NEWSವಿದೇಶ

ಕೊರೊನಾಗೆ ಆರನೇ ಬಲಿ

ಗದಗದ ವೃದ್ದೇಯನ್ನು ಬಲಿಪಡೆದ ವಿಶ್ವಮಾರಿ ಕೊರೊನಾ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮಹಾಮಾರಿ ಕೊರೊನಾಗೆ ಇಂದು ಮತ್ತೊಂದು ಬಲಿಯಾಗಿದ್ದು, ಈ  ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೇರಿಕೆಯಾಗಿದೆ.

ಗದಗದ 80 ವರ್ಷದ ವೃದ್ಧೆಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು ವಿಶ್ವಮಾರಿ ರಾಜ್ಯದ ಜನರಲ್ಲಿ ಭಯವನ್ನು ಹೆಚ್ಚುಮಾಡುತ್ತಿದೆ.

ಮಂಗಳವಾರವಷ್ಟೇ ಈ ವೃದ್ಧೆ ಸೇರಿದಂತೆ  12 ಜನರಿಗೆ ಸೋಂಕು ತಗುಲಿತ್ತು. ಈ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿರಿ ಕರ್ನಾಟಕದಲ್ಲಿ ಕೊರೊನಾಗೆ ಮತ್ತೊಂದು ಬಲಿ

ವೃದ್ಧೆ ಸಾವನ್ನಪ್ಪಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಮತ್ತು ಕುಟುಂಬದವರನ್ನು ರಾತ್ರೋರಾತ್ರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಎಲ್ಲಾ ರೀತಿಯ ಪರೀಕ್ಷೆಗೂ ಒಳಪಡಿಸಲಾಗುತ್ತಿದೆ.

ಇದನ್ನೂ ಓದರಿ ಕರ್ನಾಟಕದಲ್ಲಿ ಇಂದು  ಮತ್ತೆ 12 ಮಂದಿಯಲ್ಲಿ ಕೊರೊನಾ ಪಾಸಿಟಿವ್‌

ಕೊವಿಡ್-19 ವಿಪತ್ತು ನಿರ್ವಹಣೆ ಮಾರ್ಗ ಸೂಚಿ ರೀತ್ಯ ಅತ್ಯಕ್ರಿಯೆ

ತೀವ್ರ  ಉಸಿರಾಟ ತೊಂದರೆಯಿಂದ ಗದಗ ಜಿಮ್ಸ್‌ ಆಸ್ಪತ್ರೆಗೆ ಏ.4 ರಂದು 80 ರ ವಯೋವೃದ್ಧೆ ದಾಖಲಾಗಿದ್ದರು,  ಏ..6 ರಂದು ಅವರಿಗೆ ಕೊವಿಡ್-19 ಸೊಂಕು ಇದೆಯಂದು ( ಪಿ.166) ದೃಢಪಟ್ಟಿತ್ತು. ಇಂದು ಮುಂಜಾನೆ 12.55 ಗಂಟೆಗೆ ಜಿಮ್ಸ್‌ನಲ್ಲಿ ಚಿಕಿತ್ಸೆ ಯಲ್ಲಿದ್ದ ವೃದ್ಧೆ ಹೃದಯಾಘಾತದಿಂದ (ಕಾರ್ಡಿಯಾಕ್ ಅರೆಸ್ಟ) ಮೃತಪಟ್ಟಿದ್ದಾರೆ. ಮೃತರ ಸಂಸ್ಕಾರ ಕೊವಿಡ್-19 ವಿಪತ್ತು ನಿರ್ವಹಣೆ ಮಾರ್ಗ ಸೂಚಿ ರೀತ್ಯ ನಡೆಯಲಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC: ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುತ್ತಿದೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ KSRTC: ಏಪ್ರಿಲ್‌-ಜೂನ್‌ ಪೀಕ್‌ ಸೀಸನ್‌ ಎಂದು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹಿಂಸಿಸುತ್ತಿರುವ ಅಧಿಕಾರಿಗಳು..! ಬಿಜೆಪಿ ರಾಜಕೀಯ ಲಾಭಕ್ಕೆ ನೇಹಾ ಪ್ರಕರಣ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ: ಜಗದೀಶ್ ವಿ. ಸದಂ IVRS, ಬಲ್ಕ್ SMS ಮೂಲಕ ಮತದಾರರಿಗೆ ಮೊಬೈಲ್‌ ಸಂದೇಶ: ತುಷಾರ್ ಗಿರಿನಾಥ್ KSRTC: ವೇತನ ಸಮಸ್ಯೆ ಪರಿಹರಿಸದೆ ಅಸಡ್ಡೆ ತೋರಲು ಇವರು ಕಾರಣಗಳು....!? ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಜನರ ವಂಚಿಸುವ ಮಂತ್ರ ದಂಡಗಳು : ಕುರುಬೂರ್‌ ಶಾಂತಕುಮಾರ್‌ 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥಾಗೆ ಮನೋಜ್ ಕುಮಾರ್ ಮೀನಾ, ತುಷಾರ್ ಗಿರಿನಾಥ್ ಚಾಲನೆ ಕೊಡಗು: ಹುಲಿದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ ತಾಳವಾಡಿ: ಜಮೀನಿಗೆ ನುಗ್ಗುತ್ತಿರುವ ಕಾಡಾನೆ ಹಿಮ್ಮೆಟ್ಟಿಸಿದ ರೈತರು ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ : ಬೆಚ್ಚಿಬಿದ್ದ ಜನತೆ