ಬೆಂಗಳೂರು ಗ್ರಾಮಾಂತರ: 2023-ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ನಾಲ್ಕನೆಯ ದಿನವಾದ ಮಂಗಳವಾರದಂದು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 19 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಮಾಹಿತಿ ನೀಡಿದರು.
ಜಿಲ್ಲೆಯ 178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಯಾಗಿ ಎನ್.ನಾಗರಾಜ್ -2 ನಾಮಪತ್ರಗಳು, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸೊಣ್ಣಪ್ಪ ಎಂಬುವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
179-ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಜೆ.ಡಿ.ಎಸ್ ಪಕ್ಷದಿಂದ ಎಲ್.ಎನ್ ನಾರಾಯಣ ಸ್ವಾಮಿ ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿಗಳಾಗಿ ವಿ.ಪೂಜಪ್ಪ, ದೇವರಾಜ್ ತಲಾ 1 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಪಕ್ಷದಿಂದ ಧೀರಜ್ ಮುನಿರಾಜು-2 ನಾಮಪತ್ರ ಗಳು, ಸ್ವತಂತ್ರ ಅಭ್ಯರ್ಥಿಯಾಗಿ ಕುಮಾರ ರಾವ್ ಎಂಬುವವರು ಒಂದು ನಾಮಪತ್ರ ಸಲ್ಲಿಸಿದ್ದಾರೆ.
181- ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಎ.ಎ.ಪಿ ಪಕ್ಷದಿಂದ ಬಿ.ಎಮ್ ಗಂಗಬೈಲಪ್ಪ ಎಂಬುವವರು ಎರಡು ನಾಮಪತ್ರಗಳು ಅದೇ ಪಕ್ಷದಿಂದ ಮಾರುತಿ.ಜಿ ಎಂಬುವವರು ಎರಡು ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ.
ಇತರೆ ಪಕ್ಷದಡಿ ನರಸಿಂಹಮೂರ್ತಿ ಒಂದು ನಾಮಪತ್ರ, ಸಿ. ಹನುಮಂತರಾಯ ಮೂರು ನಾಮಪತ್ರಗಳನ್ನು , ಬಿ.ಜೆ.ಪಿ ಪಕ್ಷದಿಂದ ಸಪ್ತಗಿರಿ ಮೇಘಾವತ್ ಶಂಕರ್ ನಾಯಕ್ ಒಂದು ನಾಮ ಪತ್ರ ಸಲ್ಲಿಸಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.