NEWSನಮ್ಮಜಿಲ್ಲೆನಮ್ಮರಾಜ್ಯ

ಪತ್ರಪಥ: ಮುಷ್ಕರದಲ್ಲಿ ವಜಾಗೊಂಡ ಸಾರಿಗೆ ನೌಕರರು ಒಳಬರಬೇಕು

ವಿಜಯಪಥ ಸಮಗ್ರ ಸುದ್ದಿ

ಹಾಸನ: ನನ್ನೆಲ್ಲಾ ಸಾರಿಗೆ ಸಂಸ್ಥೆ ನಾಲ್ಕು ನಿಗಮದ ನೌಕರರಲ್ಲಿ ಒಂದು ಮನವಿ. ನಮ್ಮ ಕಾರ್ಮಿಕರಿಗೆ ಆದಂತಹ ಅನ್ಯಾಯವು ಯಾವ ನಿಗಮದ ಮಂಡಳಿಗಳಾಗಲಿ ಯಾವುದೇ ಸಂಘ ಸಂಸ್ಥೆಯ ಕಾರ್ಮಿಕರಾಗಲಿ ನಮಗೆ ಆದಂತಹ ಕಷ್ಟ ಮತ್ತು ಅವಮಾನಗಳು ಆರೋಪಗಳು ಯಾವ ಕಾರ್ಮಿಕರಿಗೂ ಆಗಬಾರದು.

ಸಾರಿಗೆ ಸಂಸ್ಥೆಯ ಎಲ್ಲ ಸಂಘಟನೆಗಳ ಪದಾಧಿಕಾರಿಗಳಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ, 6ನೇ ವೇತನ ಆಯೋಗವಾಗಲಿ, ಸರ್ಕಾರಿ ನೌಕರರಾಗಲಿ, ಸರ್ಕಾರಿ ನೌಕರರ ಸರಿ ಸಮಾನ ವೇತನ ವಾಗಲಿ, ಅಗ್ರಿಮೆಂಟ್ ಆಗಲಿ, ಪರ್ಸೆಂಟೇಜ್ ಇವೆಲ್ಲವನ್ನು ಬಿಟ್ಟು ನಮ್ಮ ಸಾರಿಗೆ ಸಂಸ್ಥೆಯ ಕಾರ್ಮಿಕರು ಮುಷ್ಕರದ ಸಮಯದಲ್ಲಿ ಆದಂತಹ ಪೊಲೀಸ್‌ ಕೇಸುಗಳು, ವಜಾ, ವರ್ಗಾವಣೆ ಇಂತಹ ಪ್ರಕರಣಗಳನ್ನು ಮೊದಲು ಬಗೆಹರಿಸಿ.

ಸರಿಸುಮಾರು ಸಾರಿಗೆ ಮುಷ್ಕರದ ಸಮಯದಿಂದ ಇಲ್ಲಿಯವರೆಗೆ 17 ತಿಂಗಳು ವಜಾ ಆದಂತಹ ಸಾರಿಗೆ ಕಾರ್ಮಿಕರಿಗೆ ವೇತನವಿಲ್ಲ, ಅವನ ಹೆಂಡತಿ ಮಕ್ಕಳಿಗೆ ತಿನ್ನಲು ಅನ್ನವಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರವೇಶ ಶುಲ್ಕ ಕಟ್ಟಲೂ ಹಣವಿಲ್ಲ.

ಜನ್ಮ ಕೊಟ್ಟ ತಂದೆ ತಾಯಿಯರ ಅನಾರೋಗ್ಯಕ್ಕೆ ಔಷಧ ಕೊಡಿಸಲು ಹಣವಿಲ್ಲ. ಇಂತಹ ವಿಚಾರಗಳ ಬಗ್ಗೆ ಗಮನಹರಿಸಿ ಆ ಮನನೊಂದ ಕಾರ್ಮಿಕರು ಅವರಿಗಾಗಿ ಮುಷ್ಕರ ಮಾಡಲಿಲ್ಲ, ನಾವೆಲ್ಲ ಒಂದೇ ತಾಯಿಯ ಮಕ್ಕಳೆಂದು ಸಾರಿಗೆ ಸಂಸ್ಥೆಯ ಪರವಾಗಿ ಮುಷ್ಕರ ಮಾಡಿದರು. ಇಂತಹ ಕಾರ್ಮಿಕರಿಗೆ ಯಾರೂ ಕೂಡ ಮೋಸ ಮಾಡಬೇಡಿ ಸಾರಿಗೆ ಸಂಸ್ಥೆಯಲ್ಲಿ ಬೆಳೆಸಿ ಮತ್ತು ಉಳಿಸಿ.

l ಪ್ರದೀಪ್‌ ಕುಮಾರ್‌, ಹಾಸನ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ