CrimeNEWSದೇಶ-ವಿದೇಶ

ಕೈಕೊಟ್ಟು ಬೇರೆ ಮದುವೆಯಾಗುತ್ತಿದ್ದ ಪ್ರಿಯಕರನಿಗೆ ಆಸಿಡ್‌ ಎರಚಿದ ಪ್ರಿಯತಮೆ

ವಿಜಯಪಥ ಸಮಗ್ರ ಸುದ್ದಿ

ಛತ್ತೀಸ್‌ಗಢ: ತನ್ನ ಪ್ರಿಯಕರ ನನ್ನನ್ನು ಬಿಟ್ಟು ಬೇರೊಬ್ಬರನ್ನು ಮದುವೆಯಾಗುತ್ತಿದ್ದಾನೆ ಎಂದು ರೊಚಿಗೆದ್ದ ಯುವತಿ ತನ್ನ ಪ್ರಿಯಕರನ ಮೇಲೆ ಮದುವೆ ಮಂಟಪದಲ್ಲೇ ಆಸಿಡ್ ದಾಳಿ ಮಾಡಿ ಪರಾರಿಯಾಗಿದ್ದಳು. ಬಳಿಕ ಸಿಕ್ಕಿ ಬಿದ್ದಿದ್ದು ಈಗ ಕಂಬಿ ಎಣಿಸುತ್ತಿದ್ದಾಳೆ.

ಛತ್ತೀಸ್‌ಗಢದ ಛೋಟೆ ಅಮಬಲ್ ಗ್ರಾಮದಲ್ಲಿ ಏ.19 ರಂದು ಈ ಘಟನೆ ನಡೆದಿದೆ. ದಮೃಧರ್ ಬಾಘೇಲ್ (25) 19 ವರ್ಷದ ಯುವತಿ ಜೊತೆ ವಿವಾಹವಾಗಲಿದ್ದರು. ಈ ವಿಚಾರವನ್ನು ತಿಳಿದ ದಮೃಧರ್ ಅವರ ಮಾಜಿ ಪ್ರಿಯತಮೆ ಈ ಕೃತ್ಯವನ್ನು ಎಸಗಿದ್ದಾಳೆ.

23 ವರ್ಷದ ಯುವತಿ ದಮೃಧರ್ ನನ್ನು ಪ್ರೀತಿಸುತ್ತಿದ್ದಳು. ಮದುವೆ ಬಗ್ಗೆ ಹಲವಾರು ಕನಸನ್ನು ಕಂಡಿದ್ದಳು. ಆದರೆ ಇದ್ದಕ್ಕಿದ್ದಂತೆ ಪ್ರಿಯಕರ ದಮೃಧರ್ ಯುವತಿಗೆ ಕೈಕೊಟ್ಟಿದ್ದಾನೆ. ಇದರಿಂದ ಸಹಜವಾಗಿ ಯುವತಿ ನೊಂದಿದ್ದಾಳೆ. ಇದಾದ ಕೆಲ ಸಮಯದ ಬಳಿಕ ಪ್ರಿಯಕರ ಕಾಲ್, ಮೆಸೇಜ್‌ ಮಾಡುವುದನ್ನು ಬಿಟ್ಟಿದ್ದಾನೆ. ಅಲ್ಲದೆ ಬೇರೊಂದು ಯುವತಿ ಜೊತೆ ವಿವಾಹವಾಗಲು ಹೊರಟಿದ್ದಾನೆ.

ಕೃತ್ಯಕ್ಕೆ ಸಹಾಯವಾದ ಕ್ರೈಮ್‌ ಶೋ: ಯುವಕ ಕೈ ಕೊಟ್ಟರು, ಆತ ತನಗಾಗಿ ಬರುತ್ತಾನೆಂದು ಪ್ರೀತಿಯನ್ನು ನಂಬಿಕೊಂಡಿದ್ದ ಯುವತಿಗೆ ನಿರಾಸೆಯಾಗಿದೆ. ಹೀಗಾಗಿ ಆತನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧಾರ ಮಾಡಿದ್ದಾಳೆ. ಟವಿಯಲ್ಲಿ ʼಕ್ರೈಂ ಪ್ಯಾಟ್ರೋಲ್ʼ ಎನ್ನುವ ಕ್ರೈಮ್‌ ಶೋವನ್ನು ನೋಡಿದ ಪ್ರಿಯತಮೆ, ಅಲ್ಲಿ ಆ್ಯಸಿಡ್ ಎರಚುವ ಕೃತ್ಯವೊಂದನ್ನು ನೋಡಿ ಹಾಗೆಯೇ ಮಾಡಲು ಹೊರಟಿದ್ದಾಳೆ.

ತನ್ನ ಪ್ರಿಯಕರನ ಮದುವೆ ಸಮಾರಂಭದಲ್ಲಿ ಯಾರಿಗೂ ಗುರುತು ಬಾರದಂತೆ, ಪುರುಷರ ಧಿರಿಸು ಧರಿಸಿ, ಕೈಯಲ್ಲಿ ಆ್ಯಸಿಡ್ ಬಾಟಲಿಯನ್ನು ಹಿಡಿದುಕೊಂಡಿದ್ದಾಳೆ. ಇದೇ ವೇಳೆ ವಿದ್ಯುತ್‌ ಕಡಿತಗೊಂಡಿದ್ದು, ಈ ಸಮಯದಲ್ಲೇ ಯುವಕನ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾಳೆ.

ಕೃತ್ಯದ ಪರಿಣಾಮ ವರ, ವಧು ಸೇರಿದಂತೆ 10 ಮಂದಿ ಅತಿಥಿಗಳು ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು 12 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಆರೋಪಿ ಯುವಕನ ಪ್ರಿಯತಮೆ ಎನ್ನುವುದು ತಿಳಿದು ಬಂದಿದೆ. ಮಾಜಿ ಪ್ರಿಯಕರ ಬೇರೆ ಮದುವೆ ಆದ ಕಾರಣ ಈ ಕೃತ್ಯ ಎಸೆಗಿದ್ದಾಳೆ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.

ತಾನು ಕೆಲಸ ಮಾಡುತ್ತಿದ್ದ ಮೆಣಸಿನಕಾಯಿ ಕಂಪೆನಿಯಿಂದ ಯುವತಿ ಆ್ಯಸಿಡ್ ಕದ್ದು ಅದನ್ನೇ ಕೃತ್ಯಕ್ಕೆ ಬಳಸಿದ್ದಾಳೆ. ಸದ್ಯ ಯುವತಿಯನ್ನು ಪೊಲೀಸರು ಬಂಧಿಸಿದ್ದು, ಕಂಬಿಹಿಂದೆ ಕಳುಹಿಸಿದ್ದಾರೆ.

Leave a Reply

error: Content is protected !!
LATEST
ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು?