NEWSದೇಶ-ವಿದೇಶನಮ್ಮಜಿಲ್ಲೆ

ಈಗಲೂ ಸಾರಿಗೆ ನೌಕರರ ದಿಕ್ಕು ತಪ್ಪಿಸುತ್ತಿರುವ ಕೆಲ ಸಂಘಟನೆಗಳು : ನೌಕರರ ಪರ ಸಂಘಟನೆ ಬಗ್ಗೆ ತಪ್ಪು ಮಾಹಿತಿ ನೀಡುವ ಯತ್ನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರು 2020 ಮತ್ತು 2021ರಲ್ಲಿ ಸುಮಾರು 24 ದಿನಗಳ ಕಾಲ ಮುಷ್ಕರ ಮಾಡಿದರು. ಕಾರಣ ಎಲ್ಲರಿಗೂ‌ ತಿಳಿದಿರುವ ಹಾಗೆ ಸರ್ಕಾರಿ ನೌಕರರಿಗೂ ಹಾಗೂ ಸಾರಿಗೆ ಸಂಸ್ಥೆ ನೌಕರರಿಗೂ ಇರುವ ಸಂಬಳದ ವ್ಯತ್ಯಾಸ ‌ಎಂದು.

ಇದು ಶಾಶ್ವತವಾಗಿ ನಿವಾರಣೆ ಆಗಬೇಕು ಎಂದು ನೌಕರರ ಕೂಟ ಎರಡು ಬಾರಿ ಮುಷ್ಕರ ಹೂಡಿತು. ಆದರೆ ಅವರ ಬೇಡಿಕೆ ಬೇಡಿಕೆಯಾಗಿಯೇ ಈಗಲೂ ಉಳಿಯದೇ. ಹೀಗಾಗಿ ಪರೋಕ್ಷವಾಗಿ ಸಾರಿಗೆ ಅಧಿಕಾರಿಗಳಿಗೆ, ಪ್ರತ್ಯಕ್ಷವಾಗಿ ಹೋರಾಟ ಮಾಡಿದ ನೌಕರ ವರ್ಗಕ್ಕೆ ಇನ್ನೂ ಏನೂ ದಕ್ಕಿಲ್ಲ. ಬದಲಾಗಿ ನೌಕರರಿಗೆ ಮಾತ್ರ ಅನೇಕ ಶಿಕ್ಷೆಗಳನ್ನು ನೀಡಲಾಗಿದೆ.

ಎರಡು ಬಾರಿ ಯಶಸ್ವಿ ಮುಷ್ಕರ ಮಾಡಿದರೂ ಸಹ ನೌಕರ ವರ್ಗಕ್ಕೆ ಎಳ್ಳಷ್ಟು ಅನುಕೂಲವಾಗಲಿಲ್ಲ. ಬದಲಿಗೆ ಒತ್ತಡ, ಹಿಂಸೆಗಳು ಮತ್ತಷ್ಟು ಈ ವರ್ಗ ಅನುಭವಿಸುವಂತಾಯಿತು. ಹಲವು ಸಾವು-ನೋವುಗಳಂತಹ ಘಟನೆಗಳು ನಡೆದವು.

ಹಾಗಾದರೆ ಮುಷ್ಕರ ಯಶಸ್ವಿಯಾದರೂ ಸಹ ಫಲ ಏಕೆ ದೊರೆಯಲಿಲ್ಲ ಎಂದು ಕಾರಣ ಹುಡುಕುತ್ತಾ ಹೋದರೆ ಮುಂಚೂಣಿ ವಹಿಸಿದವರು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಎಡವಿದ್ದರಾ ಎಂಬ ಪ್ರಶ್ನೆ ಮೂಡುತ್ತಿದೆ. ನಾನೇ ನನ್ನಿಂದಲೇ ಎಂಬ ಹಮ್ಮಿನಿಂದ ಈರೀತಿ ಆಗಿದೆಯೇ ಎಂದು ನೌಕರರಲ್ಲೇ ಗೊಂದವಿದೆ. ಈ ಗೊಂದಲ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತಿವೆ ಕೆಲ ಸಂಘಟನೆಗಳು.

2021ರಲ್ಲಿ ನಡೆದ ಮುಷ್ಕರದ ಮುಂದಾಳತ್ವ ವಹಿಸಿದ್ದವರಿಗೆ ಸರಿಯಾದ ಕಾನೂನಿನ ತಿಳಿವಳಿಕೆ ಇಲ್ಲ. ಜತೆಗೆ ಅನ್ಯ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋದ್ದರಿಂದ ಮುಷ್ಕರ ಫಲಕೊಡುವ ಬದಲಿಗೆ ವೈಫಲ್ಯದ ಹಾದಿ ಹಿಡಿಯಿತು ಎಂದು ಬೊಬ್ಬೆ ಹೊಡೆಯುತ್ತಿವೆ ಕೆಲ ಸಂಘಟನೆಗಳು. ಆದರೆ ಇಲ್ಲಿ ಸತ್ಯವನ್ನು ಮಾರಮಾಚುವ ಯತ್ನವು ನಡೆದಿದೆ. ಕಾರಣ ಎಲ್ಲ ಸಂಘಟನೆಗಳ ಮುಖಂಡರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿ ಬೇಡಿಕೊಂಡಿರುವ ಬಗ್ಗೆ ಮಾಹಿತಿಯೂ ಇದೆ. ಆದರೆ ಈಗ ಏಕೆ ಈ ರೀತಿ ಸುಳ್ಳು ಹೇಳಿ ದಾರಿಸುತ್ತಿದ್ದಾರೆ? ಗೊತ್ತಿಲ್ಲ.

ಇನ್ನು ಶತಮೂರ್ಖರ ರೀತಿ ಮಾತನಾಡುತ್ತಿರುವ ಕೆಲ ಸಂಘಟನೆಗಳ ಬಾಲಂಗೋಷಿಗಳು ಮುಷ್ಕರದ ವೇಳೆ ಸರ್ಕಾರ ಮಾತುಕತೆಗೆ ಕರೆದರೂ ಹೋಗದೆ ಸಂದಾನ ಪ್ರಕ್ರಿಯೆಯ ಬಾಗಿಲನ್ನು ಸ್ವಯಂ ಮುಚ್ಚಿಕೊಂಡಿದ್ದರು ಎಂದು ಹೇಳುತ್ತಿದ್ದಾರೆ. ಆದರೆ ಅಂದಿನ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಮಾತುಕತೆಗೆ ಬನ್ನಿ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದರು ಅಷ್ಟ, ಎಲ್ಲಿಗೆ ಬರಬೇಕು ಎಷ್ಟು ಗಂಟೆಗೆ ಬರಬೇಕು ಎಂಬುದನ್ನು ಹೇಳಿದ್ದರಾ? ಅಥವಾ ಮುಷ್ಕರ ನಿರತ ಮುಖಂಡರನ್ನು ಭೇಟಿ ಮಾಡಲು ಸರ್ಕಾರದ ಪ್ರತಿನಿಧಿಯಾಗಿ ಯಾವ ಅಧಿಕಾರಿಯಾದರೂ ಬಂದಿದ್ದರಾ? ಇಲ್ಲ. ಆದರೂ ಏಕೆ ಗೂಬೆಕೂರಿಸುವ ಕೆಲಸ ಮಾಡುತ್ತಿದ್ದಾರೆ ಈ ಬಾಲಂಗೋಷಿಗಳು ಗೊತ್ತಿಲ್ಲ.

2021ರಲ್ಲಿ ನಡೆದ ಮುಷ್ಕರಕ್ಕೆ ನೌಕರ ವರ್ಗದ ಅಪಾರ ಬೆಂಬಲಕ್ಕೆ ಕಾರಣವೇನು?? ಶಾಶ್ವತ ಪರಿಹಾರ!!. ನಮ್ಮನ್ನೂ ಸರ್ಕಾರಿ ನೌಕರರೆಂದು ಮಾಡಿ ಎಂಬ ಬೇಡಿಕೆ ಸಫಲವಾದರೆ ನಾವು ನೆಮ್ಮದಿಯಿಂದ ಜೀವನ ಮಾಡಬಹುದು ಎಂಬ ಮನದಾಸೆ. ಆದರೆ ಅದನ್ನು ಈಡೇರಿಸಿಕೊಳ್ಳುವುದಕ್ಕೆ ಈ ಕೆಲ ಸಂಘಟನೆಗಳ ಪ್ರಮುಖರೆನಿಸಿಕೊಂಡವರೆ ಸರ್ಕಾರದ ಕಿವಿ ಹಿಂಡಿ ನೌಕರರಿಗೆ ಸೌಲಭ್ಯ ಒದಗಿಸಿಕೊಡಿ ಎಂದು ಹೇಳುವ ಬದಲಿಗೆ ನೌಕರರ ತುಳಿದಾಳುವುದು ಹೇಗೆ ಎಂದು ಹೇಳಿಕೊಟ್ಟು ಮುಷ್ಕರದಲ್ಲಿ ಭಾಗಿಯಾಗದವರನ್ನು ವಜಾ ಮಾಡಿಸಿ ಒಂದು ರೀತಿ ವಿಕೃತಿ ಮೆರೆದು ಕೇಕೆಹಾಕಿದರು.

ಈ ಸಮಯದಲ್ಲಿ ಸಂಬಳದ ವ್ಯತ್ಯಾಸದ ಹಲವಾರು ಚಾರ್ಟ್‌ಗಳನ್ನು ಚಂದ್ರು ಬಿಡುಗಡೆ ಮಾಡಿದರು. ಆದರೆ ಅವು ಬಹಳಷ್ಟು ತಪ್ಪು ಮಾಹಿತಿ ಇವೇ ಎಂದು ಆ ಕೆಲ ಸಂಘಟನೆಗಳ ಪದಾಧಿಕಾರಿಗಳು ಈಗಲೂ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಮಾಡುವುದರಿಂದ ಅವರಿಗೆ ಏನು ಲಾಭ ಎಂಬುವುದು ತಿಳಿಯುತ್ತಿಲ್ಲ. ನೌಕರರಿಗೆ ಸೌಲಭ್ಯಕೊಡಿಸಬೇಕಾದವರೆ ಈ ರೀತಿ ದಿಕ್ಕು ತಪ್ಪಿಸುವ ಕೆಲಸ ಏಕೆ ಮಾಡುತ್ತಿದ್ದಾರೋ ಗೊತ್ತಿಲ್ಲ.

ಒಟ್ಟಿನಲ್ಲಿ ಒಂದು ಕಾಲಘಟದವರೆಗೂ ತಕ್ಕ ಮಟ್ಟಿಗೆ ಗೌರವಯುತ ಜೀವನ ಸಾಗಿಸುತ್ತಿದ್ದ ಈ ಸಾರಿಗೆ ನೌಕರರನ್ನು ಈ ಮುಷ್ಕರದ ಬಳಿಕ ಕೆಲಸಂಘಟನೆಗಳ ಮುಖಂಡರು ಮತ್ತು ಅವರ ಬಾಲಂಘೋಷಿಗಳು ಸರ್ಕಾರ ಮತ್ತು ಅಧಿಕಾರಿಗಳ ದಾರಿ ತಪ್ಪಿಸಿ ಹಲವಾರು ಶಿಕ್ಷೆಗಳನ್ನು ಕೊಡಿಸುವ ಮೂಲಕ ಸಮಾಜದಲ್ಲಿದ್ದ ಗೌರವವನ್ನು ಕಳೆದುಕೊಳ್ಳುವಂತೆ ಮಾಡಿದ್ದಾರೆ. ಈಗಲೂ ಅಲ್ಲಲ್ಲಿ ಮಾಡುತ್ತಲೇ ಇದ್ದಾರೆ ಎಂದರೆ ತಪ್ಪಾಗಲಾರದು.

ಇನ್ನು ಯಾವುದೇ ಕಾರಣಕ್ಕೂ ನಮ್ಮ ಬೇಡಿಕೆಯಲ್ಲಿ ಬದಲಾವಣೆ ಇಲ್ಲ. ಹೀಗಾಗಿ ನಾವು ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುವವರೆಗೂ ನಮ್ಮ ಹೋರಟ ನಿರಂತರವಾಗಿರುತ್ತದೆ ಎಂದು ಕೂಟ ಅಧ್ಯಕ್ಷ ಚಂದ್ರಶೇಖರ್‌ ಹೇಳಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ