ಬೆಂಗಳೂರು: ಬೆಂಗಳೂರಿನ ಎಲ್ಲ ಎಎಪಿ ಪಕ್ಷದ 95 ಕಚೇರಿಗಳಲ್ಲಿ ಸಂಸ್ಥಾಪನ ದಿನವನ್ನು ಕಾರ್ಯಕರ್ತರು ಸಂವಿಧಾನ ವಿಧಿ ಬೋಧಿಸುವ ಮೂಲಕ ಆಚರಿಸಲಾಯಿತು.
ಇದಿಷ್ಟೇ ಅಲ್ಲದೆ ಭಾರತ ಸಂವಿಧಾನದ ದಿನವನ್ನು ಕಾರ್ಯಕರ್ತರು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಿದರು. ಇಂದು ಎಎಪಿಯ 10ನೇ ಸಂಸ್ಥಾಪನಾ ದಿನವೂ ಆಗಿದ್ದು ನ.26ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಶುರುವಾಗಿತ್ತು. ಕಾರ್ಯಕರ್ತರಿಗೆ ಎರಡೂ ದಿನಗಳನ್ನು ಆಚರಿಸುವುದು ಹರ್ಷದ ವಿಷಯವಾಗಿದೆ.
AAP ರಾಜ್ಯಘಟಕ ರಾಜ್ಯಾದ್ಯಂತ ಕಾರ್ಯಕ್ರಮ ಆಯೋಜಿನೆ ಮಾಡಿದರು. ಬೈಕ್ ರ್ಯಾಲಿಗಳನ್ನು ಮತ್ತು ಪಾದಯಾತ್ರೆಗಳನ್ನು ಹಾಗೂ ಎಲ್ಲೆಡೆ ಡಾ. ಬಿ. ಆರ್. ಅಂಬೇಡ್ಕರ ಪುತ್ಥಳಿಗಳಿಗೆ ಮಾಲಾರ್ಪಣೆ ಕಾರ್ಯಕ್ರಮವನ್ನು ಆಯಾ ತಾಲೂಕು ಹಾಗೂ ಜಿಲ್ಲಾ ಘಟಕದ ನಾಯಕರು ಮಾಡಿದ್ದರು.
![](https://vijayapatha.in/wp-content/uploads/2022/11/26-Nov-AAP-1-300x172.jpg)
ವಿಶೇಷವಾಗಿ ಬೆಂಗಳೂರಿನಲ್ಲಿ ಕಾರ್ಯಕರ್ತರು ಮುಂಜಾನೆಯೇ ಕಬ್ಬನ್ಪಾರ್ಕನಲ್ಲಿ “ಸಂವಿಧಾನದ” ಪೀಠಿಕೆಯ ಪುಟ್ಟ ಪುಟ್ಟ ಪ್ರತಿಗಳನ್ನು ಜನರಿಗೆ ನೀಡಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಬೆಂಗಳೂರಿನ ಎಲ್ಲೆಡೆ ಕಾರ್ಯಕರ್ತರು ಜಾಗೃತಿ ಜಾಥಾಗಳನ್ನು ಮಾಡಿದರು.
ದಾಸರಹಳ್ಳಿಯಲ್ಲಿ ಬದಲಾವಣೆ ಯಾತ್ರೆಗೆ ಚಾಲನೆ ನೀಡಲಾಯಿತು, ಬದಲಾವಣೆ ಬಯಸಿದ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆಮ್ಆದ್ಮಿ ಪಾರ್ಟಿ ಕರ್ನಾಟಕ ಘಟಕವು 73ನೇ ಭಾರತ ಸಂವಿಧಾನ ದಿನವನ್ನು ಹಾಗೂ ಪಕ್ಷದ ಹತ್ತನೇ ಸಂಸ್ಥಾಪನ ದಿನವನ್ನು ಆಚರಿಸಿತು.
ಕುಮಾರ ಕೃಪದ ರಾಜ್ಯ ಕಚೇರಿಯಲ್ಲಿ ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಅವರ ಸಮ್ಮುಖದಲ್ಲಿ ಮೋಹನ್ ದಾಸರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಹರ್ಷಭರಿತ ಕಾರ್ಯಕರ್ತರಿಗೆ, ಭಾಸ್ಕರ್ ರಾವ್ ರವರು ನಾವು ಸಂವಿಧಾನವನ್ನು ಕೇವಲ ಪೂಜಿಸಿದರೆ ಸಾಲದು ಓದಿ ತಿಳಿದುಕೊಳ್ಳಬೇಕು ಎಂದರು.
ನಮ್ಮ ಸುದೈವ ನಮ್ಮ ಪಕ್ಷದ ಸಂಸ್ಥಾಪನ ದಿನ ಹಾಗೂ ಸಂವಿಧಾನ ದಿನ ಒಂದೇ ದಿನವಾಗಿದೆ ಯಾವುದೇ ವಸ್ತುಗಳನ್ನು ಕೊಂಡರೆ ಅದನ್ನು ಹೇಗೆ ಉಪಯೋಗಿಸುವುದು ಎಂದು ಒಂದು ಕೈಪಿಡಿ ಕೊಡುವರು. ಹಾಗೆಯೇ ಸಂವಿಧಾನ ಈ ದೇಶವನ್ನು ನಡೆಸಲು ಇರುವ “ಕೈಪಿಡಿ” ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವದ ಉಳಿವಿಗೆ ಸಂವಿಧಾನವೂ, ಸಂವಿಧಾನದ ಉಳಿವಿಗೆ ಆಮ್ಆದ್ಮಿ ಪಾರ್ಟಿ ಅತ್ಯಗತ್ಯ ಎಂದು ಬೆಂಗಳೂರು ನಗರ ಅಧ್ಯಕ್ಷರಾದ ಮೋಹನ್ ದಾಸರಿ ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷವು ತನ್ನ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸುತ್ತದೆ. ಈ ಕಾರ್ಯಕ್ರಮದಲ್ಲಿ ಕೆ ಮಥಾಯಿ ರಾಜ್ಯ ವಕ್ತಾರರು, ಮಾಧ್ಯಮ ವಕ್ತಾರ ಜಗದೀಶ್ ವಿ. ಸದಾಂ, ಬೆಂಗಳೂರು ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಚಂದ್ರ, ಮಹಿಳಾ ಘಟಕದ ಅಧ್ಯಕ್ಷರಾದ ಕುಶಲ ಸ್ವಾಮಿ, ಬೆಂಗಳೂರು ರಾಜಕೀಯ ಅಧ್ಯಕ್ಷ ಚೆನ್ನಪ್ಪ ನೆಲ್ಲೂರ್, ಮಹಾದೇವಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶೋಕ್ ಮೃತ್ಯುಂಜಯ, ಮಾಧ್ಯಮ ವಕ್ತಾರೆ ಉಷಾ ಮೋಹನ್ ಹಾಗೂ ಇತರೆ ಪಕ್ಷದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)