ಮೈಸೂರು: ನಾನು ಚಿಕ್ಕವನಾಗಿದ್ದಾಗ ನಮ್ಮ ಅಪ್ಪ ದಸರಾಗೆ ಕರೆದುಕೊಂಡು ಬರುತ್ತಿದ್ದರು. ನನ್ನ ಅಪ್ಪನ ಹೆಗಲ ಮೇಲೆ ಕೂತು ನಾನು ಜಂಬೂಸವಾರಿ ನೋಡುತ್ತಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಪ್ಪನೊಂದಿಗೆ ಬರುತ್ತಿದ್ದ ದಸರಾ ನೆನಪನ್ನು ಮೆಲುಕು ಹಾಕಿದರು.
vijayapatha.in - ವಿಜಯಪಥ.ಇನ್ ನಿಮಗೆ ವಿಶ್ವಾಸನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅನಿಸಿದರೆ ನಮಗೆ ಆರ್ಥಕವಾಗಿ ಬಲ ನೀಡಿ. ಇನ್ನಷ್ಟು ಸತ್ಯನಿಷ್ಠ ವರದಿಗಳನ್ನು ಮಾಡುವುದಕ್ಕೆ ಬೆಂಬಲ ನೀಡಿ. ಕನಿಷ್ಠ 100 ರೂ. ಒಮ್ಮೆಗೆ ಹಾಕಿ. ನಮ್ಮನ್ನು ಪ್ರೋತ್ಸಾಹಿಸಿ.
ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಆಗ ಐದಾರು ವರ್ಷ ಇರಬಹುದು. ನನ್ನ ಅಪ್ಪನ ಹೆಗಲ ಮೇಲೆ ಕುಳಿತು ದಸರಾ ನೋಡಿದ್ದ ನೆನಪು ಇದ್ದೆ. ನೋಡು ನೋಡು ಮೈಸೂರು ಮಹಾರಾಜ ಎನ್ನುತ್ತಿದ್ದರು. ನನಗೆ ಕಾಣದಿದ್ದರೂ ನಮಸ್ಕಾರ ಮಾಡಿದ್ದೆ. ಮೈಸೂರಿಗೆ ಓದಲು ಬಂದಾಗ ಪ್ರತಿ ದಸರಾದಲ್ಲೂ ತಪ್ಪದೇ ವಸ್ತು ಪ್ರದರ್ಶನಕ್ಕೆ ಹೋಗುತ್ತಿದ್ದೆ. ದಸರಾ ಮೂಲಕ ನಾಡಿನ ಕಲೆ, ಸಂಸ್ಕೃತಿಯನ್ನು ದೇಶಕ್ಕೆ ತಿಳಿಸುತ್ತಿದ್ದೇವೆ ಎಂದರು.
ಇಡೀ ಜಗತ್ತಿಗೆ ಕನ್ನಡ ನಾಡಿನ ವೈಭೋಗ ತಿಳಿಸುವ ಕಾರ್ಯ ದಸರಾ ಮೂಲಕ ಆಗುತ್ತಿದೆ. ಕಲೆ, ಸಂಸ್ಕೃತಿ, ಸಂಪ್ರದಾಯ ನಮ್ಮ ನಾಡಿನಲ್ಲಿ ಶ್ರೀಮಂತವಾಗಿದೆ. ಕರ್ನಾಟಕ ಜನ ಸುಸಂಸ್ಕೃತ ಜನ. ನಮ್ಮಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಿದೆ. ಪರಸ್ಪರ ಪ್ರೀತಿ, ವಿಶ್ವಾಸ, ಗೌರವದಿಂದ ಬದುಕುವುದು ಮುಖ್ಯ. ದೇಶ ಮತ್ತು ರಾಜ್ಯಕ್ಕೆ ಇದು ತುಂಬಾ ಅಗತ್ಯ ಎಂದರು.
ನಮ್ಮ ರಾಜ್ಯದಲ್ಲಿ ಸಂಪತ್ತು, ಅಧಿಕಾರ ಎಲ್ಲ ವರ್ಗದ ಜನರಿಗೂ ಹಂಚಿಕೆ ಆಗಬೇಕು. ಎಲ್ಲ ವರ್ಗದ ಜನರಿಗೂ ಎಲ್ಲ ಅವಕಾಶಗಳು ಸಿಗಬೇಕು. ಅದು ನಿಜವಾದ ಸಾಮಾಜಿಕ ನ್ಯಾಯ. ಸರ್ಕಾರ ಐದು ಗ್ಯಾರಂಟಿಗಳನ್ನು ಬದ್ಧತೆಯಿಂದ ಘೋಷಿಸಿ ಜಾರಿ ಮಾಡುತ್ತಿದೆ. ಐದನೇ ಗ್ಯಾರಂಟಿ ಮುಂದಿನ ಜನವರಿಯಲ್ಲಿ ಮಾಡುತ್ತೇವೆ. ದಸರಾ ಮಹತ್ವಕ್ಕೆ ಕುಂದು ಬಾರದಂತೆ ಸಾಂಪ್ರದಾಯಿಕ ದಸರಾ ಮಾಡುತ್ತಿದ್ದೇವೆ ಎಂದು ಹೇಳಿದರು.
42 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. 30 ಸಾವಿರ ಕೋಟಿ ರೂ. ನಷ್ಟವಾಗಿದೆ. 4,800 ಕೋಟಿ ರೂ. ಪರಿಹಾರವನ್ನು ಕೇಂದ್ರದಿಂದ ಕೇಳಿದ್ದೇವೆ. ಈಗ 116 ತಾಲೂಕು ಬರಪೀಡಿತವಾಗಿದೆ. ಕೇಂದ್ರದ ಬರುವ ಹಣದಲ್ಲೇ ಎಲ್ಲ ಪರಿಹಾರ ಕೊಡಲು ಆಗಲ್ಲ. ಈ ವರ್ಷ ವಿಶೇಷ ಎಂದರೆ ಹಸಿರು ಬರ ಬಂದಿದೆ. ನೋಡಲು ಹಸಿರು ಕಾಣಿಸುತ್ತೆ. ಆದರೆ ಬೆಳೆ ಬಂದಿರಲ್ಲ. ಹಿಂಗಾರು ಮಳೆ ಉತ್ತಮವಾಗಲಿ ಅಂತಾ ಚಾಮುಂಡಿ ತಾಯಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದರು.
![](https://vijayapatha.in/wp-content/uploads/2024/02/QR-Code-VP-1-1-300x62.png)