಿವಾರಿಸಲು ಈ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ.

ಈ ಹಿಂದಿನಿಂದಲೂ ಎಲ್ಲ ಬೇಡಿಕೆಗಳನ್ನು ಇಟ್ಟು ಈಡೇರಿಸಬೇಕು ಎಂದು ನೌಕರರು ಮನವಿ ಸಲ್ಲಿಸಿಕೊಂಡು ಬಂದಿದ್ದಾರೆ. ಹೀಗಾಗಿ ಮುಂದಿನ ಕೆಲವೇ ಕೆಲವು ದಿನಗಳಲ್ಲಿ ಬರಲಿರುವ ಈ ಚುನಾವಣೆ ಸಮಯದಲ್ಲಾದರೂ ನೌಕರರಿಗೆ ಒಂದು ಶಾಶ್ವತ ಪರಿಹಾರ ನೀಡಲು ಈ ಸರ್ಕಾರ ಮುಂದಾಗಬೇಕಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ