ಲಿಂಗಸುಗೂರು : ಎತ್ತಿಗೆ ಜ್ವರ ಬಂದರೆ ಕೊಟ್ಟಿಗೆಗೆ ಬರೆ ಹಾಕು ಎಂಬಂತೆ ಸಾರಿಗೆ ನಿಗಮಗಳ ಅಧಿಕಾರಿಗಳು ತಮ್ಮ ದೂಂಡಾವರ್ತನೆಯನ್ನು ನೌಕರರ ಮೇಲೆ ಮುಂದುವರಿಸುತ್ತಲೇ ಇದ್ದಾರೆ.
ಹೌದು! ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಲಿಂಗಸುಗೂರು ಘಟಕದಲ್ಲಿ ವಾಹನವೊಂದರ ಬ್ಲೇಡ್ ಕಟ್ಟಾಗಿದ್ದು ಅದಕ್ಕೆ ಚಾಲಕನಿಗೆ 100-200 ರೂಪಾಯಿ ದಂಡಹಾಕುವುದು ನಿಗಮದಲ್ಲಿ ಇದೆ.
ಆದರೆ, ಇಲ್ಲಿ ಲಿಂಗಸೂಗುರು ಘಟಕ ವ್ಯವಸ್ಥಾಪಕರು ಲಾಂಗ್ ರೂಟ್‌ನ ಇಬ್ಬರು ಚಾಲಕರಿಗೆ ತಲಾ 1200 ರೂಪಾಯಿ ದಂಡ ಹಾಕಿದ್ದು ನೀವು ಮಾಡಿದ ತಪ್ಪು ಸಾಬೀತಾಗಿದೆ ಎಂದು ಹೇಳಿ ಈ ದಂಡಹಾಕಿದ್ದಾರೆ.
ಇದನ್ನು ಏಕೆ ಹೇಳಿದೆ ಎಂದರೆ ಒಬ್ಬ ಚಾಲಕ ಬಸ್ ಹತ್ತಿದ ಕೂಡಲೇ ಬಸ್‌ನ ಬಿಡಿ ಭಾಗಗಳು ಹಾಳಾಗುವುದಿಲ್ಲ. ಅವುಗಳು ಬಹಳ ಕಾಲ ಓಡಾಡಿದ್ದರಿಂದಲೋ ಇಲ್ಲ ತುಕ್ಕು ಹಿಡಿದೋ ಬಿಟ್ಟುಹೋಗಿರುತ್ತವೆ. ಅದಕ್ಕೆ ಚಾಲಕರಿ ದಂಡ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆ ಈ ಹಿಂದಿನಿಂದಲೂ ಮಾಡುತ್ತಲೇ ಬರಲಾಗುತ್ತಿದೆ. ಆದರೆ ಅದಕ್ಕೆ ಈವರೆಗೂ ಅಧಿಕಾರಿಗಳಿಂದ ಸಮಂಜಸವಾದ ಉತ್ತರ ಸಿಕ್ಕಿಲ್ಲ.
ಇನ್ನು ನಿತ್ಯ ಒಬ್ಬರಲ್ಲ ಒಬ್ಬರು ಚಾಲಕರು ಮತ್ತು ನಿರ್ವಾಹಕರು ಬಸ್‌ಗಳನ್ನು ಘಟಕದಿಂದ ತೆಗೆದುಕೊಂಡು ಹೋಗುತ್ತಾರೆ. ಆ ವೇಳೆ ಬಸ್‌ನ ಯಾವುದೇ ಭಾಗ ಜಖಂ ಆದರೂ ಅದಕ್ಕೆ ಚಾಲಕರು ನಿರ್ವಾಹಕರನ್ನೇ ಹೊಣೆ ಮಾಡಲಾಗುತ್ತಿದೆ. ಇದು ಎಷ್ಟು ಸರಿ. ಇನ್ನು ಈ ರೀತಿ ಬಿಡಿ ಭಾಗಗಳು ಹಾಳಾಗುತ್ತಿರುತ್ತವೆ ಎಂದು ನಿಗಮದಿಂದಲೇ ಬಿಡಿಭಾಗಗಳನ್ನು ತರಿಸಿಕೊಂಡು ಅವುಗಳನ್ನು ಬದಲಾಯಿಸಲಾಗುತ್ತದೆ.
ಹೀಗಿದ್ದರೂ ಕೂಡ ಚಾಲನ ಸಿಬ್ಬಂದಿಗೆ ದಂಡ ಹಾಕುವುದು ಎಷ್ಟು ಸರಿ. ಇದರ ಬಗ್ಗೆ ಯಾರಾದರು ಚಾಲನಾ ಸಿಬ್ಬಂದಿ ಮಾತನಾಡಿದರೆ ಡಿಎಂ ಅಂದರೆ ಮೇಲಧಿಕಾರಿಗಳ ಎದುರು ಅಸಭ್ಯವರ್ತನೆ ತೋರಿದ ಎಂದು ಅದಕ್ಕೆ ದಂಡ ಇಲ್ಲ ಅಮಾನತಿ ಶಿಕ್ಷೆ ವಿಧಿಸಲಾಗುತ್ತಿದೆ. ಈ ರೀತಿ ನಿಗಮಗಳಲ್ಲಿ ಅಧಿಕಾರಿಗಳು ದರ್ಪ ಏಕೆ ತೋರಿಸುತ್ತಾರೆ ಎಂಬುದಕ್ಕೆ ಈವರೆಗೂ ಉತ್ತರ ಮಾತ್ರ ಸಿಕ್ಕಿಲ್ಲ.
ಇನ್ನು ಲಿಂಗಸುಗೂರು ಘಟಕದ ಚಾಲಕರಿಗೆ ದಂಡ ಹಾಕಿರುವ ವಿಷಯಕ್ಕೆ ಬಂದರೆ, ಇಲ್ಲಿ ಘಟಕ ವ್ಯವಸ್ಥಾಪಕರು ಎಂಥ ತಪ್ಪು ಮಾಡಿದ್ದಾರೆ ಎಂಬುವುದು ತಿಳಿಯುತ್ತದೆ. ನಿಗಮದ ನಿಯಮಾವಳಿ ಪ್ರಕಾರ ಬಸ್‌ನ ಬ್ಲೇಡ್ ಕಟ್ಟಾಗಿರುವುದಕ್ಕೆ ಚಾಲಕನಿಗೆ 100-200 ರೂ. ದಂಡವಿಧಿಸಬೇಕು. ಆದರೆ ಇಲ್ಲಿ ಚಾಲಕರಿಬ್ಬರಿಗೆ ತಲಾ 1200 ರೂಪಾಯಿ ದಂಡ ವಿಧಿಸಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ನೀವು ದಂಡ ವಿಧಿಸುವುದಕ್ಕೆ ಯಾವುದೇ ತಕರಾರು ಇಲ್ಲ. ಆದರೆ ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ ಎಂದು ಮನಸೋ ಇಚ್ಛೆ ನೌಕರರ ವಿರುದ್ಧ ದಂಡ, ಅಮಾನತಿನ ಶಿಕ್ಷೆ ನೀಡುವುದು ಯಾವ ನಿಯಮಾವಳಿಯ ಪಾಲನೆ ಮಾಡಿದಂತೆ? ಇದು ಸರಿಯೇ. ನಾವು ಇರುವುದು ಸಾರ್ವಜನಿಕ ಸೇವೆಯಲ್ಲಿ ಈ ಸೇವೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ನಿಯಮಗಳನ್ನು ನಿಗಮದಲ್ಲಿ ಮಾಡಿಕೊಳ್ಳಲಾಗಿದೆ.
ಆದರೆ, ಇದನ್ನು ದುರುಪಯೋಗಪಡಿಸಿಕೊಂಡು ಘಟಕದಲ್ಲಿ ನೌಕರರ ಮೇಲೆ ದಂಡಾಸ್ತ್ರ ಹೂಡುವುದು ಸರಿಯೇ? ಈ ಬಗ್ಗೆ ಮೇಲಧಿಕಾರಿಗಳು ಏಕೆ ಕೇಳುತ್ತಿಲ್ಲ. ಹೀಗಾಗಿ ಲಿಂಗಸುಗೂರು ಘಟಕದಲ್ಲಿ ಚಾಲಕರಿಗೆ 1200 ರೂಪಾಯಿ ದಂಡ ಹಾಕಿರುವ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಗಮನ ಹರಿಸಿ ತಾವು ಮಾಡದ ತಪ್ಪಿಗೆ ದಂಡಕಟ್ಟುತ್ತಿರುವ ನೌಕರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.
ಇನ್ನು ನಿಗಮಗಳಲ್ಲಿ ಇರುವ ನಿಯಮಗಳನ್ನೇ ಗಾಳಿಗೆ ತೂರಿ ರೀತಿ ನೌಕರರ ಮೇಲೆ ದಬ್ಬಾಳಿಕೆ ನಡೆಸುವ ಅಧಿಕಾರಿಗಳ ವಿರುದ್ಧವು ಸೂಕ್ತ ಕ್ರಮ ಜರುಗಿಸಬೇಕು ಎಂದು ನೌಕರರು ಎಂಡಿ ಅವರಲ್ಲಿ ವಿನಂತಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)