ರಾಮದುರ್ಗ: ಸಾರಿಗೆ ನೌಕರರ ಕೂಟದ ಸೈಕಲ್ ಜಾಥಾ ತಂಡವು ರಾಮದುರ್ಗ ಘಟಕಕ್ಕೆ ಕಳೆದ ರಾತ್ರಿ 11 ಗಂಟೆಯಲ್ಲಿ ಭೇಟಿ ನೀಡಿದಾಗ ನೌಕರರ ಕೂಟದ ಪದಾಧಿಕಾರಿಗಳು ಹಾಗೂ ಅವರ ಕುಟುಂಬದವರು ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಬಂದು ಸಾಥ್ ನೀಡಿದರು.
ನೂರಾರು ನೌಕರರು ಜಾಥಾದಲ್ಲಿ ರಾತ್ರಿಯನ್ನು ಲೆಕ್ಕಿಸದೆ ತಮ್ಮ ತಮ್ಮ ಮಕ್ಕಳೋಮದಿಗೆ ಬಂದಿದ್ದು, ಜಾಥಾದಲ್ಲಿ ಸಾಗುತ್ತಿರುವ ಕೂಟದ ಪದಾಧಿಕಾರಿಗಳಿಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಿದಂತಾಗಿದೆ. ಅಲ್ಲದೆ ನೌಕರರು ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಮತ್ತು ಡಿಪೋಗಳಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ.
![](https://vijayapatha.in/wp-content/uploads/2022/11/2-Nov-ksrtc-kuta-jatha-3-300x164.jpg)
ಈ ಸೈಕಲ್ ಜಾಥಾ ಕಾರ್ಯಕ್ರಮ ಯಶಸ್ವಿ ಆಗಲು ಸಾಥ ನೀಡಿದ್ದು ವಿಶೇಷ ಈ ಕಾರ್ಯಕ್ರಮದಲ್ಲಿ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಕೃಷ್ಣ, ಸಂತೋಷ ಮುಂತಾದವರಿಗೆ ಕೂಟದ ಬೆಳಗಾವಿ ವಿಭಾಗದ ನೌಕರರ ಕೂಟದ ಖಜಾಂಚಿ ಹಾಗೂ ರಾಮದುರ್ಗ ಘಟಕದ ಕೂಟದ ಅಧ್ಯಕ್ಷ ಶಶಿಕಾಂತ ಪಾಟೀಲ್, ಉಮೇಶ್ ಪನದಿ, ವಿಜಯ್ ಚಂದರಗಿ, ರವಿಶಂಕರ್ ಬೆಟಗೇರಿ, ಬಸವರಾಜ್ ಪಂಡರಿ, ಈರಣ್ಣ ಮುದಕವಿ, ಮಹೇಶ್ ಮಡಿವಾಳರ, ನಾಡಗೌಡ್ರ ತೋಟದ, ನದಾಫ್ ಇನ್ನು ಮುಂತಾದ ಮುಖಂಡರು ಹಾಗೂ ಪದಾಧಿಕಾರಿಗಳು ಹಾಗೂ ಅವರ ಕುಟುಂಬ ಭಾಗವಹಿಸಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)