NEWSದೇಶ-ವಿದೇಶಸಿನಿಪಥ

ಬಾಲಿವುಡ್‌ ಹಿರಿಯ ನಟ ರಿಷಿ ಕಪೂರ್‌ ವಿಧಿವಶ

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಿವುಡ್‌ ಹಿರಿಯ ನಟ ರಿಷಿ ಕಪೂರ್‌ (67) ಗುರುವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ನಿನ್ನೆಯಷ್ಟೇ ಬಹುಮುಖ ಪ್ರತಿಭೆ ಇರ್ಫಾನ್ ಖಾನ್ ಕಳೆದುಕೊಂಡಿದ್ದ ಭಾರತೀಯ ಚಿತ್ರರಂಗ  ಇಂದು ಮತ್ತೋರ್ವ ಮೇರುನಟ ರಿಷಿ ಕಪೂರ್ ಅವರನ್ನು ಕಳೆದುಕೊಂಡು ಆಘಾತಗೊಂಡಿದೆ.

ಧೀರ್ಘ ಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರನ್ನು  ಬುಧವಾರ ಉಸಿರಾಟ ಸಮಸ್ಯೆಯಾಗಿದ್ದರಿಂದ  ಮುಂಬೈನ ಎಚ್.ಎನ್. ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

2018ರಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಪೂರ್‌, ಅಮೆರಿಕದಲ್ಲಿ ಒಂದು ವರ್ಷ ಚಿಕಿತ್ಸೆ ಪಡೆದು 2019ರ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ವಾಪಸ್‌ ಆಗಿದ್ದರು, ಕಳೆದ ಫೆಬ್ರವರಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರನ್ನು ಎರಡು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಪೂರ್‌ ಸಾವಿಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್,ಟ್ವೀಟರ್ ನಲ್ಲಿ ಕಂಬನಿ ಮಿಡಿದಿದ್ದಾರೆ. ರಿಷಿ ಕಪೂರ್ ಮೃತಪಟ್ಟಿದ್ದು, ಅವರು ಹೊರಟರು, ನಾನು ಕಳೆದುಕೊಂಡೆ ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

ಖ್ಯಾತ ನಟ ರಾಜ್‌ ಕಪೂರ್‌ ಹಾಗೂ ಕೃಷ್ಣರಾಜ್‌ ಕಪೂರ್‌ ಮಗನಾದ ರಿಷಿ ಕಪೂರ್‌ ಮೇರಾ ನಾಮ್‌ ಜೋಕರ್‌ ಮೂಲಕ 1970ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾದಲ್ಲಿ ನಟಿಸಿದ್ದ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

ಆದರೆ ರಿಷಿ ಕಪೂರ್‌ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಸಿನಿಮಾ ಬಾಬಿ (1973). ಈ ಚಿತ್ರದಲ್ಲಿಡಿಂಪಲ್‌ ಕಪಾಡಿಯಾ ರಿಷಿಗೆ ನಾಯಕಿಯಾಗಿದ್ದರು. ಈ ಚಿತ್ರದಲ್ಲಿನ ನಟನೆಗಾಗಿ 1974ರಲ್ಲಿ ಫಿಲ್ಮ್‌ ಫೇರ್‌ ಪ್ರಶಸ್ತಿ ಪಡೆದಿದ್ದರು. ಅದಾದ ಬಳಿಕೆ ಕಪೂರ್‌ ನಟಿಸಿದ್ದ ಹಲವು ಚಿತ್ರಗಳು ಅವರ ಕೀರ್ತಿ ಪತಾಕೆಯನ್ನು ಹಾರಿಸಿದ್ದವು.

ಅವರು ನಟಿಸಿದ ಹೀನಾ ಚಿನಿಮಾವನ್ನು ಸಹೋದರ ರಣ್‌ಬೀರ್‌ ಕಪೂರ್‌ ಮತ್ತು ತಂದೆ ರಾಜ್‌ ಕಪೂರ್‌ ನಿರ್ದೇಶಿಸಿದ್ದರು. ಅಂತೆಯೇ ಪ್ರೇಮ್‌ ಗ್ರಂಥ್‌ ಸಿನಿಮಾವನ್ನು ಮೂವರು ಸಹೋದರರೇ (ರಿಷಿ ಕಪೂರ್‌, ರಣ್‌ಬೀರ್‌ ಕಪೂರ್‌ ಮತ್ತು ರಾಜೀವ್‌ ಕಪೂರ್‌) ನಿರ್ಮಿಸಿದ್ದರು.

2000 ನಂತರದ ಸಿನಿಮಾಗಳಲ್ಲಿ ರಿಷಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. 2012ರಲ್ಲಿ ಹೃತಿಕ್‌ ರೋಷನ್‌ ನಟಿಸಿದ್ದ ಅಗ್ನಿಪಥ್‌ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದರು. ಇದು ರಿಷಿ ತಮ್ಮ ಸಿನಿಮಾ ಜೀವನದಲ್ಲಿ ಖಳನಟನಾಗಿ ಕಾಣಿಸಿಕೊಂಡ ಮೊದಲ ಸಿನಿಮಾವಾಗಿತ್ತು. ಇನ್ನು 102 ನಾಟ್‌ಔಟ್‌ ರಿಷಿ ಕಪೂರ್‌ ನಟಿಸಿದ ಕೊನೆಯ ಸಿನಿಮಾವಾಗಿದೆ.

ಮೃತರು ಪತ್ನಿ ನೀತು, ಪುತ್ರಿ ರಿದ್ದಿಯಾ ಕಪೂರ್‌ ಸಾಹ್ನಿ, ಪುತ್ರ ರಣಬೀರ್‌ ಕಪೂರ್‌ ಸೇರಿ ಅಪಾರ ಅಭಿಮಾನಿಗಳು, ಬಂಧುಬಳಗವನ್ನು ಅಗಲಿದ್ದಾರೆ.

ವಿನಾಶಕಾರಿ, ಆಘಾತಕಾರಿ ಸುದ್ದಿ, ನಮ್ಮ ಚಿಂಟು ಮೃತಪಟ್ಟಿದ್ದಾರೆ ಎಂದು ಶೋಭಾ ಡಿ, ರಿಷಿ ಕಪೂರ್  ಅವರಿಗೆ ಸಂತಾಪ ಸೂಚಿಸಿದ್ದು, ಅವರ ಕುಟುಂಬದವರಿಗೆ ಅಗಲಿಕೆಯ ನೋವನ್ನು ಭರಿಸುವ ಶಖ್ತಿಯನ್ನು ಆದೇವರು ಕರುಣಿಸಲಿ ಎಂದು  ಪ್ರಾರ್ಥಿಸಿದ್ದಾರೆ.

ರಾಹುಲ್ ಗಾಂಧಿ ಸಂತಾಪ
ಮತ್ತೋರ್ವ ಲಿಜೆಂಡರಿ ನಟ ರಿಷಿ ಕಪೂರ್ ಅವರನ್ನು ಕಳೆದುಕೊಂಡಿದ್ದು, ಈ ವಾರ ಭಾರತೀಯ ಸಿನಿಮಾರಂಗಕ್ಕೆ ಆಘಾತಕಾರಿ ವಾರವಾಗಿದೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅದ್ಬುತ ನಟನನ್ನು ಕಳೆದುಕೊಂಡಿದ್ದೇವೆ. ದು:ಖದ ಈ ಸಮಯದಲ್ಲಿ ವಿಶ್ವದಾದ್ಯಂತ ಇರುವ ಅವರ ಅಭಿಮಾನಿಗಳು, ಸ್ನೇಹಿತರು ಹಾಗೂ ಕುಟುಂಬಕ್ಕೆ ಅಗಲಿಕೆಯ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

 

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ