NEWSನಮ್ಮರಾಜ್ಯ

ಜನಧನ್‌ ಖಾತೆಗಳಿಗೆ ನಾಳೆಯಿಂದ ನೇರ ನಗದು ವರ್ಗವಣೆ

ಬ್ಯಾಂಕ್ ಮಿತ್ರ  ಮೂಲಕ ಸೌಲಭ್ಯ ಪಡೆಯಿರಿ l  ಜಿಲ್ಲಾಧಿಕಾರಿ ದೀಪಾ ಚೋಳನ್ ಸಲಹೆ

ವಿಜಯಪಥ ಸಮಗ್ರ ಸುದ್ದಿ

ಧಾರವಾಡ : ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್  ಘೋಷಿಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ, ಮಹಿಳೆಯರ ಜನಧನ ಖಾತೆಗಳಿಗೆ, ತಲಾ 500 ರೂ.ನೇರ ನಗದು ಜಮೆ ಮಾಡುವ ಕಾರ್ಯ ಏ.3 ರಿಂದ ಜಿಲ್ಲೆಯಲ್ಲಿ  ಪ್ರಾರಂಭವಾಗಲಿದೆ. ಜಿಲ್ಲೆಯಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಜನರಿಗೆ ಈ ಪ್ರಯೋಜನ ದೊರೆಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಬ್ಯಾಂಕ್ ಮಿತ್ರ ಅವರ ಮೂಲಕ ಗ್ರಾಹಕರು ಈ ಸೌಲಭ್ಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಬ್ಯಾಂಕರುಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜನರಿಗೆ ಕಷ್ಟಕಾಲದಲ್ಲಿ ಸಹಾಯವಾಗಲಿ ಎಂಬ ಆಶಯದೊಂದಿಗೆ ರೂಪಗೊಂಡಿರುವ ಈ ಯೋಜನೆಯನ್ನು ಜಿಲ್ಲೆಯ ಬ್ಯಾಂಕಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸಬೇಕು.

ಎಲ್ಲ ಬ್ಯಾಂಕ್‌ಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು ಒಂದು ಮೀಟರ್ ಅಂತರದಲ್ಲಿ ಗುರುತುಗಳನ್ನು ಹಾಕಿ ಗ್ರಾಹಕರಿಗೆ ಆರೋಗ್ಯದ ಅರಿವು ಕೂಡಾ ಮೂಡಿಸಬೇಕು. ಗ್ರಾಮೀಣ ಪ್ರದೇಶಗಳ ಬ್ಯಾಂಕಗಳು ತಮ್ಮ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಅಥವಾ ಬ್ಯಾಂಕ್ ಮಿತ್ರರ ಮೂಲಕ ಗ್ರಾಹಕರಿಗೆ ನಗದು ವಿಲೇವಾರಿ ಮಾಡಬೇಕು. ಬ್ಯಾಂಕ್ ಮಿತ್ರರಿಗೆ ಅಧಿಕೃತವಾಗಿ ಗುರುತಿನ ಕಾರ್ಡು ನೀಡಿ ಪೊಲೀಸರಿಗೆ ಮಾಹಿತಿ ಒದಗಿಸಬೇಕು. ನಗರ ಪ್ರದೇಶಗಳಲ್ಲಿ ಎಟಿಎಂ ಗಳ ಮೂಲಕ ಫಲಾನುಭವಿಗಳು ತಮ್ಮ ನಗದು ಪಡೆಯಬಹುದು.

ಬ್ಯಾಂಕ್‍ಗಳಲ್ಲಿ 500 ಕ್ಕಿಂತ ಹೆಚ್ಚು ಪಿಎಮ್‍ಜೆಡಿವಾಯ್ ಖಾತೆಗಳನ್ನು ಹೊಂದಿದ್ದರೆ ಅಂತಹ ಬ್ಯಾಂಕಗಳ ವ್ಯವಸ್ಥಾಪಕರು ಹತ್ತಿರದ ಪೊಲೀಸ್ ಠಾಣೆಗೆ  ಮಾಹಿತಿ ನೀಡಿ,  ಪೊಲೀಸ್ ಸಿಬ್ಬಂದಿಯ ನೆರವು ಪಡೆಯಬಹುದು. ಕೊರೊನಾ ಸೋಂಕು ತಡೆಯಲು ಅಗತ್ಯವಿರುವ ಸ್ಯಾನಿಟೈಸ್‍ರ್ ಉಪಯೋಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲಾ ಲೀಡ್ ಬ್ಯಾಂಕ್  ವ್ಯವಸ್ಥಾಪಕ ಕೆ ಎಮ್ ಈಶ್ವರ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ಮಹಿಳೆಯರು ಪಿಎಮ್‍ಜೆಡಿವಾಯ್  ಖಾತೆ ಹೊಂದಿದ್ದಾರೆ. ಈ ಗ್ರಾಹಕರಿಗೆ ವಿವಿಧ ಬ್ಯಾಂಕಗಳ 348 ಶಾಖೆಗಳು ಹಾಗೂ 450 ಎಟಿಎಮ್ ಗಳ ಮೂಲಕ ಈ ಸೇವೆಗಳನ್ನು ಒದಗಿಸಲಾಗುವುದು ಎಂದರು.

ಯಾವ ಖಾತೆಯವರು ಯಾವ ದಿನ ಹಣ ಪಡೆಯಬಹುದು : ಗ್ರಾಹಕರು ತಾವು ಹೊಂದಿರುವ ಪಿಎಮ್‍ಜೆಡಿವಾಯ್  ಖಾತೆಯ ಸಂಖ್ಯೆಯು  ಸೊನ್ನೆ(0) ಅಥವಾ ಒಂದು  ಅಂಕಿಯಿಂದ ಕೊನೆಗೊಳ್ಳುವ  ಫಲಾನುಭವಿಗಳು ಏಪ್ರಿಲ್ 3 ರಂದು ಮತ್ತು 2  ಅಥವಾ 3  ಅಂಕಿಯಿಂದ ಕೊನೆಗೊಳ್ಳುವ  ಖಾತೆ ಸಂಖ್ಯೆಗಳ ಫಲಾನುಭವಿಗಳು ಏಪ್ರಿಲ್ 4 ರಂದು, 4 ಅಥವಾ 5  ಅಂಕಿಯಿಂದ ಕೊನೆಗೊಳ್ಳುವ  ಖಾತೆ ಸಂಖ್ಯೆಗಳ ಫಲಾನುಭವಿಗಳು ಏಪ್ರಿಲ್ 7 ರಂದು, 6 ಅಥವಾ 7  ಅಂಕಿಯಿಂದ ಕೊನೆಗೊಳ್ಳುವ  ಖಾತೆ ಸಂಖ್ಯೆಗಳ ಫಲಾನುಭವಿಗಳು ಏಪ್ರಿಲ್ 8 ರಂದು ಮತ್ತು  8 ಅಥವಾ 9  ಅಂಕಿಯಿಂದ ಕೊನೆಗೊಳ್ಳುವ  ಖಾತೆ ಸಂಖ್ಯೆಗಳ ಫಲಾನುಭವಿಗಳು ಏಪ್ರಿಲ್ 9 ರಂದು ತಾವು ಪಿಎಮ್‍ಜೆಡಿವಾಯ್ ಖಾತೆ ಹೊಂದಿರುವ ಬ್ಯಾಂಕಿಗೆ ಭೇಟಿನೀಡಿ ಹಣ ಪಡೆಯಬಹುದು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಸೇರಿದಂತೆ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು  ಭಾಗವಹಿಸಿದ್ದರು.

Leave a Reply

error: Content is protected !!
LATEST
ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕೆಡವಿ ಮಾಲ್ ಕಟ್ಟುವ ಬಿಡಿಎ ನಿರ್ಧಾರಕ್ಕೆ ಎಎಪಿ ವಿರೋಧ ಜೈಲಲ್ಲೇ ದೇವರಾಜೇಗೌಡರ ಜೀವಕ್ಕೆ ಅಪಾಯವಿದೆ : ಸುರೇಶಗೌಡ ಆತಂಕ KSRTC ಬಸ್‌- ಕಾರು ನಡುವೆ ಭೀಕರ ಅಪಘಾತ: ಕಾರು ಚಾಲಕ ಸಾವು, ನಾಲ್ವರ ಸ್ಥಿತಿ ಗಂಭೀರ ಜಿಆರ್ ಫಾರ್ಮ್ ಹೌಸ್‌ನಲ್ಲಿ ರೇವ್​ ಪಾರ್ಟಿ: ನಟಿಯರು ಸೇರಿ 80ಕ್ಕೂ ಹೆಚ್ಚು ಬಂಧನ KSRTC: ಹೆದ್ದಾರಿಯಲ್ಲಿ ಕೆಟ್ಟುನಿಂತ ಬಸ್‌ಗಳು - ಕಿಮೀ ವರೆಗೆ ಟ್ರಾಫಿಕ್ ಜಾಮ್ KSRTC: ₹185 ಟಿಕೆಟ್‌ ಕೊಟ್ಟು ₹200 ಕೇಳಿದ ಕಂಡಕ್ಟರ್‌ - ದೂರು ಕೊಟ್ಟ ಪ್ರಯಾಣಿಕ ಧೈರ್ಯವಿದ್ದರೆ ಎಎಪಿ ಮುಖಂಡರೆಲ್ಲರನ್ನೂ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಪೃಥ್ವಿ ರೆಡ್ಡಿ ಸವಾಲು ಪತ್ನಿ, ಮಗನಿಗೆ ಮಾಸಿಕ ಜೀವನಾಂಶ ಪಾವತಿಸದ ಪತಿ ಆಸ್ತಿ ಮುಟ್ಟುಗೋಲು: ಹೈಕೋರ್ಟ್ ಮಹತ್ವದ ಆದೇಶ ಬೆಳ್ಳಂಬೆಳಗ್ಗೆ ಸರಣಿ ಅಪಘಾತ: ಕಾರು ನಜ್ಜುಗುಜ್ಜು - ಪ್ರಯಾಣಿಕರು ಸೇಫ್ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ:‌ ಶೇ.25.5 ವೇತನ ಹೆಚ್ಚಳ ಬಹುತೇಕ ಖಚಿತ