NEWSನಮ್ಮರಾಜ್ಯಬೆಂಗಳೂರು

ಸಾರಿಗೆ ಅಧಿಕಾರಿಗಳ ದ್ವಂದ್ವ ನಡೆಗೆ ನೌಕರರು ಕಿಡಿ: ಸಿಪಿಐ ಪಕ್ಷದ ಅಭ್ಯರ್ಥಿಪರ ಮತಯಾಚನೆ – ಆದರೂ ಶಿಕ್ಷೆಯಿಂದ ಪಾರು..!?

ವಿಜಯಪಥ ಸಮಗ್ರ ಸುದ್ದಿ

ಬಳ್ಳಾರಿ: ಸಾರಿಗೆ ನಿಗಮಗದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ- ಸಿಪಿಐ ಪಕ್ಷದ ಅಭ್ಯರ್ಥಿಪರ ಮತಯಾಚನೆ ಮಾಡಿದರೂ ಅಮಾನತಾಗದ ನೌಕರರು

ಬಳ್ಳಾರಿ: ಸಾರಿಗೆ ನಿಗಮಗದ ಯಾವುದೇ ನೌಕರರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರ ಮತಯಾಚನೆ, ಪ್ರಚಾರ ಮಾಡುವುದು ಕಂಡು ಬಂದರೆ ಅವರನ್ನು ಕೂಡಲೇ ಅಮಾನತು ಮಾಡಿ ವಿಚಾರಣೆಗೊಳಪಡಿಸುವ ನಿಯಮವಿದೆ. ಈ ನಿಯಮವನ್ನು ಕೆಲವರಿಗಷ್ಟೇ ಅನ್ವಯವಾಗಿಸಿ ಇನ್ನು ಕೆಲ ನೌಕರರನ್ನು ರಕ್ಷಿಸಲು ಅಧಿಕಾರಿಗಳೆ ಮುಂದಾದಂತೆ ಕಾಣಿಸುತ್ತಿದೆ.

ಇದಕ್ಕೆ ತಾಜಾ ನಿರ್ದಶನ ಎಂಬಂತೆ, ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಪರ ಮತಯಾಚನೆ ಮಾಡಿದ ಆರೋಪದ ಮೇರೆಗೆ ಯಾದಗಿರಿ ವಿಭಾಗದ ಚಾಲಕ ಕಂ ನಿರ್ವಾಹಕ ಸೂರ್ಯ ಪ್ರಕಾಶ್‌ ಎಂಬುವರನ್ನು ಕೇವಲ 8 ಗಂಟೆಯೊಳಗೆ ಅಮಾನತು ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶವನ್ನು ಎಲ್ಲರೂ ಪಾಲಿಸಲೇ ಬೇಕು. ಆದರೆ, ಅದರಂತೆ ಬಳ್ಳಾರಿ ವಿಭಾಗದ ಸಾರಿಗೆ ಸಂಸ್ಥೆಯ ನೌಕರರು ಮತ್ತು ಎಐಟಿಯುಸಿ ಫೆಡರೇಶನ್‌ ಪದಾಧಿಕಾರಿ ಜಿ. ಶಿವಕುಮಾರ್ ಸಾರಿಗೆ ಸಂಸ್ಥೆಯ ನೌಕರ ಮತ್ತು ಸಂಘಟನೆಯ ಮುಖಂಡ ಸಿಪಿಐ ಪಕ್ಷದ ಅಭ್ಯರ್ಥಿಯೊಡನೆ ಮತ ಪ್ರಚಾರದಲ್ಲಿ ತೊಡಗಿರುವ ಪ್ರತ್ಯಕ್ಷ ಪುರಾವೆ ಇದ್ದರೂ ಕೂಡ ಅವರ ವಿರುದ್ಧ ಈವರೆಗೂ ಏಕೆ ಕ್ರಮ ಜರುಗಿಸಿಲ್ಲ ಎಂದು ನೌಕರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಲ್ಯಾಣ ಸಾರಿಗೆ ಸಂಸ್ಥೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ, ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿದ ಕೇವಲ 8 ಗಂಟೆಯಲ್ಲಿ ಒಬ್ಬ ನೌಕರನ ಅಮಾನತು ಮಾಡುತ್ತೀರಿ. ಆದರೆ AITUC ಬಳ್ಳಾರಿ ವಿಭಾಗದ ಮುಖಂಡರು ಸಿಪಿಐ ಪಕ್ಷದ ಮಾತಯಾಚನೆ ವೇಳೆ ಸಿಕ್ಕ ಭಾವ ಚಿತ್ರಗಳು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲಾತಣಗಳಲ್ಲಿ ಹರಿದಾಡುತ್ತಿದ್ದರು ಏಕೆ ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

ಅಲ್ಲದೆ ಮೇಲಧಿಕಾರಿಗಳ ಈ ದ್ವಂದ್ವ ನಿಲುವು ಸರಿಯಲ್ಲ ಎಲ್ಲ ನೌಕರರನ್ನು ಸರಿ ಸಮಾನವಾಗಿ ಕಾಣಬೇಕು ಎಐಟಿಯುಸಿಯಲ್ಲಿ ಈ ನೌಕರರು ಇದ್ದಾರೆ ಎಂಬ ಕಾರಣಕ್ಕೆ ಅವರು ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿಪರ ಪ್ರಚಾರ ಮಾಡಬಹುದೇ ಎಂದು ಪ್ರಶ್ನಿಸುತ್ತಿರುವ ನೌಕರರು ಈ ರೀತಿಯ ನಡೆಯನ್ನು ಅಧಿಕಾರಿಗಳು ಬದಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ನಾವು ಕೂಡ ಚುನಾವಣೆ ಆಗುವವರೆಗೂ ಈ ಬಗ್ಗೆ ಕಾದು ನೋಡುತ್ತೇವೆ ಅಷ್ಟರ ಒಳಗೆ ಅಧಿಕಾರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ಆ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕೋರ್ಟ್‌ ಮೊರೆ ಹೋಗುತ್ತೇವೆ ಕೋರ್ಟ್‌ನಲ್ಲಿ ಅವರು ಈ ಬಗ್ಗೆ ಸಮಜಾಯಿಷಿ ನೀಡಲಿ ಎಂದು ಕಿಡಿಕಾರಿದ್ದಾರೆ.

Leave a Reply

error: Content is protected !!
LATEST
ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು?