ಕೃಷಿನಮ್ಮರಾಜ್ಯವಿಜ್ಞಾನ

ಉದ್ಯೋಗಕ್ಕೆ ವಿಪುಲ ಅವಕಾಶ ಕಲ್ಪಿಸಿದ ಜಿಲ್ಲೆಯ ಜವಳಿ ಉದ್ಯಮ

ಉದ್ಯಮವಾಗಿ ಹೊರಹೊಮ್ಮಿದೆ ಉದ್ಯೋಗ ದೊರಕಿಸಿಕೊಡುವ ಜವಳಿ ಕ್ಷೇತ್ರ

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ:   ಜಿಲ್ಲೆಯಲ್ಲಿ ಕೈಮಗ್ಗ ಮತ್ತು ಜವಳಿ ಉದ್ಯಮ  ಯುವಜನತೆಗೆ, ಕೌಶಲ್ಯ ಪಡೆದವರಿಗೆ ಉದ್ಯೋಗ ಸೃಷ್ಟಿಸಲು ವಿಪುಲ ಅವಕಾಶ ಕಲ್ಪಿಸುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮಹತ್ವದ ಕೊಡುಗೆ ನೀಡುತ್ತಿದೆ.

ಕೈಮಗ್ಗ ವಸ್ತ್ರೋದ್ಯಮ ಒಂದು ಪ್ರಾಚೀನ ಕಾಲದ ಸಾಂಪ್ರದಾಯಿಕ ತಾಂತ್ರಿಕತೆ ಹಾಗೂ ವಿನ್ಯಾಸ ಒಳಗೊಂಡಿದ್ದು, ಕೃಷಿಯ ನಂತರ ಅತಿ ಹೆಚ್ಚು ಉದ್ಯೋಗ ದೊರಕಿಸಿಕೊಡುವ ಕ್ಷೇತ್ರ ಜವಳಿ ಉದ್ಯಮವಾಗಿ ಹೊರಹೊಮ್ಮಿದೆ.

ಕೈಮಗ್ಗ ನೇಕಾರಿಕೆ, ವಿದ್ಯುತ್ ಮಗ್ಗ ನೇಕಾರಿಕೆ, ಸಿದ್ಧ ಉಡುಪು ಉತ್ಪಾದನೆ, ಹತ್ತಿ ಜಿನ್ನಿಂಗ್, ಪ್ರೆಸ್ಸಿಂಗ್ ಚಟುವಟಿಕೆಗಳು ಚಾಲನೆಯಲ್ಲಿದ್ದು, ಇವು ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಜಿಲ್ಲೆಯಲ್ಲಿ ಕೈಮಗ್ಗ ಗಣತಿ ಪ್ರಕಾರ 4975 ನೇಕಾರ ಕುಟುಂಬಗಳಿದ್ದು, ನೇಕಾರರು ಕಂಬಳಿ, ರೇಷ್ಮೆ, ಹತ್ತಿ ಬಟ್ಟೆಗಳ ಉತ್ಪಾದನೆಯಲ್ಲಿ ತೊಡಗಿದ್ದಾರೆ. 4975 ನೇಕಾರರಲ್ಲಿ 4058 ಕಂಬಳಿ ನೇಕಾರರು, ಉಣ್ಣೆ ನೂಲುವವರಿದ್ದು, ಉಳಿದ 917 ಮಂದಿ ರೇಷ್ಮೆ ಮತ್ತು ಹತ್ತಿ ಕೈಮಗ್ಗ  ನೇಕಾರರಾಗಿದ್ದಾರೆ. ರೇಷ್ಮೆ ಸೀರೆ ನೇಕಾರಿಕೆ ಮತ್ತು ಉಣ್ಣೆ ಕಂಬಳಿ ನೇಕಾರಿಕೆ ಚಟುವಟಿಕೆಗಳು ಹೆಚ್ಚಾಗಿ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕಿನ ಗ್ರಾಮಗಳಲ್ಲಿ ಕಾಣಬಹುದಾಗಿದೆ.

ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ ಉಣ್ಣೆ ನೇಕಾರರು ಹೆಚ್ಚಿನ ಪ್ರಮಾಣದಲ್ಲಿದ್ದು, ವಿವಿಧ ನಮೂನೆಯ ಉಣ್ಣೆ ಕಂಬಳಿಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೇ ಚಳ್ಳಕೆರೆಯಲ್ಲಿ ಪ್ರತಿ ಭಾನುವಾರ ಮಾರುಕಟ್ಟೆಯಲ್ಲಿ ರೂ. 35 ರಿಂದ 40 ಲಕ್ಷದವರೆಗೂ ಉಣ್ಣೆ ಕಂಬಳಿಗಳು ಮಾರಾಟ ವಹಿವಾಟು ನಡೆಯುತ್ತಿದೆ. ನೆರೆಯ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ವ್ಯಾಪಾರಸ್ಥರು ಕಂಬಳಿ ಖರೀದಿಗಾಗಿ ಬರುತ್ತಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಹತ್ತಿ-16, ಉಣ್ಣೆ-47, ರೇಷ್ಮೆ-14 ಹಾಗೂ ಒಂದು ವಿದ್ಯುತ್ ಕೈಮಗ್ಗ ನೇಕಾರರ ಸಂಘ ಸೇರಿ ಒಟ್ಟು 77 ನೇಕಾರ ಸಹಕಾರ ಸಂಘಗಳಿದ್ದು, ಈ ಪೈಕಿ 50 ಕೈಮಗ್ಗ ನೇಕಾರ ಸಹಕಾರ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.

ಸಿದ್ಧ ಉಡುಪು ಘಟಕಗಳಲ್ಲಿ ಉದ್ಯೋಗ

ಮೆ. ಅರವಿಂದ್ ಲಿಮಿಟೆಡ್ ಸಿದ್ದಉಡುಪು ಘಟಕವು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 1200  ಯುವಕ ಯುವತಿಯರಿಗೆ ಉದ್ಯೋಗ ನೀಡಿದೆ. ಹಾಗೆಯೇ ಹಿರಿಯೂರು ಹತ್ತಿರದ ಮೆ. ಬೈನರಿ ಅಪೆರೆಲ್ ಪಾರ್ಕ್ ಲಿ, ಹೆಸರಿನ ಗ್ರೀನ್ ಫೀಲ್ಡ್ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆಯಾಗಿದ್ದು, ಪಾರ್ಕ್‍ನಲ್ಲಿ ಗ್ಲೋಬಲ್ ಮೋಡ್ ಮತ್ತು ಎಕ್ಸ್‍ಸರೀಸ್ ಕಂಪನಿಯವರು ಸಿದ್ದ ಉಡುಪು ಘಟಕ ಸ್ಥಾಪಿಸಿ 1400 ಮಂದಿಗೆ ಉದ್ಯೋಗ ನೀಡಿದೆ.

26 ಲಕ್ಷ  ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ

ಜಿಲ್ಲೆಯ ಪಾರಂಪರಿಕ ಕೈಮಗ್ಗ ಸೀರೆಗಳಾದ ಮೊಳಕಾಲ್ಮೂರು ಸೀರೆಗಳನ್ನು ಪ್ರಾದೇಶಿಕ ಹೆಗ್ಗುರುತಾಗಿ ಮಾನ್ಯತೆ ನೀಡಿ, ಮೊಳಕಾಲ್ಮೂರು ಸೀರೆಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಪ್ರಸಕ್ತ ಸಾಲಿನಲ್ಲಿ 26 ಲಕ್ಷ  ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕೈಮಗ್ಗ ಮತ್ತು ಜವಳಿ ಉದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಉದ್ಯೋಗ ಸೃಷ್ಟಿಗೆ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ.

ಎನ್.ಟಿ.ನೆಗಳೂರು ಕೈಮಗ್ಗ ಜವಳಿ ಇಲಾಖೆಯ ಉಪನಿರ್ದೇಶಕ

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...