ಬೆಂಗಳೂರು: ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಚುನಾವಣೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಜತೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಈ ಮಧ್ಯೆ ಪಕ್ಷವೊಂದರ ಚಿಹ್ನೆ ‘ಪೊರಕೆ’ಗೆ ಆಯೋಗವು ಮತದಾನದಂದು ಗೇಟ್ ಪಾಸ್ ನೀಡಿದೆ. ಮೇ 10 ರಂದು ಮತದಾನ ನಡೆಯಲಿದೆ. ನೀತಿ ಸಂಹಿತೆ ಪಾಲನೆ ದೃಷ್ಟಿಯಿಂದ ಮತದಾನದ ಎರಡು ಮೂರು ದಿನದ ಮೊದಲೇ ಬಾವುಟ ಪ್ರದರ್ಶನ, ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.
ಈ ವೇಳೆ ಯಾವುದೇ ಪಕ್ಷಗಳು ಮತದಾರರ ಮೇಲೆ ಆಮಿಷ ಒಡ್ಡದಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಪೊರಕೆ ಮರೆಮಾಚುವುದು ಹೇಗೆ ಎಂಬ ಪ್ರಶ್ನೆ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳನ್ನು ಕಾಡಿದೆ. ಈ ಸಂಬಂಧ ನಿರ್ಧಾರ ಮಾಡಿರುವ ಅವರು, ಆಮ್ ಆದ್ಮಿ ಪಕ್ಷದ ಚಿಹ್ನೆ ಆಗಿರುವ ‘ಪೊರಕೆ’ಯನ್ನು ಮತಗಟ್ಟೆ ಆವರಣದಲ್ಲಿ ಮತದಾನಕ್ಕೂ ಮುನ್ನ 48 ಗಂಟೆ ನಿಷೇಧಿಸಲಾಗಿದೆ. ಹೀಗಾಗಿ ಆವರಣದಲ್ಲಿ ಎಲ್ಲಿಯೂ ಪೊರಕೆ ಕಾರಣದಂತೆ ಹಾಗೂ ಸ್ವಚ್ಛತೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಆಯೋಗ ಸೂಚಿಸಿದೆ.
ಎಲ್ಲ ರಾಜಕೀಯ ಪಕ್ಷಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾಧಿಕಾರಿಗಳು ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಇದರ ನಡುವೆ ಮತದಾರರನ್ನು ಎಎಪಿ ಪಕ್ಷದ ಚಿಹ್ನೆ ಪೊರಕೆ ಸಹ ಸೆಳೆಯಬಹುದು ಎಂದು ಅಂದಾಜಿಸಿರುವ ಅಧಿಕಾರಿಗಳು ಮತಗಟ್ಟೆಯ ಆವರಣದಲ್ಲಿ ಎರಡು ದಿನ ಕಾಣದಂತೆ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಮ್ ಆದ್ಮಿ ಪಕ್ಷವು ಕರ್ನಾಟಕದಲ್ಲಿ 214 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಪ್ರತಿ ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳು ಕಾರ್ಯಕರ್ತರು ಭರ್ಜರಿ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದಾರೆ. ಆದರೆ ಅವರ ಪೊರಕೆ ಚಿಹ್ಮೆಯನ್ನು ನೀತಿ ಸಂಹಿತೆಯ ನಿಯಮದಂತೆ ಮರೆಮಾಚಲೇ ಬೇಕಿದೆ.
ಮತದಾನ ಮೇ 10 ರಂದು ನಡೆಯುವುದಿದ್ದರೆ ಅದಕ್ಕೂ ಮುನ್ನ 48 ಗಂಟೆ ಎಂದರೆ ಮೇ 8ರಂದೇ ಮತಗಟ್ಟೆಯ ಆವರಣದಲ್ಲಿ ಎಎಪಿ ಪಕ್ಷದ ಚಿಹ್ನೆ ಪೊರಕೆ ಕಾಣದಂತೆ ಚುನಾವಣೆ ಆಯೋಗ ಅಗತ್ಯ ವ್ಯವಸ್ಥೆಗೆ ಮಾಡಲಿದೆ. ಈ ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣವು ಕಮಲ ಆಕಾರದಲ್ಲಿದೆ. ಹಾಗಾದರೆ ಅದು ಸಹ ಮತದಾರರ ಮೇಲೆ ಚುನಾವಣೆ ಹೊತ್ತಿನಲ್ಲಿ ಪ್ರಭಾವ ಬೀರಲಿದೆ ಎಂದು ಅದನ್ನು ಪರದೆಯಿಂದ ಮುಚ್ಚಬೇಕು. ಹೀಗೆಂಬ ಮಾತುಗಳು ಈಗಾಗಲೇ ಸಾರ್ವಜನಿಕವಾಗಿ ವ್ಯಕ್ತವಾಗಿತ್ತು.
ಇನ್ನೂ ಕಾಂಗ್ರೆಸ್ ಪಕ್ಷದ ಚಿಹ್ಮೆ ಕೈ ಹಾಗೆಂದು ಕೈ ಕತ್ತರಿಲಾಗುತ್ತದೆಯೇ ಎಂದು ಪ್ರಶ್ನಿ ಮಾಡಲಾಗಿತ್ತು. ಈಎಲ್ಲದರ ನಡುವೆತೂ ಸದ್ಯ ಎರಡು ದಿನ ಮತಗಟ್ಟೆಗಳ ಆವರಣದಲ್ಲಿ ಪೊರಕೆ ನಿರ್ಬಂಧ ಮಾಡಿರುವ ಚುನಾವಣಾ ಆಯೋಗದ ನಿರ್ಧಾರ ಸದ್ದು ಮಾಡಲಿದೆ ಎಂದು ಹೇಳಲಾಗುತ್ತಿದೆ.