NEWSದೇಶ-ವಿದೇಶಮೈಸೂರು

ಕೈಯಲ್ಲಿ ಸಿನಿಮಾಗಳು ಇಲ್ಲದ ಕಾರಣ ಅಭಿಮಾನಿಗಳಿಗೇ ಬಿಗ್‌ ಆಫರ್‌ ನೀಡಿದ ಬಹುಭಾಷ ನಟಿ ಕಿರಣ್‌ ರಾಥೋಡ್‌

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಸಿನಿಮಾಗಳಲ್ಲಿ ಆಫರ್‌ ಕಡಿಮೆಯಾಗುತ್ತಿದ್ದಂತೆ ಅಭಿಮಾನಿಗಳನ್ನು ತನ್ನತ ಸೆಳೆಯಲು ಬಹುಭಾಷ ನಟಿ ಕಿರಣ್‌ ರಾಥೋಡ್‌ ಅಭಿಮಾನಿಗಳಿಗೆ ಆಫರ್ ನೀಡಿದ್ದಾರೆ. ಅದು ಕೂಡ ಅಂತಿಂತ ಆಫರ್‌ ಅಲ್ಲ ಬಿಗ್‌ ಆಫರ್‌.

ಹೌದು! ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಕಿರಣ್‌ ರಾಥೋಡ್‌ ಸದ್ಯ ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳಿಎಯುತ್ತಿದ್ದಾರೆ. ಹೀಗಾಗಿ ತಮ್ಮ ಅಭಿಮಾನಿಗಳ ಜತೆ ಸಂಪರ್ಕ ಸಾಧಿಸಲು ಒಂದು ಆಪ್‌ ಸಿದ್ಧಪಡಿಸಿದ್ದಾರೆ.

ಇನ್ನು ಆಪ್‌ಅನ್ನು ಅಭಿಮಾನಿಗಳು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆದರೆ, ಅದನ್ನು ಸುಮ್ಮನೆ ಡೌನ್‌ಲೋಡ್‌ ಮಾಡಿಕೊಳ್ಳುವಂತಿಲ್ಲ. ಅದಕ್ಕೆ 49 ರೂಪಾಯಿ ಪಾವತಿಸಬೇಕು. ಆ ಬಳಿಕ ನೀವು ಡೌನ್‌ಲೋಡ್‌ ಮಾಡಿಕೊಂಡು ಅವರೊಂದಿಗೆ ಹರಟೆ ಹೊಡೆಯಬಹುದು. ಆದರೆ, ಅದಕ್ಕೂ ಇಂತಿಷ್ಟು ಎಂದು ಪಾವತಿಸಬೇಕು.

ಸದ್ಯ ಕೈಯಲ್ಲಿ ಯಾವುದೇ ಸಿನಿಮಾ ಇಲ್ಲದ ಕಾರಣ ತಮ್ಮದೇ ಆಪ್‌ಅನ್ನು ಸಿದ್ಧಪಡಿಸಿರುವ ಕಿರಣ್, ಆ ಮೂಲಕ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಆದರೆ, ಕೆಲವು ಷರತ್ತುಗಳನ್ನು ಹಾಕಿದ್ದು, ಆಪ್‌ ಮೂಲಕವೇ ನನ್ನನ್ನು ಸಂಪರ್ಕಿಸಬೇಕು. ಹಾಗಂತ ಅದು ಕೂಡ ಉಚಿತವಲ್ಲ, ನನ್ನೊಂದಿಗೆ ಮಾತನಾಡುವುದಕ್ಕೆ ಹತ್ತು ಸಾವಿರ ರೂಪಾಯಿ ಕೊಡಬೇಕು ಎಂದು ತಿಳಿಸಿದ್ದಾರೆ.

ಇನ್ನು ಹತ್ತು ಸಾವಿರ ರೂಪಾಯಿ ಪಾವತಿಸಿದರೆ ಅವರ ಜತೆ ಐದು ನಿಮಿಷ ಮಾತನಾಡಬಹುದಂತೆ. ಇಷ್ಟೇ ಅಲ್ಲ ಒಂದು ಸಾವಿರ ರೂಪಾಯಿ ಪಾವತಿ ಮಾಡಿದರೆ ಅವರು ಎರಡು ಹಾಟ್ ಫೋಟೋಗಳನ್ನು ಕಳುಹಿಸುತ್ತಾರಂತೆ. ಅಷ್ಟೇ ಅಲ್ಲದೇ ಅವರೊಂದಿಗೆ ಡಿನ್ನರ್ ಕೂಡ ಮಾಡಬಹುದಂತೆ.

ಇನ್ನು ಊಟ ಮಾಡಲು ಕೂಡ ಇಂತಿಷ್ಟು ಹಣವನ್ನು ಪಾವತಿಸಬೇಕು. ಅದು ಎಷ್ಟುಗೊತ್ತಾ ಡಿನ್ನರ್‌ಗೆ ಹೋಗಲು ಬರೋಬರಿ ಒಂದೂವರೆ ಲಕ್ಷ ರೂಪಾಯಿಯನ್ನು ಪಾವತಿಸಬೇಕಂತೆ. ಇನ್ನು ವಿಡಿಯೋ ಕಾಲ್ (Video Call) ಕೂಡ ಮಾಡಬಹುದಾಗಿದ್ದು, ಅದಕ್ಕೂ ಇಂತಿಷ್ಟು ಸಮಯಕ್ಕೆ ಇಂತಿಷ್ಟು ರೂಪಾಯಿಯಂತೆ ನೀಡಬೇಕು ಎಂದು ತಿಳಿಸಿದ್ದಾರೆ.

ವಿಡಿಯೋ ಕಾಲ್‌ಗೆ ಹನ್ನೆರಡು ಸಾವಿರ ರೂಪಾಯಿಯಿಂದ ಆರಂಭವಾಗಲಿದ್ದು ಈ ರೇಟು ಐವತ್ತು ಸಾವಿರ ರೂಪಾಯಿವರೆಗೂ ಇರಲಿದೆಯಂತೆ. ಇದನ್ನು ಕೇಳಿದ ಕೆಲ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದು, ಕಿರಣ್ ರಾಥೋಡ್ ಏನು ಮಾಡಲು ಹೊರಟಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Leave a Reply

error: Content is protected !!
LATEST
ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು?