NEWSಕೃಷಿನಮ್ಮರಾಜ್ಯ

ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ

ವಿಜಯಪಥ ಸಮಗ್ರ ಸುದ್ದಿ

ಬಾಗಲಕೋಟೆ: ಗೊಣ್ಣೆಹುಳುವಿಗೆ ವೈಜ್ಞಾನಿಕವಾಗಿ ಹೊಲೊಟ್ರೈಕಿಯಾ ಸೆರ್ರಟ್ ಎಂದು ಕರೆಯುತ್ತಾರೆ. ಈ ಕೀಡೆಯು ಸಂಪೂರ್ಣ ರೂಪಪರಿವರ್ತನೆಯನ್ನು ಹೊಂದಿದ್ದು ಅದರಲ್ಲಿ ವೂಟ್ಟೆ, ಮರಿಹುಳು, ಕೋಶ ಮತ್ತು ದುಂಬಿ ಎಂಬ ನಾಲ್ಕು ಹಂತಗಳನ್ನು ಹೊಂದಿರುತ್ತದೆ. ಕಬ್ಬಿಗೆ ಬಾಧಿಸುವ ಕೀಟಗಳಲ್ಲಿ ಪ್ರಮುಖವಾಗಿ ಗೊಣ್ಣೆಹುಳು (ಬೇರು ಹುಳು)ವಿನ ಬಾಧೆ ಇತ್ತಚೀನ ದಿನಗಳಲ್ಲಿ ಹೆಚ್ಚಾಗಿದೆ.

ಈ ಕೀಟವು ಕಬ್ಬಿನ ಬೇರುಗಳನ್ನು ತಿಂದು ಹಾನಿಯನ್ನುಂಟು ಮಾಡುವದರಿಂದ ಶೇ.40 ರಿಂದ 80ರಷ್ಟು ಬೆಳೆನಷ್ಟ ಉಂಟಾಗುತ್ತಿದೆ. ಈ ಕೀಟವು ತನ್ನ ಜೀವಿತಾವಧಿಯ ಬಹುತೇಕ ಸಮಯವನ್ನು ಭೂಮಿಯ ಒಳಗೆಯೇ ಕಳೆಯುವದರಿಂದ ಇದರ ಬಾಧೆ ರೈತರಿಗೆ ಮೇಲ್ನೋಟಕ್ಕೆ ತಿಳಿಯುವದಿಲ್ಲ. ಬೆಳೆ ಒಣಗಲಾರಂಭಿಸಿದಾಗ ಕೀಟ ಬಾಧೆ ಇರುವುದು ತಿಳಿಯುತ್ತಿದ್ದು, ಈ ಕೆಳಗಿನ ಕ್ರಮಗಳನ್ನು ಅನುಸರಿಸುವಂತೆ  ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಚೇತನಾ ಪಾಟೀಲ್‌ ತಿಳಿಸಿದ್ದಾರೆ.

ಗೊಣ್ಣೆ ಹುಳುವಿನ ಬಾಧೆಯ ಲಕ್ಷಣಗಳು

ಗೊಣ್ಣೆ ಹುಳುವಿನ ಮರಿಗಳು ಮೊದಲಿಗೆ ಮಣ್ಣಿನಲ್ಲಿರುವ ಬೆಳೆಯ ಬೇರುಗಳನ್ನು ತಿಂದು ಬೆಳೆಗಳನ್ನು ನಾಶಪಡಿಸುವದರಿಂದ ಬೆಳೆಯ ಆಹಾರದ ಘಟಕ ಎಲೆಗಳು/ಗರಿಗಳು ಹಳದಿಯಾಗಿ ಕಬ್ಬು ಒಣಗಲು ಪ್ರಾರಂಭವಾಗುತ್ತದೆ. ಬಾಧೆಗೊಳಗಾದ ಗಿಡಗಳು ಗಿಡ್ಡವಾಗಿರುತ್ತವೆ ಮತ್ತು ತಿವ್ರವಾಗಿ ಹಾನಿಗೊಳಗಾದ ಗಿಡಗಳು ಸೊರಗುತ್ತವೆ. ಬಾಧೆಗೊಳಗಾದ ಕಬ್ಬನು ಎಳೆದಾಗ ಕಬ್ಬಿನ ಗಡ್ಡೆಯ ಜೊತೆಗೆ ಕಬ್ಬು ಹೊರಕ್ಕೆ ಬರುತ್ತದೆ. ಗಿಡಗಳ ಬುಡದಲ್ಲಿ ಬಳ್ಳನೆಯ, ತೋರು ಬೆರಳು ಗಾತ್ರದ, ಅರ್ಧಚಂದ್ರಾಕಾರದ ಮೂರು ಜೊತೆ ಕಾಲುಗಳ್ಳ ಗೊಣ್ಣೆ ಹುಳುಗಳು ಕಂಡುಬರುತ್ತವೆ. ಮುಖ್ಯವಾಗಿ ಈ ಕೀಟದ ಬಾಧೆಯು ಅಗಷ್ಟ- ಸೆಪ್ಟೆಂಬರ ತಿಂಗಳನಲ್ಲಿ ಕಂಡುಬರುತ್ತದೆ.

ಗೊಣ್ಣೆಹುಳುವಿನ ಸಮಗ್ರ ಹತೋಟಿ ಕ್ರಮಗಳು

ಕಬ್ಬು ನಾಟಿಮಾಡುವ ಪೂರ್ವದಲ್ಲಿ ಭೂಮಿಯನ್ನು ಆಳವಾಗಿ ಉಳುಮೆ ಮಾಡುವದು. ಮುಂಗಾರು ಮಳೆ ಬಂದ ನಂತರ ಸಾಯಂಕಾಲ ಸಮಯ 7.30 ರಿಂದ 8.30 ರ ಹೊತ್ತಿಗೆ ಹೊರಬರುವ ದುಂಬಿಗಳನ್ನು ಪೆಟ್ರೋಮ್ಯಾಕ್ಸ್ ದೀಪದ ಸಹಾಯದಿಂದ ಆಕರ್ಷಿಸಿ ಹಿಡಿದು ನಾಶಪಡಿಸಬೇಕು. ಈ ಕ್ರಮವನ್ನು ಸಾಮೂಹಿಕವಾಗಿ ಕೈಗೊಂಡಲ್ಲಿ ಮಾತ್ರ ಹತೋಟಿ ಪರಿಣಾಮಕಾರಿಯಾಗಿರುತ್ತದೆ. ಹೆಚ್ಚಿನ ನೀರಿನ ಸೌಕರ್ಯವಿರುವ ಪ್ರದೇಶದಲ್ಲಿ ಭೂಮಿಯಲ್ಲಿ ಅರ್ಧ ದಿಂದ ಒಂದು ಅಡಿ ಎತ್ತರದಷ್ಟು ನೀರು ನಿಲ್ಲಿಸುವುದು.

ಜೈವಿಕ ವಿಧಾನವಾಗಿ ಮೆಟರೈಝಿಯಂ ಅನಿಸೋಪ್ಲಿಯೆ ಶಿಲೀಂದ್ರ ಕೀಟನಾಶಕವನ್ನು 5 ರಿಂದ 10 ಕಿ. ಗ್ರಾಂ. ಪ್ರತಿ ಎಕರೆಗೆ ಅಥವಾ ಜಂತುಹುಳುಗಳಿಂದ ಕೂಡಿದ ಈಪಿಎನ್ ಕೀಟನಾಶಕ (ವೆಟ್ಟೆಬಲ್‍ಪೌಡರ್)ವನ್ನು ಒಂದು ಎಕರೆಗೆ 3 ರಿಂದ 4 ಕಿ.ಗ್ರಾಂ,ನ್ನು 500ಕಿ.ಗ್ರಾಂ ಕೊಟ್ಟಿಗೆ ಗೊಬ್ಬರದ ಜೊತೆಗೆ ಮಿಶ್ರಣಮಾಡಿ ನಾಟಿಮಾಡುವ ಸಮಯದಲ್ಲಿ ಅಥವಾ ಮೇ- ಜೂನ್ ತಿಂಗಳಿನಲ್ಲಿ ಮಣ್ಣಿನಲ್ಲಿ ಸೇರಿಸುವದು. ಬೆಳೆದು ನಿಂತ ಬೆಳೆಯಲ್ಲಿ ಗೊಣ್ಣೆಹುಳದ ಬಾಧೆ ಕಂಡು ಬಂದಲ್ಲಿ ಪ್ರತಿ ಲೀಟರ ನೀರಿಗೆ 10 ಮಿ.ಲೀ ಕ್ಲೋರ್‍ಫೈರಿಫಾಸನ್ನು ಬೆರೆಸಿ, ಬೆಳೆಯ ಬುಡದಲ್ಲಿ ಸಿಂಪರಿಸುವದರಿಂದ ಗೊಣ್ಣೆಹುಳುವಿನಿಂದಾಗುವ ಹಾನಿಯನ್ನು ಹತೋಟಿ ಮಾಡಬಹುದು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ