ನಮ್ಮರಾಜ್ಯ

ಪಾಟೀಲ ಪುಟ್ಟಪ್ಪಗೆ ಶೀಘ್ರದಲ್ಲಿ ಬಸವರಾಷ್ಟ್ರೀಯ ಪುರಸ್ಕಾರ: CM BSY

ವಿಜಯಪಥ ಸಮಗ್ರ ಸುದ್ದಿ

 

 

ಹುಬ್ಬಳ್ಳಿ:  ನಾಡೋಜ ಪಾಟೀಲ ಪುಟ್ಟಪ್ಪ ಅವರಿಗೆ ಕರ್ನಾಟಕ ರಾಜ್ಯ ಸರಕಾರದಿಂದ 2017 ನೇ ಸಾಲಿಗಾಗಿ ಘೋಷಿಸಿದ್ದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿಯನ್ನು  ಶೀಘ್ರದಲ್ಲಿ ಸರಕಾರದಿಂದ ಪ್ರದಾನ ಮಾಡಲಾಗುವುದು ಎಂದು  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಮಧ್ಯಾಹ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ವಿಚಾರಿಸಿದ ನಂತರ ಮಾದ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ, ಮಾತನಾಡಿದ ಅವರು

 ರಾಷ್ಟ್ರೀಯ ಬಸವ ಪುರಸ್ಕಾರದೊಂದಿಗೆ ನಗದು ಹತ್ತು ಲಕ್ಷ ರೂ.ಗಳನ್ನು ಮತ್ತು ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ಚಿಕಿತ್ಸೆ ವೆಚ್ಚವನ್ನು ಸರಕಾರ ಬರಿಸಲಿದೆ ಎಂದು ತಿಳಿಸಿದರು.

ನಾಡೋಜ ಡಾ.ಪುಟ್ಟಪ್ಪನವರು ಈಗ ಸದ್ಯ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇದ್ದು, ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವದಾಗಿ   ಹೇಳಿದರು.

Leave a Reply