NEWSಬೆಂಗಳೂರು

ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ಹಂಪಾಪುರ ಶಾಖೆಗೆ ಬೀಗಹಾಕಿ ವ್ಯವಸ್ಥಾಪಕರಿಗೆ ದಿಗ್ಬಂಧನ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ಹಂಪಾಪುರ ಶಾಖೆ ರೈತರಿಗೆ ವಂಚನೆ ಮಾಡಿ, ಕಿರುಕುಳ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಬ್ಬುಬೆಳೆಗಾರ ಸಂಘದ ಮುಖಂಡರು ಇಂದು (ಏ.11) ರಾಜ್ಯಾಧ್ಯಕ್ಷ, ರೈತ ರತ್ನ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬ್ಯಾಂಕಿಗೆ ಬೀಗ ಮುದ್ರೆ ಚಳವಳಿ ಹಮ್ಮಿಕೊಂಡಿದ್ದರು.

ಇಂದು ಬ್ಯಾಂಕ್‌ ಮುಂದೆ ಜಮಾಯಿಸಿದ ನೂರಾರು ರೈತರು, ಬ್ಯಾಂಕ್‌ ಶಾಖೆಯ ಹಿ೦ದಿನ ವ್ಯವಸ್ಥಾಪಕರು ಈ ಭಾಗದ ನೂರಾರು ರೈತರಿಗೆ ಸಾಲ ನೀಡುವ ನೆಪದಲ್ಲಿ ಮುಗ್ಧ ರೈತರಿಂದ ಸಹಿ ಪಡೆದು ಸಾಲದ ಹಣ ರೈತರಿಗೆ ನೀಡದೆ ವಂಚಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸಿ, ರೈತರನ್ನು ಸಾಲಗಾರರನ್ನಾಗಿ ಮಾಡಿ, ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಕಿಡಿಕಾರಿದರು.

ಪ್ರಸ್ತುತ ಅವರು ನಿವೃತ್ತಿಯಾಗಿದ್ದು ಈ ಬಗ್ಗೆ ಕಳೆದ 17-6-22 ರಂದು ಬ್ಯಾಂಕ್‌ ಮುಂದೆ ಚಳವಳಿ ಮಾಡಿದಾಗ ಪ್ರಾದೇಶಿಕ ವ್ಯವಸ್ಥಾಪಕರು ಸ್ಥಳಕ್ಕೆ ಬಂದು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು ಇನ್ನು ಯಾವುದೇ ಕ್ರಮ ಜಾರಿಯಾಗಿಲ್ಲ.

ಜಿಲ್ಲಾಧಿಕಾರಿಗಳು‌, ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳ ಸಭೆ ಕರೆದಿದ್ದಾಗ ಈ ವಿಷಯದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥರಿಗೆ ಸೂಚನೆ ನೀಡಿದ್ದರು ಸಹ ಇಲ್ಲಿಯ ತನಕ ಯಾವುದೇ ಕ್ರಮ ಜಾರಿಯಾಗಿಲ್ಲ‌ ಎಂದು ಅಸಮಾಧಾನ ಹೊರಹಾಕಿದರು.

ರಾಜ್ಯದ ಆರ್‌ಬಿಐ ಮುಖ್ಯಸ್ಥರಿಗೂ ಈ ಬಗ್ಗೆ ದೂರು ಸಲ್ಲಿಸಲಾಗಿತ್ತು ಅವರು ಸಹ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿ ಯಾವುದೇ ಕ್ರಮ ಜಾರಿಯಾಗಿಲ್ಲ.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಚಾಮರಾಜನಗರ ಪ್ರಾದೇಶಿಕ ವ್ಯವಸ್ಥಾಪಕರನ್ನು ತನಿಖೆ ನಡೆಸಿರುವ ಬಗ್ಗೆ ವರದಿ ನಕಲನ್ನು ನೀಡುವಂತೆ ಕೋರಲಾಗಿದೆ, ಅವರಿಂದಲೂ ಯಾವುದೇ ಉತ್ತರ ಬಂದಿಲ್ಲ. ವಂಚನೆಗೆ ಒಳಗಾಗಿರುವ ರೈತರನ್ನು ಸಾಲ ವಸೂಲಾತಿಗಾಗಿ ನ್ಯಾಯಾಲಯಕ್ಕೆ ದಾವೆ ದಾಖಲಿಸಿ ಪದೇಪದೇ ನೋಟಿಸ್ ನೀಡಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ, ಆದ್ದರಿಂದ ರೈತರಿಗೆ ನ್ಯಾಯ ಸಿಗುವ ತನಕ ಬ್ಯಾಂಕ್ ಮುಂದೆ ಸಂಘಟನೆಯ ವತಿಯಿಂದ ಬೀಗ ಮುದ್ರೆ ಚಳವಳಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಬ್ಯಾಂಕ್‌ ವ್ಯವಸ್ಥಾಪಕ ಸೋಮಣ್ಣ ಪ್ರತಿಭಟನೆ ನಿರತರ ಜತೆ ನಿಮ್ಮ ಮನವಿ ನೀಡಿ ಕೇಂದ್ರ ಕಚೇರಿಗೆ ಕಳಿಸುತ್ತೇನೆ ಎಂದಾಗ ಪ್ರತಿಭಟನಾ ನಿರತ ರೈತರು ಆಕ್ರೋಶದಿಂದ ನೀವು ಪೋಸ್ಟ್ ಮ್ಯಾನ್ ಅಲ್ಲ ವ್ಯವಸ್ಥಾಪಕರಾಗಿ ಮಾತನಾಡಿ ಇಲ್ಲವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಎಚ್ಚರಿಸಿದರು.

ಎರಡು ಗಂಟೆಯ ಸಮಯಕ್ಕೆ ಪ್ರಾದೇಶಿಕ ವ್ಯವಸ್ಥಾಪಕ ರಾಧಾಕೃಷ್ಣರೈ ಹಿರಿಯ ವ್ಯವಸ್ಥಾಪಕ ವೆಂಕಟ್ ನಾಯಕ್ ಅವರು, ಚಳವಳಿ ಸ್ಥಳಕ್ಕೆ ಬಂದಾಗ ರೈತರು ಆಕ್ರೋಶ ಭರಿತರಾಗಿ ಎಚ್ಚರಿಕೆ ನೀಡಿದರು. ರೈತರ ಸಮಸ್ಯೆ ಆಲಿಸಿದ ಅಧಿಕಾರಿಗಳು ಮೋಸಕ್ಕೆ ಒಳಗಾಗಿರುವ ಮಾದೇವಪ್ಪ ಹಾಗೂ ಬಸವರಾಜ್ ಎಂಬ ರೈತರಿಗೆ ಕೇಂದ್ರ ಕಚೇರಿ ಜೊತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಸೂಚಿಸಿ ಚಳವಳಿ ಕೈಬಿಡುವಂತೆ ಮನವಿ ಮಾಡಿದರು 6 ಗ೦ಟೆ ತನಕ ಅಧಿಕಾರಿಗಳನ್ನು ದಿಗ್ಬಂಧನ ವಿಧಿಸಿ ಧರಣಿ ಮುಂದುವರಿಸಲಾಗಿತ್ತು.

ಆದರೆ, ಈ ತಿಂಗಳ ಅಂತ್ಯದೊಳಗೆ ಬ್ಯಾಂಕ್‌ನ ಮ್ಯಾನೇಜರ್ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಲಿಂಗೇಗೌಡರು ಮೈಸೂರಿಗೆ ಬಂದು ಸಮಸ್ಯೆ ಬಗೆಹರಿಸುವುದಾಗಿ ದೂರವಾಣಿ ಮುಖಾಂತರ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಂಜೆ 7ರ ಸಮಯದಲ್ಲಿ ತಾತ್ಕಾಲಿಕವಾಗಿ ಚಳವಳಿ ಕೈ ಬಿಡಲಾಯಿತು.

ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕೆಂಡಗಣ್ಣ ಸ್ವಾಮಿ, ಹಂಪಾಪುರ ರಾಜೇಶ್, ಕಿರಗಸೂರು ಶಂಕರ್, ಪ್ರಸಾದ್ ನಾಯಕ, ಹಿರೇನಂದಿ ಮಹದೇವಪ್ಪ ದೇವಮಣಿ, ಅಂಬಳೆ ಮಂಜುನಾಥ, ಮಲ್ಲೇಶ್, ಚುಂಚುರಾಯನಹುಂಡಿ ಬಸವರಾಜಪ್ಪ, ನಂಜುಂಡಸ್ವಾಮಿ, ಸಿದ್ದರಾಮ, ಕಾಟೂರು ಮಹಾದೇವಸ್ವಾಮಿ, ಕೋಟೆ ಸುನಿಲ್ ಕುಮಾರ್, ಪಾಳ್ಯ ನಿಂಗಣ್ಣ, ತೆರಣಿಮುಂಟಿ ಸುರೇಶ್, ಶಿವಸ್ವಾಮಿ, ದೇವನೂರು ನಾಗೇಂದ್ರಸ್ವಾಮಿ, ವಿಜಯೇಂದ್ರ ಇನ್ನು ಮುಂತಾದ ನೂರಾರು ರೈತರು ಇದ್ದರು.

Leave a Reply

error: Content is protected !!
LATEST
ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು