NEWSನಮ್ಮಜಿಲ್ಲೆನಮ್ಮರಾಜ್ಯ

ಬಿಎಂಟಿಸಿಯ ಲಂಚಬಾಕ 8 ಅಧಿಕಾರಿಗಳ ಅಮಾನತು: ಭ್ರಷ್ಟರ ಹೆಡೆಮುರಿ ಕಟ್ಟಿದ ಎಸ್‌&ವಿ ಮುಖ್ಯಸ್ಥೆ ರಾಧಿಕಾ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನಾಲ್ಕೂ ನಿಗಮಗಳಲ್ಲೂ ಬಹುತೇಕ ಭ್ರಷ್ಟ ಅಧಿಕಾರಿಗಳೇ ತುಂಬಿದ್ದು ಇತಿಹಾಸದಲ್ಲೇ ತಮ್ಮ ನೌಕರರಿಂದಲೇ ಲಂಚ ಪಡೆಯುವ ಏಕೈಕ ಸಂಸ್ಥೆಗಳು ಎಂದರೆ ಅದು ಸಾರಿಗೆ ನಿಗಮಗಳು ಮಾತ್ರ ಎಂಬುದನ್ನು ಈ ಹಿಂದಿನಿಂದಲೂ ವಿಜಯಪಥ ಸಮಗ್ರವಾದ ವರದಿಯನ್ನು ಮಾಡುತ್ತಲೇ ಬರುತ್ತಿದೆ.

ಕಳೆದ ಮೂರು ವರ್ಷಗಳಿಂದ ಸಾರಿಗೆ ನಿಗಮಗಳಲ್ಲಿ ಚಾಲಕ ಮತ್ತು ನಿರ್ವಾಹಕರ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ವಿಜಯಪಥ ವರದಿ ಮಾಡುತ್ತಲೇ ಇದೆ. ಹೀಗಾಗಿ ಈ ಬಗ್ಗೆ ಎಚ್ಚೆತ್ತುಕೊಂಡಿರುವ ಹಿರಿಯ ಅಧಿಕಾರಿಗಳು ಮತ್ತು ಎಂಡಿಗಳು ಸಂಸ್ಥೆಗಳಲ್ಲಿರುವ ಭ್ರಷ್ಟ ಅಧಿಕಾರಿಗಳ ಹೆಡೆ ಮುರಿ ಕಟ್ಟಲು ಮುಂದಾಗಿದ್ದಾರೆ.

ಅದಕ್ಕೆ ನಿದರ್ಶನ ಎಂಬಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನೌಕರರಿಂದ ಲಂಚ ಪಡೆದ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಲಂಚ ಬಾಕರಿಗೆ ಸಿಂಹಸ್ವಪ್ನವಾಗಿದ್ದಾರೆ ಭದ್ರತಾ ಮತ್ತು ಜಾಗೃತದಳದ ಮುಖ್ಯಸ್ಥರು.

ಹೌದು ಬಿಎಂಟಿಸಿ ನಿಗಮದಲ್ಲಿ ಲಂಚಾವತಾರದ ಕರ್ಮಕಾಂಡವನ್ನು ಭೇದಿಸಿರುವ ಭದ್ರತಾ ಮತ್ತು ಜಾಗೃತದಳದ ಅಧಿಕಾರಿಗಳು ಚಾಲಕ ಮತ್ತು ನಿರ್ವಾಹಕರ ರಕ್ತ ಹೀರುತ್ತಿದ್ದ ತಮ್ಮ ಆಪ್ತರ ಅಕೌಂಟ್ ಮೂಲಕ ಲಂಚ ಪಡೆಯುತ್ತಿದ್ದ ಎಂಟು ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಭ್ರಷ್ಟರ ಹೆಡೆಮುರಿ ಕಟ್ಟಿದ್ದಾರೆ.

ಇದಿಷ್ಟೇ ಅಲ್ಲದೆ ನಿಗಮದಲ್ಲಿ 94 ನೌಕರರಿಂದ ಲಂಚ ಪಡೆದು ಡ್ಯೂಟಿ ನೀಡಿರುವ ಆರೋಪದಡಿ ಮತ್ತಷ್ಟು ಭ್ರಷ್ಟ ಅಧಿಕಾರಿಗಳು ಅಮಾನತಾಗುವ ಸಾಧ್ಯತೆ ಇದೇ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಬಿಎಂಟಿಸಿ ಸೇರಿ ಎಲ್ಲ ನಾಲ್ಕೂ ನಿಗಮಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಆರೋಪ ನೌಕರರಿಂದ ಈ ಹಿಂದಿನಿಂದಲೂ ಕೇಳಿಬರುತ್ತಿತ್ತು. ಅದರಲ್ಲಿ ಸದ್ಯ ಬಿಎಂಟಿಸಿಯಲ್ಲಿ ಡ್ಯೂಟಿ ಬೇಕು ಅಂದ್ರೆ ಚಾಲಕ, ನಿರ್ವಾಹಕರಿಂದ ವಾರಕ್ಕೆ ಐನೂರು ರೂಪಾಯಿ, ತಿಂಗಳಿಗೆ ಎರಡು ಸಾವಿರ ರೂಪಾಯಿ ಲಂಚ ಕೊಡಲೇ ಬೇಕಿತ್ತು. ಅದು ಆ ಲಂಚದ ಹಣವನ್ನು ತಮ್ಮ ಆಪ್ತರ ಅಕೌಂಟ್ ಮೂಲಕ ಗೂಗಲ್ ಪೇ, ಫೋನ್ ಪೇ ಮೂಲಕ ಅಧಿಕಾರಿಗಳು ಲಂಚ ಪಡೆಯುತ್ತಿದ್ದರು. ಲಂಚಕೊಡಲಿಲ್ಲ ಎಂದ್ರೆ ಡ್ಯೂಟಿ ನೀಡದೆ ನೌಕರರಿಗೆ ಕಿರುಕುಳ ನೀಡುತ್ತಿದ್ದರು. ಇದೇ ಕಾರಣಕ್ಕೆ ಕಳೆದ ಕೆಲ ತಿಂಗಳ ಹಿಂದೆ ನಿಗಮದ ಚಾಲಕ ನಿರ್ವಾಹಕರು ಆತ್ಮಹತ್ಯೆಗೆ ಶರಣಾಗಿದ್ದರು. ಆ ಬಗ್ಗೆ ಪ್ರತಿಭಟನೆಯೂ ಕೂಟ ನಡೆಯಿತು.

ಎಎಪಿ ಮುಖಂಡರು ಕೂಡ ಬಿಎಂಟಿಸಿಯಲ್ಲಿ ನಡೆಯುತ್ತಿರುವ ಲಂಚಾವತಾರದ ಬಗ್ಗೆ ಪ್ರತಿಭಟನೆ ಮಾಡಿ ನೌಕರರಿಗೆ ಬೆಂಬಲವಾಗಿ ನಿಂತುಕೊಂಡಿದ್ದರು. ಇನ್ನು ವಾಸ್ತವವಾಗಿ, ಲಂಚದ ಕಾರಣದಿಂದ ಕೆಲ ದಿನಗಳ ಹಿಂದೆ ಆರ್. ಆರ್. ನಗರ ಡಿಪೋದ ಚಾಲಕ ಕಂ ನಿರ್ವಾಹಕ ಹೊಳೆಬಸಪ್ಪ ಆತ್ಮಹತ್ಯೆಗೆ ಶರಣಾಗಿದ್ದರು.

ಡಿಪೋ ವ್ಯವಸ್ಥಾಪಕ ಮಲ್ಲಿಕಾರ್ಜುನಯ್ಯ ಡ್ಯೂಟಿ ನೀಡಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಹೊಳೆಬಸಪ್ಪ ಅವರ ಜೇಬಲ್ಲಿದ್ದ ಡೆತ್ ನೋಟ್ ನಲ್ಲಿ ಲಂಚದ ಬಗ್ಗೆ ಬರೆದುಕೊಂಡಿದ್ದರು. ಇದರ ಆಧಾರದ ಮೇಲೆ ಬಿಎಂಟಿಸಿಯ ಎಂಡಿ ಜಿ. ಸತ್ಯವತಿ ತನಿಖೆಗೆ ಆದೇಶ ಮಾಡಿದ್ದರು. ಇದರನ್ವಯ ನಿರಂತರವಾಗಿ ತನಿಖೆ ನಡೆಸಿದ್ದ ಭದ್ರತಾ ಮತ್ತು ಜಾಗೃತದಳದ ಮುಖ್ಯಸ್ಥೆ ರಾಧಿಕಾ ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟಿದ್ದಾರೆ.

ಅಮಾನತಾದ ಬಿಎಂಟಿಸಿ ಅಧಿಕಾರಿಗಳು: 1- ರಮೇಶ್  ಕೆ. ಡಿಪೋ- 8 ಕಾನ್ಸ್‌ಟೇಬಲ್ (ಪೋನ್ ಪೇ ಮೂಲಕ ಲಂಚ ಪಡೆದಿರುವ ಹಣ- 51,630 ರೂಪಾಯಿ)

2- ಮಹಮ್ಮದ್ ರಫಿ, ಸಿಬ್ಬಂದಿ ಮೇಲ್ವಿಚಾರಕ ಡಿಪೋ- 8 ( ಗೂಗಲ್ ಪೇ – 20, 600 ರೂಪಾಯಿ)

3- ಕೆ.ಎಸ್ ಚಂದನ್, ಕಿರಿಯ ಸಹಾಯಕ. ಡಿಪೋ- 8 ( ಗೂಗಲ್ ಪೇ -7,28, 045 ರೂಪಾಯಿ)

4- ಇಬ್ರಾಹಿಂ ಜಿಬೀವುಲ್ಲಾ, ಕಾನ್ಸ್‌ಟೇಬಲ್ ಡಿಪೋ- 8 ( ಪೋನ್ ಪೇ- 46,631 ರೂಪಾಯಿ)

5- ಗೋವರ್ಧನ್ ಎಚ್.ಎಂ. ಚಾಲಕ ಡಿಪೋ- 8 ( ಗೂಗಲ್ ಪೇ, ಪೋನ್ ಪೇ ಮೂಲಕ- 3,15,182 ರೂಪಾಯಿ)

6- ಕೆ. ಶರವಣ, ಅಂಕಿಅಂಶ ಸಹಾಯಕ ಡಿಪೋ-8 ( ಪೋನ್ ಪೇ, ಗೂಗಲ್ ಪೇ- 64,500 ರೂಪಾಯಿ)

7- ಶ್ರವಣ್ ಕುಮಾರ್ ಸಾತಪತಿ, ವಿಭಾಗೀಯ ಭದ್ರತಾ ಅಧೀಕ್ಷಕ( ಬಿಎಂಟಿಸಿಯ ಭದ್ರತಾ ಇಲಾಖೆ) ಹಣ ವಸೂಲಿಯಂತ ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪ

8- ಪಂಕಜಾ.ಕೆ.ಆರ್ ಮಾರ್ಕೆಟ್, ಸಹಾಯಕ ಸಂಚಾ ಅಧೀಕ್ಷಕಿ. ಕ್ಯಾಷ್ ಮೂಲಕ ಮೂರು ಸಾವಿರ ಲಂಚ ಪಡೆದಿದ್ದ ವೇಳೆ ಸಿಕ್ಕಿಬಿದ್ದ ಮಹಿಳಾ ಅಧಿಕಾರಿ

ವರ್ಗಾವಣೆ ಆದ ಅಧಿಕಾರಿಗಳು: ಫೋನ್ ಪೇ ಗೂಗಲ್ ಪೇ ಲಂಚ ಪ್ರಕರಣದ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ಜಗದೀಶ್ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಚಂದ್ರಶೇಖರ್ ಕಲಬುರಗಿಯ ಕಲ್ಯಾಣ ಕರ್ನಾಟಕ ಸಾರಿಗೆಗೆ ಶಿಫ್ಟ್ ಆಗಿದ್ದರೆ, ಜಗದೀಶ್ ಅವರನ್ನು ರಾಮನಗರ ಕೆಎಸ್ಆರ್ಟಿಸಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಇವರಷ್ಟೇ ಅಲ್ಲ ರಾಜ್ಯದ ನಾಲ್ಕೂ ನಿಗಮಗಳಲ್ಲಿ ಇರುವ ಬಹುತೇಕ ಎಲ್ಲ ಡಿಪೋಗಳಲ್ಲೂ ಈ ಲಂಚಾವತಾರ ನಿರಂತವಾಗಿ ನಡೆಯುತ್ತಲೇ ಇದೆ. ಅದನ್ನು ಮುಚ್ಚಿಹಾಕಲು ಕೆಲ ಡಿಪೋ ವ್ಯವಸ್ಥಾಪಕರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೇ ಲಂಚಕೊಟ್ಟು ಇನ್ನಷ್ಟು ಸುಲಿಗೆ ಮಾಡಲು ಮುಂದಾಗುತ್ತಾರೆ. ಈ ರೀತಿ ಲಂಚಬಾಕರಿಗೆ ಬಿಎಂಟಿಸಿಯಲ್ಲಿ ಸಿಂಹಸ್ವಪ್ನವಾಗಿ ಬಂದಿರುವ ಭದ್ರತಾ ಮತ್ತು ಜಾಗೃತದಳದ ಮುಖ್ಯಸ್ಥೆ ರಾಧಿಕಾ ಅವರಂತೆ ಉಳಿದ ಮೂರು ನಿಗಮಗಳ ಭದ್ರತಾ ಮತ್ತು ಜಾಗೃತದಳದ ಅಧಿಕಾರಿಗಳು ಕ್ರಮ ಜರುಗಿಸಿದರೆ ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟುವುದರಲ್ಲಿ ಯಾವುದೇ ಸಂಶಯವಿಲ್ಲ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ