ಹನೂರು : ತಮಿಳುನಾಡಿನಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದ ಮಹಾರಾಷ್ಟ್ರ ಪ್ರವಾಸಿಗರಿದ್ದ ಬಸ್ ಪಾಲಾರ್ ಬಳಿ ಉರುಳಿ ಬಿದ್ದ ಪರಿಣಾಮ 15 ಜನರು ಗಾಯಗೊಂಡಿರುವ ಘಟನೆ ಇಂದು ಸಂಭವಿಸಿದೆ.
ತಮಿಳುನಾಡಿನ ಪ್ರವಾಸ ಮುಗಿಸಿಕೊಂಡು ಕರ್ನಾಟಕ ರಾಜ್ಯದ ಮಲೆಮಹದೇಶ್ವರ ಬೆಟ್ಟಕ್ಕೆ ಬರುತ್ತಿರುವಾಗ ಈ ಘಟನೆ ಜರುಗಿದೆ.
ಬುಧವಾರ ಬೆಳಗ್ಗೆ 8 ಗಂಟೆಯಲ್ಲಿ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಾಲಾರ್ನ ಎರಡನೇ ತಿರುವಿನಲ್ಲಿ ಉರುಳಿ ಬಿದ್ದಿದೆ. ಬಸ್ನಲ್ಲಿ 50 ಪ್ರವಾಸಿಗರಿದ್ದರು. ಈ ಪೈಕಿ 15 ಜನರು ಗಾಯಗೊಂಡಿದ್ದಾರೆ.
![](https://vijayapatha.in/wp-content/uploads/2023/01/25-Jan-Hanur-Bus-palti-1-300x174.jpg)
ಗಾಯಗೊಂಡಿದ್ದ ಎಲ್ಲರನ್ನು ತುರ್ತು ವಾಹನದ ಮೂಲಕ ಮಲೆಮಹದೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಚಿಕಿತ್ಸೆ ಕೊಡಿಸಲಾಗಿದೆ.
ವಿಷಯ ತಿಳಿದ ಕೂಡಲೇ ಮಲೆಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳು ಸೇರಿದಂತೆ ಎಲ್ಲರನ್ನು ರಕ್ಷಿಸಿದ್ದು ಘಟನೆ ಸಂಬಂಧ ಮುಂದಿನ ಕ್ರಮಕೈಗೊಂಡಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)