ಸಂಸ್ಕೃತಿ

ಮಹದೇಶ್ವರ ಬೆಟ್ಟದಲ್ಲಿ ಸರಳ ಯುಗಾದಿ ಜಾತ್ರೆ : ಸಚಿವ ಸುರೇಶ್ ಕುಮಾರ್

ವಿಜಯಪಥ ಸಮಗ್ರ ಸುದ್ದಿ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಶ್ರೀಕ್ಷೇತ್ರ ಶ್ರೀ ಮಲೆಮಹದೇಶ್ವರ ಬೆಟ್ಟದ ಈ ವರ್ಷದ ಯುಗಾದಿ ಜಾತ್ರೆ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಯಲಿದ್ದು, ರಾಜ್ಯ ಹಾಗೂ ಹೊರರಾಜ್ಯದ ಭಕ್ತ ಸಮೂಹ ದೇವಾಲಯದ ಆಡಳಿತದೊಂದಿಗೆ ಸಹಕರಿಸಬೇಕೆಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಯುಗಾದಿ ಜಾತ್ರೆ ನಡೆಯುತ್ತದೆ. ಆದರೆ ದೇಶಾದ್ಯಂತ ಹರಡುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಯುಗಾದಿ ಜಾತ್ರೆಗೆ ನಾಡಿನ ಹಾಗೂ ಹೊರರಾಜ್ಯಗಳ ಭಕ್ತರು ಸಾಲು-ಸಾಲಾಗಿ ನಡೆದು ಪಾದಯಾತ್ರೆ ಮೂಲಕ ಬರುವುದು ವಾಡಿಕೆ. ಅವರೆಲ್ಲಾ ರಾತ್ರಿ ವೇಳೆ ರಸ್ತೆಬದಿಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಾರೆ. ಹಾಗೆಯೇ ದೇವಾಲಯದ ಸುತ್ತಮುತ್ತ ಮಲಗಿ ವಿಶ್ರಾಂತಿ ಪಡೆಯುತ್ತಾರೆ. ಆದರೆ ಈ ಬಾರಿ ರಸ್ತೆಬದಿ ಇಲ್ಲವೇ ದೇವಾಲಯದ ಸುತ್ತಮುತ್ತ ಮತ್ತು ಶ್ರೀಕ್ಷೇತ್ರದಲ್ಲಿ ಎಲ್ಲೆಂದರಲ್ಲಿ ಮಲಗಲು ಅವಕಾಶ ನಿರಾಕರಿಸಲಾಗಿದೆ. ಹಾಗೆಯೇ ದೇವಾಲಯದ ವಸತಿಗೃಹಗಳಲ್ಲಿಯೂ ಭಕ್ತರ ವಸತಿಗೆ ಅವಕಾಶ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಜಾತ್ರೆ, ಪರಿಷೆ, ಉತ್ಸವ ಹಾಗೂ ಹೆಚ್ಚು ಜನರು ಸೇರುವ ಮದುವೆಗಳನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಮಲೆಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆ ನೂರಾರು ವರ್ಷಗಳಿಂದ ನಡೆಯುತ್ತಿರುವುದರಿಂದ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿರುವುದರಿಂದ ಶ್ರೀಕ್ಷೇತ್ರದಲ್ಲಿ ಆರೋಗ್ಯಕರ ಪರಿಸರ ನಿರ್ಮಾಣ ಮತ್ತು ಯಾವುದೇ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮತ್ತು ಭಕ್ತರ ಹಿತದೃಷ್ಟಿಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Leave a Reply

error: Content is protected !!
LATEST
ಅನ್ನವೂ ಹಳಸಿತ್ತು- ನಾಯಿಯೂ ಹಸಿದಿತ್ತು : ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ ಬಿಜೆಪಿ ಸೇರುತ್ತಾರ ಸುಪ್ರೀಂಕೋರ್ಟ್‌, ಹೈಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು? ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ನೂತನ ಕಚೇರಿ ಉದ್ಘಾಟನೆ ನನ್ನ ರಾಜ್ಯದ ಬರಗಾಲದ ಬವಣೆ, ರೈತರ ಸಂಕಷ್ಟ ತಪ್ಪಿಸಿ: ಸಿಎಸ್‌ಒಗೆ ರೈತ ಮುಖಂಡರ ನಿಯೋಗ ಒತ್ತಾಯ ಕೊಡಗು: ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಬಲಿಯಾದ ಕಾಫಿ ಬೆಳೆಗಾರ ಮೈಸೂರು: ಬಿಸಿಲ ಝಳದಿಂದ ಬಳಲಿ ಮಡಕೆ ಫಿಲ್ಟರ್‌ಗಳ ಮೊರೆ ಹೋಗುತ್ತಿರುವ ಜನತೆ ಆಧುನಿಕ ಜೀವನ ಶೈಲಿಯಿಂದ ಹೊರಬಂದರೆ ಉತ್ತಮ ಆರೋಗ್ಯ : ಶ್ರೀ ಸೌಮ್ಯನಾಥ ಸ್ವಾಮೀಜಿ ಅಭಿಮತ MP ಚುನಾವಣೆ: 706 ಮಂದಿ ಮನೆಯಿಂದಲೇ ಮತದಾನ - ಜಿಲ್ಲಾಧಿಕಾರಿ ಡಾ. ಶಿವಶಂಕರ್‌ ಐಪಿಎಲ್  ಕ್ರಿಕೆಟ್: ಚಿನ್ನಸ್ವಾಮಿ ಸ್ಟೇಡಿಯಂಗೆ ಬಿಎಂಟಿಸಿ ಬಸ್ ವ್ಯವಸ್ಥೆ ಪ್ರತಿಭಟನೆ ಬಳಿಕ ಗ್ರಾಮಗಳಿಗೆ ನೀರಿನ ಸಮಸ್ಯೆ ಪರಿಹರಿಸಿದ ಮಹದೇಶ್ವರಬೆಟ್ಟ ಗ್ರಾಪಂ