ಚುನಾವಣೆ ಹತ್ತಿರ ಬಂದಾಗ ಚುನಾವಣೆ ಅಭ್ಯರ್ಥಿಯೊಬ್ಬರು ಒಬ್ಬ ಬಡ ವೃದ್ಧ ಮತದಾರನ ಹತ್ತಿರ ಮತ ಕೆಳಲು ಹೋದ ಮತ್ತು ಅವರ ಕೈಯಲ್ಲಿ 1000 ರೂಪಾಯಿ ಇಟ್ಟು “ಈ ಸಲ ನನಗೆ ಮತ ಹಾಕಬೇಕು” ಎಂದು ಹೇಳುತ್ತಾನೆ.
ಅವಾಗ ಆ ವೃದ್ಧ ಹೇಳಿದರು “ಮಗು ನನಗೆ ಹಣ ಬೇಡ. ನಿನಗೆ ನನ್ನ ಮತ ಬೇಕಾದರೆ ನನಗೆ ಒಂದೇ ಒಂದು ಕತ್ತೆಯನ್ನು ತಂದು ಕೊಡು” ಎಂದು. ಆ ಅಭ್ಯರ್ಥಿಗೆ ಮತ ಬೇಕಾಗಿರುತ್ತದೆ. ಸರಿ ಅಂತ ಒಂದು ಕತ್ತೆಯನ್ನು ಖರೀದಿಸಲು ಹೋಗುತ್ತಾರೆ. ಎಲ್ಲಿ ಹೋದರು 20000 ಕ್ಕಿಂತ ಕಡಿಮೆ ದರದಲ್ಲಿ ಕತ್ತೆ ಸಿಗುವುದಿಲ್ಲ.
![](https://vijayapatha.in/wp-content/uploads/2023/01/25-Jan-katte-manushya-194x300.jpg)
ಆಗ ಪುನಃ ವೃದ್ಧನ ಹತ್ತಿರ ಬಂದು ಹೇಳುತ್ತಾರೆ. ಎಲ್ಲಿ ನೋಡಿದರು ಕಡಿಮೆ ದರದಲ್ಲಿ ಕತ್ತೆ ಸಿಗುತ್ತಿಲ್ಲ. ಕಮ್ಮಿ ಎಂದರೂ 20000 ರೂಪಾಯಿಗೆ ಒಂದು ಕತ್ತೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ನಾನು ನಿಮಗೆ ಕತ್ತೆಯನ್ನು ಖರೀದಿಸಿ ಕೊಡಲು ಸಾಧ್ಯವಿಲ್ಲ. ಬೇಕಾದರೆ 1000 ರೂಪಾಯಿ ಬದಲು 2000 ರೂಪಾಯಿ ಕೊಡಬಲ್ಲೆ ಎಂದು ಹೇಳುತ್ತಾನೆ.
ಆವಾಗ ವೃದ್ಧರು ಹೇಳಿದರು “ಮಗು ಹೆಚ್ಚು ಆಸೆ ಪಡಬೇಡ ನಿನ್ನ ದೃಷ್ಟಿಯಲ್ಲಿ ನನ್ನ ಬೆಲೆ ಕತ್ತೆಗಿಂತಲೂ ಕಡಿಮೆ ಇದೆ. ಒಂದು ಕತ್ತೆ 20000 ರೂಪಾಯಿಗಿಂತ ಕಡಿಮೆ ದರದಲ್ಲಿ ಸಿಗುವುದಿಲ್ಲ ಎಂದಾದರೆ ನಾನು ಮನುಷ್ಯ ಕೇವಲ 1000-2000 ಕ್ಕೆ ಹೇಗೆ ಸಿಗುತ್ತೇನೆ?
“ಎಚ್ಚರ ಮತದಾರ ಎಚ್ಚರ. ನಿಮ್ಮ ಬೆಲೆ ಏನು ಎಂದು ತೋರಿಸಿ
“ಮತ” ಮಾರಾಟಕ್ಕಿಲ್ಲ ( VOTE Not for Sale)
![](https://vijayapatha.in/wp-content/uploads/2024/02/QR-Code-VP-1-1-300x62.png)