ಮುಂಬೈ: ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸಚಿನ್ ತೆಂಡುಲ್ಕರ್. ಟೀಂ ಇಂಡಿಯಾದ ರತ್ನತ್ರಯರು. ಇವರನ್ನು ಓವರ್ ಟೇಕ್ ಮಾಡ್ತೀನಿ ಅಂತ ಬಂದೋರೆಲ್ಲಾ ಹೇಳಹೆಸರಿಲ್ಲದೇ ಮೂಲೆಗುಂಪಾಗಿದ್ದಾರೆ. ಆದರೆ ಅದು ಹಿಂದಿನ ಮಾತು. ಈಗ ಬಾಲಿವುಡ್ ಘರ್ಜನೆ ಮುಂದೆ ಈ ಮೂವರು ದಿಗ್ಗಜರು ಮಂಕಾಗಿದ್ದಾರೆ.
ಬಾಲಿವುಡ್ ವರ್ಸಸ್ ಇಂಡಿಯನ್ ಕ್ರಿಕೆಟರ್ಸ್! ಇವರಲ್ಲಿ ಯಾರು ಬೆಸ್ಟ್ ? ಯಾರಿಗೆ ಡಿಮ್ಯಾಂಡ್ ಹೆಚ್ಚು ? ಈ ಪ್ರಶ್ನೆಗಳಿಗೆ ಆನ್ಸರ್ ಕಂಡುಕೊಳ್ಳೋದು ತುಸು ಕಷ್ಟವೇ. ಯಾಕಂದ್ರೆ ಟೀಮ್ ಇಂಡಿಯಾ ಆಟಗಾರರನ್ನ ಜನರು ಎಷ್ಟು ಪ್ರೀತಿಸ್ತಾರೋ, ಬಾಲಿವುಡ್ ನಟರನ್ನು ಅಷ್ಟೇ ಆರಾಧಿಸ್ತಾರೆ. ಇಲ್ಲಿ ಕ್ಷೇತ್ರ ಬದಲಾದ್ರು ಅವರ ಉದ್ದೇಶ ಒಂದೇ. ಅದೇನಂದ್ರೆ ಎಂಟರ್ಟೈನ್ಮೆಂಟ್. ಈ ವಿಚಾರದಲ್ಲಿ ಕ್ರಿಕೆಟರ್ಸ್ ಹಾಗೂ ಸಿನಿಮಾ ನಟರನ್ನ ಮೀರಿಸೋರೆ ಇಲ್ಲ.
ಬಾಲಿವುಡ್ VS ಕ್ರಿಕೆಟರ್ಸ್ – ಬ್ರಾಂಡ್ ಫೈಟ್..!: ಕ್ರಿಕೆಟರ್ಸ್ ಹಾಗೂ ಬಿಟೌನ್ ಆಕ್ಟರ್ಸ್ ಜನರಿಗೆ ಭರಪೂರ ಮನರಂಜನೆ ಒದಗಿಸೋದು ಎಷ್ಟು ನಿಜನೋ ಬಾಲಿವುಡ್ ವರ್ಸಸ್ ಕ್ರಿಕೆಟರ್ಸ್ ಮಧ್ಯೆ ಬ್ರಾಂಡ್ ಫೈಟ್ ಏರ್ಪಟ್ಟಿರೋದು ಅಷ್ಟೇ ಸತ್ಯ. ಹೌದು, ರೀಸೆಂಟ್ಲಿ ಬಿಡುಗಡೆಗೊಂಡ ಮಾರ್ಕೆಟಿಂಗ್ ಸರ್ವೆಯಲ್ಲಿ ಇಬ್ಬರಲ್ಲಿ ಯಾರಿಗೆ ಡಿಮ್ಯಾಂಡ್ ಹೆಚ್ಚಿದೆ ಅನ್ನೋ ಸತ್ಯ ಬಹಿರಂಗಗೊಂಡಿದೆ. ಬ್ರಾಂಡ್ ವ್ಯಾಲ್ಯೂ ವಿಚಾರದಲ್ಲಿ ಬಾಲಿವುಡ್ ಸಿನಿತಾರೆಗಳು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರನ್ನ ಹಿಂದಿಕ್ಕಿ ಅಚ್ಚರಿ ಮೂಡಿಸಿದ್ದಾರೆ.
ಕಿಂಗ್ ಕೊಹ್ಲಿ ಕೈತಪ್ಪಿದ ಭಾರತದ ಟಾಪ್ ಸೆಲಬ್ರಟಿ ಪಟ್ಟ..!: ವಿರಾಟ್ ಕೊಹ್ಲಿ. ರೂಲರ್ ಆಫ್ ದಿ ಕ್ರಿಕೆಟ್..ಮನೋಜ್ಞ ಆಟದಿಂದ ಕ್ರಿಕೆಟ್ ಲೋಕವನ್ನ ಆಳ್ತಿರುವ ಕಿಂಗ್ ಕೊಹ್ಲಿ ಟೀಮ್ ಇಂಡಿಯಾ ಮಟ್ಟಿಗೆ ಸೂಪರ್ ಸ್ಟಾರ್. ಅಷ್ಟೇ ಏಕೆ ಕಳೆದ ಐದು ವರ್ಷಗಳಿಂದ ಭಾರತದ ಟಾಪ್ ಸೆಲಬ್ರಿಟಿ ಕೂಡ ಅನ್ನಿಸಿಕೊಂಡಿದ್ರು. ಆದ್ರೆ ಈ ಬಾರಿ ಬಾಲಿವುಡ್ ಸ್ಟಾರ್ನಟವೊಬ್ಬ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿಯನ್ನೇ ಓವರ್ ಟೇಕ್ ಮಾಡಿದ್ದಾರೆ.
ಬ್ರಾಂಡ್ ವ್ಯಾಲ್ಯುನಲ್ಲಿ ಕೊಹ್ಲಿ ಮೀರಿಸಿದ ರಣ್ವೀರ್ ಸಿಂಗ್: ಬ್ರಾಂಡ್ ವ್ಯಾಲ್ಯು ವಿಚಾರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ರಣ್ವೀರ್ ಸಿಂಗ್ ದಿ ಗ್ರೇಟ್ ವಿರಾಟ್ ಕೊಹ್ಲಿಯನ್ನ ಮೀರಿಸಿದ್ದಾರೆ. ಭಾರತದ ಟಾಪ್-1 ಸೆಲಬ್ರಿಟಿ ಆಗಿರೋ ರಣ್ವೀರ್ ರ ಬ್ರಾಂಡ್ ವ್ಯಾಲ್ಯು 181.7 ಮಿಲಿಯನ್ ಡಾಲರ್. ಅಂದ್ರೆ 1503 ಕೋಟಿಗೂ ಅಧಿಕ.
ಇನ್ನು ಭಾರತದ ಟಾಪ್-2 ಸೆಲಬ್ರಿಟಿ ಅನ್ನಿಸಿಕೊಂಡಿರೋ ಕಿಂಗ್ ಕೊಹ್ಲಿ, ಬ್ರಾಂಡ್ ವ್ಯಾಲ್ಯೂನಲ್ಲಿ ರಣ್ಬೀರ್ ಸಿಂಗ್ಗೆ ಪ್ರಬಲ ಪೈಪೊಟಿ ಒಡ್ಡಿದ್ದಾರೆ. ಸೆಂಚುರಿ ಸರದಾರ ಪ್ರಸ್ತುತ ಬ್ರಾಂಡ್ ವ್ಯಾಲ್ಯೂ ಬರೋಬ್ಬರಿ 1460 ಕೋಟಿ ರೂಪಾಯಿ. ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದ್ದ ವಿರಾಟ್ ಬ್ರಾಂಡ್ ವ್ಯಾಲ್ಯೂ ಮೊದಲ ಬಾರಿ ಕುಸಿದಿದೆ. ಹೀಗಾಗಿನೇ ಬಿಟೌನ್ ಸ್ಟೈಲಿಶ್ ಆಕ್ಟರ್ ಕಿಂಗ್ ಕೊಹ್ಲಿಗೆ ಪಂಚ್ ಕೊಟ್ಟಿದ್ದಾರೆ.
ಧೋನಿ-ಸಚಿನ್ಗಿಂತ ಅಕ್ಷಯ್ ಕುಮಾರ್ ಬೆಸ್ಟ್..!ಇನ್ನು ಬ್ರಾಂಡ್ ವ್ಯಾಲ್ಯುನಲ್ಲಿ ಬಾಲಿವುಡ್ ಸಿನಿಮಂದಿ ಬರೀ ಕಿಂಗ್ ಕೊಹ್ಲಿಯನ್ನಷ್ಟೇ ಓವರ್ ಟೇಕ್ ಮಾಡಿಲ್ಲ. ಬದಲಿಗೆ ಮಿಸ್ಟರ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ರನ್ನ ಹಿಂದಿಕ್ಕಿದ್ದಾರೆ. 153.6 ಮಿಲಿಯನ್ ಡಾಲರ್ ಬ್ರಾಂಡ್ ವ್ಯಾಲ್ಯೂ ಹೊಂದಿರೋ ಅಕ್ಷಯ್ ಕುಮಾರ್, ಕೊಹ್ಲಿ ಬಳಿಕ ದೇಶದ 3ನೇ ಉತ್ತಮ ಸೆಲಬ್ರಟಿ ಅನ್ನಿಸಿಕೊಂಡಿದ್ದಾರೆ.
ಭಾರತಕ್ಕೆ ಮೂರು ಐಸಿಸಿ ಮಾದರಿ ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ಧೋನಿ ಬ್ರಾಂಡ್ ವ್ಯಾಲ್ಯು ಬರೋಬ್ಬರಿ 664 ಕೋಟಿ ರೂಪಾಯಿ.ಇನ್ನು ಗಾಡ್ ಆಫ್ ಕ್ರಿಕೆಟರ್ ಸಚಿನ್ 609 ಕೋಟಿಯ ಬ್ರಾಂಡ್ ವ್ಯಾಲ್ಯು ಹೊಂದಿದ್ದಾರೆ. ಇಬ್ಬರು ಕ್ರಮವಾಗಿ 6 ಮತ್ತು 8ನೇ ಸ್ಥಾನದಲ್ಲಿದ್ದಾರೆ.
ಒನ್ ಟೈಮ್ನಲ್ಲಿ ಬ್ರಾಂಡ್ ವ್ಯಾಲ್ಯೂ ವಿಚಾರಕ್ಕೆ ಬಂದ್ರೆ ಟೀಮ್ ಇಂಡಿಯಾ ಕ್ರಿಕೆಟಿಗರನ್ನ ಮೀರಿಸೋರೆ ಇರ್ಲಿಲ್ಲ. ಆದ್ರೀಗ ಬಾಲಿವುಡ್ ಆಕ್ಟರ್ಸ್ ಟಾಪ್-10 ನಲ್ಲಿ ಪಾರಮ್ಯ ಮೆರೆದಿದ್ದಾರೆ. ಆ ಮೂಲಕ ತಾವೇನು ಕ್ರಿಕೆಟರ್ಸ್ಗಿಂತ ಕಮ್ಮಿ ಇಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)