ಪಿರಿಯಾಪಟ್ಟಣ: ತಾಲೂಕಿನ 34 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಸರ್ವೆ ನಡೆಸಿ ತೆರವು ಮಾಡಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಆರ್.ಕೃಷ್ಣಕುಮಾರ್ ತಿಳಿಸಿದ್ದಾರೆ.
vijayapatha.in - ವಿಜಯಪಥ.ಇನ್ ನಿಮಗೆ ವಿಶ್ವಾಸನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅನಿಸಿದರೆ ನಮಗೆ ಆರ್ಥಕವಾಗಿ ಬಲ ನೀಡಿ. ಇನ್ನಷ್ಟು ಸತ್ಯನಿಷ್ಠ ವರದಿಗಳನ್ನು ಮಾಡುವುದಕ್ಕೆ ಬೆಂಬಲ ನೀಡಿ. ಕನಿಷ್ಠ 100 ರೂ. ಒಮ್ಮೆಗೆ ಹಾಕಿ. ನಮ್ಮನ್ನು ಪ್ರೋತ್ಸಾಹಿಸಿ.
ತಾಲೂಕಿನ ಜೋಗನಹಳ್ಳಿ, ಬೆಟ್ಟದಪುರ, ಅನಿವಾಳು, ಹರದೂರು, ಮಾಕೋಡು, ಕೆಲ್ಲೂರು ಬೆಕ್ಯಾ ಗ್ರಾಮಗಳಲ್ಲಿ ಒತ್ತುವರಿ ಕಾರ್ಯಚರಣೆ ನಡೆಸಿ ಜೋಗನಹಳ್ಳಿ ಗ್ರಾಮದಲ್ಲಿ ಮಾತನಾಡಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸಕರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಂಧರ್ಭದಲ್ಲಿ ಗ್ರಾಮಸ್ತರು ಕೆರೆಕಟ್ಟೆಗಳ ಒತ್ತುವರಿ ಹಾಗೂ ಜಮೀನಿಗೆ ತೆರಳುವ ರಸ್ತೆಗಳನ್ನು ಸರಿಪಡಿಸುವಂತೆ ದೂರು ನೀಡುತ್ತಿದ್ದರು.
ಅಲ್ಲದೆ ಕೆಲವು ಪ್ರಭಾವಿಗಳು ಗ್ರಾಮಗಳಲ್ಲಿ ಕರೆಕಟ್ಟೆಗಳ ಮತ್ತು ಸ್ಮಶಾನಗಳು ಒತ್ತುವರಿ ಮಾಡಿಕೊಂಡು ಸಾರ್ವಜಿನಿಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಭೂ ಮಾಪನ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆಗಳ ನೇತೃತ್ವದಲ್ಲಿ ಒತ್ತುವರಿ ಆಂದೋಲನ ಹಮ್ಮಿಕೊಂಡು ತಾಲೂಕಿನ ಸುಮಾರು 52 ಕೆರೆಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಭುವನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಬೆಕ್ಕರೆ ಮತ್ತು ಜೋಗನಹಳ್ಳಿಯಲ್ಲಿ ಸರ್ವೆ ಮಾಡಲಾಯಿತು.
ಭೂಮಾಪನಾಧಿಕಾರಿ ರವೀಂದ್ರ, ಸಹಾಯಕ ಮಹದೇವ್, ಭುವನಹಳ್ಳಿ ಗ್ರಾ.ಪಂ. ಪಿಡಿಒ ಬಸವರಾಜು, ಲೆಕ್ಕ ಸಹಾಯಕ ಶ್ರೀನಿವಾಸ, ಗ್ರಾಮಲೇಕ್ಕಿಗ ವೀಕ್ಷಿತಾ, ಸಹಾಯಕ ಗೋಪಿ, ಗ್ರಾಮಸ್ಥರಾದ ಆರ್.ವೆಂಕಟೇಶ್, ಸೋಮಣ್ಣ ಮಹೇಶ್ ಸೇರಿದಂತೆ ಮತ್ತಿತರರು ಇದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)