NEWSಕೃಷಿನಮ್ಮರಾಜ್ಯ

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸದಿದ್ದರೆ ಡಿ.13ರಂದು ಜಿ20 ರಾಷ್ಟ್ರಗಳ ಸಮಾವೇಶಕ್ಕೆ ಕಪ್ಪು ಬಾವುಟ ಪ್ರದರ್ಶನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಶಾಮಿಯಾನ ಸುರಿಯುತ್ತಿದ್ದರೂ ರೈತರು ಸರ್ಕಾರವನ್ನು ಶಪಿಸುತ್ತ ಅಡುಗೆ ಊಟ ಮಾಡಿ ಹೋರಾಟ ಮುಂದುವರಿಸಿದ್ದಾರೆ.

ಕಳೆದ 19 ದಿನಗಳಿಂದ ಕಬ್ಬಿಗೆ ಸೂಕ್ತ ದರ ನಿಗದಿ ಪಡಿಸಬೇಕು ಎಂದು ರೈತರತ್ನ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ಹೋರಾಟ ಮಾಡುತ್ತಿರುವ ಕಬ್ಬು ಬೆಳೆಗಾರ ರೈತರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಸರ್ಕಾರ ಕೃಷಿ ಇಲಾಖೆ ವರದಿಯಲ್ಲಿ ಕಬ್ಬು ಬೆಳೆದ ರೈತರಿಗೆ ಎಕರೆಗೆ 20 ಸಾವಿರ ರೂ. ನಷ್ಟವಾಗುತ್ತಿದೆ ಎನ್ನುತ್ತದೆ. ಅದೇ ಸರ್ಕಾರ ಯಾಕೆ ಕಬ್ಬಿಗೆ ಕೇವಲ 50 ರೂ. ಹೆಚ್ಚುವರಿ ಮಾಡಿ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ನಿಗದಿ ಮಾಡಿದ ಎಫ್ಆರ್‌ಪಿ ದರಕ್ಕೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಎಕರೆಗೆ 20ಸಾವಿರ ರೂ. ನಷ್ಟವಾಗುತ್ತದೆ ಎಂದು ಹೇಳುವ ಕೃಷಿ ಇಲಾಖೆ ವರದಿಯನ್ನು ಸಕ್ಕರೆ ಸಚಿವರು ನೋಡಿಲ್ಲವೆಂದು ಕಾಣುತ್ತದೆ. ಹೆಚ್ಚುವರಿಯಾಗಿ ಟನ್‌ಗೆ 50 ರೂ. ನೀಡಲು ಹೊರಡಿಸಿರುವ ಆದೇಶ ವಾಪಸ್ ಪಡೆದು ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಒಂದು ಎಕರೆ ಕಬ್ಬು ಬೆಳೆಯಲು ಒಂದು ಲಕ್ಷ ಮೂವತ್ತಾರು ಸಾವಿರ ರೂ. ವೆಚ್ಚವಾಗುತ್ತದೆ. ಎಕರೆಗೆ 40 ಟನ್ ಕಬ್ಬು ಬೆಳೆದ ರೈತನಿಗೆ 20 ಸಾವಿರ ರೂ. ನಷ್ಟವಾಗುತ್ತದೆ ಎಂದು ಇದೇ ಸರ್ಕಾರ ವರದಿಯಲ್ಲಿ ಹೇಳುತ್ತದೆ. ಆದರೆ ಬೆಲೆ ಏರಿಕೆ ಮಾಡುವಾಗ ಭಿಕ್ಷೆಯ ರೀತಿಯಲ್ಲಿ ಏರಿಕೆ ಮಾಡುವುದು ಯಾವ ನ್ಯಾಯ, ಶುಗರ್ ಮಾಫಿಯಾ ಒತ್ತಡದಿಂದ ಹೊರಗೆ ಬಂದು ರೈತರಿಗೆ ನ್ಯಾಯಯುತ ಬೆಲೆ ನಿಗದಿ ಮಾಡಿಲ್ಲ ಎಂದು ಕಿಡಿಕಾರಿದರು.

ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚ ಲಗಾಣಿ, ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ಸುಲಿಗೆ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಕೈವಾಡ ಇದೆ ವಾಮಮಾರ್ಗದ ಚುನಾವಣಾ ನಿಧಿ ಸಂಗ್ರಹ ಸಾಹಸವಾಗಿದೆ ಎಂದರು.

ರೈತರಿಗೆ ಮೋಸ ಮಾಡುತ್ತಾರೆ ಎಂದು ಆಪಾದಿಸುವ ಕಾರ್ಖಾನೆ ಮಾಲೀಕರೇ ನೀಡುವ ಪಾರದರ್ಶಕತೆ ಇಲ್ಲದ ಸಕ್ಕರೆ ಇಳುವರಿ ಹಾಗೂ ರೈತರಿಗೆ ಹಣ ಪಾವತಿ ವರದಿಯನ್ನು ಪಡೆದು ಸರ್ಕಾರ ಹೇಳಿಕೆ ನೀಡುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.

ಕಬ್ಬಿನಿಂದ ಬರುವ ಯಥನಾಲ್, ಮೊಲಾಸಿಸ್ ಬಗ್ಯಾಸ್, ಮಡ್ಡಿ ,ಸಕ್ಕರೆ, ಉತ್ಪನ್ನಗಳ ಲಾಭವನ್ನು ಪರಿಗಣಿಸಿ ಉತ್ಪಾದನೆಗೆ ತಗಲುವ ಖರ್ಚನ್ನ ತಯಾರಿಸುವ ವರದಿಯಲ್ಲಿ ರೈತ ಪ್ರತಿನಿಧಿಗಳು ಯಾಕೆ ಇರುವುದಿಲ್ಲ. ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರು, ಲೋಕಸಭಾ ಸದಸ್ಯರ ನಿಯೋಗ ಇದೆ ಡಿ. 19 /20 ರಂದು ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವರು ಆಹಾರ ಸಚಿವರನ್ನು ಭೇಟಿ ಮಾಡಿ ಕಬ್ಬು ಬೆಳೆಗಾರರ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗುವುದು.

ನಾಳೆ 11ರಂದು ಧರಣಿ ಸ್ಥಳದಲ್ಲಿ ದೆಹಲಿ ರೈತ ಹೋರಾಟದಲ್ಲಿ ಮಡಿದ ರೈತರಿಗೆ, ಶ್ರದ್ಧಾಂಜಲಿ ಸಲ್ಲಿಸುವ ದಿನ ಆಚರಿಸಲಾಗುವುದು ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರು ಭಾಗವಹಿಸಿ, ರೈತ ಹೋರಾಟದ 750 ಹುತಾತ್ಮ ರೈತರಿಗೆ ಮೇಣದಬತ್ತಿ ಉರಿಸಿ ಶ್ರದ್ಧಾಂಜಲಿ ನಮನ ಸಲ್ಲಿಸಲಾಗುವುದು
ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ತಿಳಿಸಿದೆ.

ಮಳೆಯನ್ನು ಲೆಕ್ಕಿಸದೆ ಅಹೋರಾತ್ರಿ ಧರಣಿಯಲ್ಲಿ ರೈತ ಮುಖಂಡರಾದ ಪಿ.ಸೋಮಶೇಖರ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕೆರೆಹುಂಡಿ ರಾಜಣ್ಣ, ಕಿರಗಸೂರ ಶಂಕರ, ಸಿದ್ದೇಶ ಕೆಂಡಗಣಸ್ವಾಮಿ, ಮಾದಪ್ಪ ವೆಂಕಟೇಶ್, ಮಹದೇವಸ್ವಾಮಿ, ರಾಜು, ಅಂಬಳೆ ಮಂಜುನಾಥ ಮುಂತಾದವರಿದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ