NEWSನಮ್ಮಜಿಲ್ಲೆನಮ್ಮರಾಜ್ಯ

ಡಬಲ್ ಮ್ಯಾರೇಜ್ ಕಹಾನಿ: ಅಕ್ಕನ ಗಂಡನನ್ನೇ ಪ್ರೀತಿಸಿ ಮದುವೆಯಾದ ಪದವೀಧರೆ ತಂಗಿ ಕೊರಿಯರ್ ಬಾಯ್ ಜತೆ ಎಸ್ಕೇಪ್!

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಬಳ್ಳಾಪುರ: ಆಕೆ ಪದವೀಧರೆ ಆದರೂ ಬುದ್ಧಿ ಮಾತ್ರ ಲದ್ದಿತಿಂದಿದ್ದು ವಿಚಿತ್ರವೇ ಎನ್ನಬಹುದು. ಅವಳ ಬುದ್ದಿ ಹೇಗಿದೆ ಎಂದರೆ ತನ್ನ ಸ್ವಂತ ಅಕ್ಕನ ಗಂಡನನ್ನೇ ಬಲವಂತವಾಗಿ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಕಾಡಿ ಬೇಡಿ ಮದುವೆ (Brother in Law Marriage) ಯಾಗಿದ್ದಳು ಎಂದು ಹೇಳಲಾಗುತ್ತಿದೆ.

ಆದರೆ, ಮದುವೆಯಾಗಿ ವರ್ಷ ಕಳೆಯುವ ಮುನ್ನವೇ ಈಗ ಮತ್ತೊಬ್ಬ ಯುವಕನ ಜೊತೆ ಕದ್ದು ಮುಚ್ಚಿ ರಿಜಿಸ್ಟ್ರಾರ್ ಮ್ಯಾರೇಜ್ ಮಾಡಿಕೊಂಡು ಮನೆಯಿಂದ ಎಸ್ಕೇಪ್ ಆಗಿದ್ದಾಳೆ. ಅವಳ ಈ ಆಟದಿಂದ ಪೋಷಕರ ಪಿತ್ತ ನೆತ್ತಿಗೇರಿದೆ. ಹೀಗಾಗಿ ತಮ್ಮ ಮಗಳ ಹಾಗೂ ಆಕೆಯ ಹೊಸ ಗಂಡನ ಕಾರು ಅಡ್ಡಗಟ್ಟಿ ಗಲಾಟೆ ಮಾಡಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಆದರೆ ಅಲ್ಲಿ ಹೈಡ್ರಾಮವೇ ನಡೆದು ಹೋಯಿತು.

ಹೌದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ಜಯಮ್ಮ ನಾರಾಯಣಪ್ಪ ದಂಪತಿಯ ಮೂವರು ಹೆಣ್ಣು ಮಕ್ಕಳಲ್ಲಿ ಹಿರಿಯ ಮಗಳು ಮಂಜಳಾ ಅವರನ್ನು ಆಂಧ್ರದ ವಿ.ಕೋಟೆಯ ಸುಬ್ರಮಣ್ಯ ಎಂಬುವರ ಜೊತೆ 17 ವರ್ಷಗಳ ಹಿಂದೆ ಮದುವೆ ಮಾಡಲಾಗಿದೆ.

ಬಳಿಕ ಕಿರಿಯ ಮಗಳು ದಿವ್ಯಾ ತನ್ನ ಅಕ್ಕನ ಗಂಡ ಭಾವ ಸುಬ್ರಮಣ್ಯನನ್ನೇ ಕಾಡಿ ಬೇಡಿ ಪ್ರೀತಿಸಿ ಮನೆಯವರು ಬೇಡ ಅಂದರೂ ಅವರ ವಿರೋಧದ ನಡುವೆಯೂ ಕಳೆದ ವರ್ಷ ನವೆಂಬರ್ 2021ರಲ್ಲಿ ಮದುವೆಯಾದಳಂತೆ. ಆದರೆ ಮದುವೆಯಾಗಿ ವರ್ಷ ಕಳೆಯುವುದರೊಳಗೆ ಈಗ ಕೊರಿಯರ್ ಬಾಯ್ ಚಂದ್ರಶೇಖರ್ ಎಂಬಾತನನ್ನು ಪ್ರೀತಿಸಿ ಕದ್ದು ಮುಚ್ಚಿ ರಿಜಿಸ್ಟ್ರಾರ್ ಮ್ಯಾರೇಜ್ ಮಾಡಿಕೊಂಡು ಮನೆಯಿಂದ ಎಸ್ಕೇಪ್ ಆಗಿದ್ದಾಳೆ.

ದಿವ್ಯಾ ಪದವೀಧರೆ ಆಗಿದ್ದು ಮುಳುಬಾಗಿಲು ಡಿಸಿಸಿ ಬ್ಯಾಂಕ್‍ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾಗ ಕೊರಿಯರ್ ಬಾಯ್ ಚಂದ್ರಶೇಖರ್ ಎಂಬಾತನ ಪರಿಚಯವಾಗಿದೆ. ಆ ಪರಿಚಯ ಪ್ರೇಮಕ್ಕೆ ತಿರುಗಿದೆ. ನಂತರ ಭಾವನನ್ನ ಬಿಟ್ಟು ಚಂದ್ರಶೇಖರ್ ಜೊತೆ ರಿಜಿಸ್ಟ್ರಾರ್ ಮ್ಯಾರೇಜ್ ಮಾಡಿಕೊಂಡಿದ್ದಾಳೆ. ಅದು ಹೋಗಲಿ ಇವಳು ಯಾರ ಜೊತೆಯಾದರೂ ಹೋಗಲಿ ಆದರೆ ನಾವು ಈಕೆಯ ಮದುವೆ ಮತ್ತು ಕೆಲಸಕ್ಕಾಗಿ 15 ಲಕ್ಷ ರೂ. ಖರ್ಚು ಮಾಡಿದ್ದೇವೆ ಅದನ್ನು ಕೊಟ್ಟು ತೊಲಗಲಿ ಎನ್ನುತ್ತಿದ್ದಾರೆ ನೊಂದ ಪಾಲಕರು.

ಆದರೆ, ದಿವ್ಯಾ ಮಾತ್ರ ನನ್ನ ಭಾವನೊಂದಿಗೆ ಬಲವಂತವಾಗಿ ನನಗೆ ಮದುವೆ ಮಾಡಿಸಿದ್ದರು ಎಂದು ಆರೋಪಿಸುತ್ತಿದ್ದಾಳೆ. ದಿವ್ಯಾ ಮದ್ವೆಗೂ ಮುನ್ನ ಚಂದ್ರಶೇಖರ್ ಜೊತೆ ಎಸ್ಕೇಪ್ ಆಗಿದ್ದು, ಪೋಷಕರು ವಾಪಸ್ ಕರೆ ತಂದಿದ್ದರು. ಮುಳುಬಾಗಿಲು ಡಿಸಿಸಿ ಬ್ಯಾಂಕ್‍ಗೆ ಹೋದರೆ ಮತ್ತೆ ಚಂದ್ರಶೇಖರ್ ಜೊತೆ ಓಡಿ ಹೋಗುತ್ತಾಳೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಡಿಸಿಸಿ ಬ್ಯಾಂಕ್‍ಗೆ ಟ್ರಾನ್ಸ್‍ಫರ್ ಮಾಡಿಸಿದ್ದರು.

ಅಲ್ಲದೇ ಪ್ರತಿದಿನ ಮಗಳ ಜತೆ ಕಾವಲಿಗೆ ಅಂತ ತಾಯಿಯೂ ಹೋಗುತ್ತಿದ್ದಂತೆ. ಆದರೆ ಅದೊಂದು ದಿನ ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿ ತಾಯಿಯನ್ನು ಯಾಮಾರಿಸಿ ದಿವ್ಯಾ ಚಂದ್ರಶೇಖರ್ ಜೊತೆ ಎಸ್ಕೇಪ್ ಆಗಿದ್ದಾಳೆ. ಹೀಗಾಗಿ ನಾಪತ್ತೆ ಪ್ರಕರಣವನ್ನು ದಿವ್ಯಾ ಪಾಲಕರು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.

ತನಿಖೆ ಕೈಗೊಂಡ ಪೊಲೀಸರು ದಿವ್ಯಾ ಹಾಗೂ ಚಂದ್ರಶೇಖರ್ ನನ್ನ ಹುಡುಕಿ ಠಾಣೆಗೆ ಕರೆತಂದಿದ್ದಾರೆ. ಆದರೆ ಠಾಣೆ ಬಳಿ ಹೈ ಡ್ರಾಮವೇ ನಡೆದುಹೋಗಿದ್ದು, ಇದು ಪಾಲಕರು ಮಾಡಿದ ತಪ್ಪೋ ಇಲ್ಲ ಆಕೆಯೇ ಎರಡೆರಡು ಮದುಗೆಯಾದಳೋ ಎಂಬುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ