NEWSನಮ್ಮಜಿಲ್ಲೆಸಂಸ್ಕೃತಿ

ಲಿಂಗ ಪೂಜೆಗಿಂತ ಕಾಯಕ ಶ್ರೇಷ್ಠವೆಂದವರಲ್ಲಿ ನುಲಿಯ ಚಂದಯ್ಯ ಮೊದಲಿಗ: ಮೋಹನ್ ರಾಜ್

ವಿಜಯಪಥ ಸಮಗ್ರ ಸುದ್ದಿ

ಪಿರಿಯಾಪಟ್ಟಣ: ಕಾಯಕ ನಿಷ್ಠೆ, ದಾಸೋಹ ಹಾಗೂ ಪ್ರಾಮಾಣಿಕತೆಗೆ ಹೆಸರಾದ ಶಿವಶರಣ ನುಲಿಯ ಚಂದಯ್ಯನವರು 12 ನೇ ಶತಮಾನದ ಸಕಲ ಶರಣರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಕರ್ನಾಟಕ ಕೊರಮರ ಸಂಘದ ರಾಜ್ಯ ಸಂಘಟನಾಕಾರ ಮೋಹನ್ ರಾಜ್ ತಿಳಿಸಿದ್ದಾರೆ.

ಪಟ್ಟಣದ ತಾಲೂಕು ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಶಿವಶರಣ ನುಲಿಯ ಚಂದಯ್ಯ ನವರ 915 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಸಾಮಾಜಿಕ ಪರಿವರ್ತನಾ ಕ್ರಾಂತಿಯು 12 ನೇ ಶತಮಾನದಲ್ಲಿ ಬಸವಾದಿ ಪ್ರಮಥರಿಂದ ಕಾಯಕತತ್ವದ ಆಧಾರದಲ್ಲಿ ಜಾತಿ, ಲಿಂಗ, ಧರ್ಮವೆಂಬ ಭೇದಭಾವ ಇಲ್ಲದ ಶರಣರ ದಾಸೋಹದ ಮೂಲಕ ಕಾಯಕಗೈದವರು ಶರಣ ಶ್ರೀ ನುಲಿಯ ಚಂದಯ್ಯ.

ಅವರು ಬಸವಣ್ಣನವರ ಸಮಕಾಲೀನರಾಗಿದ್ದು, ಬಸವಣ್ಣನವರ ಜತೆ ಕೈಜೋಡಿಸಿದ ಪ್ರಮುಖ ಶರಣರಲ್ಲಿ ಒಬ್ಬರಾಗಿದ್ದರು. ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದ್ದಾರೆ. ಅವರು ವಿಜಾಪುರ ಜಿಲ್ಲೆಯ ಶಿವಣಗಿಯಲ್ಲಿ ಹುಟ್ಟಿದ್ದು, ಕಲ್ಯಾಣಕ್ಕೆ ಬಂದು, ಕಾಯಕ ದಾಸೋಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಷ್ಟಲಿಂಗದಲ್ಲಿ ಅತ್ಯುನ್ನತಿ ಕಂಡುಕೊಂಡರು.

ಮದ ಹುಲ್ಲಿನ ಹಗ್ಗ ಹೊಸೆಯುವ ಕಾಯಕ ಮಾಡಿ, ಅದರ ಮಾರಾಟದಿಂದ ಬಂದ ಆದಾಯದಿಂದ ಗುರು ಲಿಂಗ ಜಂಗಮ ಸೇವೆಗೆ ಬಳಸುತ್ತಿದ್ದರು. ಚಂದೇಶ್ವರಲಿಂಗ ಎಂಬ ಅಂಕಿತನಾಮದಲ್ಲಿ ಅವರು ರಚಿಸಿದ 48 ವಚನಗಳು ಲಭ್ಯವಾಗಿವೆ. ಚಂದಯ್ಯನವರದು ಬಹುಮುಖ ವ್ಯಕ್ತಿತ್ವವಾಗಿದ್ದು, ಅವರ ನಡೆ ನುಡಿ ಕಾಯಕನಿಷ್ಠ ಪುರಾಣ ಕಥೆಗಳಲ್ಲಿ ವರ್ಣಿತವಾಗಿವೆ.

ಚಂದಯ್ಯನವರು ಲಿಂಗ ಪೂಜೆಗಿಂತ ಕಾಯಕ ಶ್ರೇಷ್ಠವೆಂದು ನಂಬಿದ್ದರು. ಅತಿಯಾದ ಹಣ ಮನುಷ್ಯತ್ವಕ್ಕೆ ಮಾರಕ, ಮೈಮುರಿದು ದುಡಿದು ತಿನ್ನುವ ಆನಂದಕ್ಕೆ ಮತ್ತೊಂದು ಸರಿ ಸಾಟಿ ಇಲ್ಲ ಎಂದು ನುಡಿದು ಅದರಂತೆ ನಡೆದರು. ಆ ಸಮಾಜದಲ್ಲಿ ಹುಟ್ಟಿದ ನಾವು ಸಮಾಜದ ಏಳಿಗೆಗೆ ಕಿಂಚಿತ್ತಾದರೂ ಕೆಲಸ ಮಾಡಬೇಕಿದೆ.

ರಾಜ್ಯದಲ್ಲಿ 15 ಲಕ್ಷಕ್ಕೂ ಹೆಚ್ಚು ಕೊರಮ ಜನಾಂಗವಿದ್ದು ವೈಜ್ಞಾನಿಕ ಗಣತಿಯಿಂದ ಇದು ಹೊರಬರಬರಬೇಕಾಗಿದೆ. ಸರ್ಕಾರ ತುಳಿತ್ತಕ್ಕೊಳಗಾದ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ಆ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು.

1970 ರ ದಶಕದಲ್ಲಿ ಅರಸು ಮುಖ್ಯಮಂತ್ರಿಯಾಗಿದ್ದಾಗ ಮಾತ್ರ ಈ ಸಮುದಾಯವನ್ನು ಗುರುತಿಸಿ ನಾಲ್ವರನ್ನು ಶಾಸಕರನ್ನಾಗಿ ಒಬ್ಬರನ್ನು ಸಚಿವರನ್ನಾಗಿ ಮಾಡಿದ್ದು ಬಿಟ್ಟರೆ ಇಲ್ಲಿಯವರೆಗೂ ಈ ಸಮುದಾಯದವರು ವಿಧಾನಸಭೆಯ ಮೆಟ್ಟಿಲೇರಲು ಸಾಧ್ಯವಾಗಿಲ್ಲ. ಸರ್ಕಾರವು ಸಹ ಯಾರೊಬ್ಬರನ್ನು ವಿಧಾನ ಪರಿಷತ್ ಹಾಗೂ ನಿಗಮ ಮಂಡಳಿಗಳಿಗೆ ನೇಮಕ ಮಾಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಮೈಮುಲ್ ಅಧ್ಯಕ್ಷ ಪ್ರಸನ್ನ ಮಾತನಾಡಿ, ಈ ವರ್ಷದಿಂದ ಸರ್ಕಾರ ಶಿವಶರಣ ನುಲಿಯ ಚಂದಯ್ಯ ಅವರ ಜಯಂತಿಯನ್ನು ಸರಕಾರ ವತಿಯಿಂದ ಆಚರಣೆ ಮಾಡಲು ಆದೇಶ ಹೊರಡಿಸಿರುವುದು ಸಂತಸದ ವಿಷಯವಾಗಿದೆ. ಸಮಾಜದಲ್ಲಿ ಹಿಂದುಳಿದ ಸಮುದಾಯದ ಜನರು ಸಬಲರಾಗಬೇಕು ಎಂದರು.

ತಹಶೀಲ್ದಾರ್ ಕೆ.ಚಂದ್ರಮೌಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವೀನ್ ಬುತನಹಳ್ಳಿ, ಗ್ರಾಪಂ ಸದಸ್ಯರಾದ ಹೊನ್ನಾಪುರ ಕಿರಣ್, ಸುಂಡವಾಳು ಮಹೇಶ್, ಚಂದ್ರಶೆಟ್ಟಿ, ಮಾಜಿ ಸೈನಿಕ ಲೋಕನಾಥ್, ನಿವೃತ್ತ ಪ್ರಾಂಶುಪಾಲ ಸತ್ಯನಾರಾಯಣ ತಾಲೂಕು ಕೊರಮ ಸಮಾಜದ ಮುಖಂಡರಾದ ದೊಡ್ಡಹರವೆ ಕುಮಾರ್, ಮುತ್ತುರಾಜ್, ಹಸುವಿನ ಕಾವಲು ಗೋವಿಂದರಾಜ್, ವಿಜಯ್ ವಿವಿಧ ಇಲಾಖೆಗಳ ಅಧಿಕಾರಿಗಳಾದ ಪ್ರೇಮ್ ಕುಮಾರ್, ಎಂ.ಕೆ.ಪ್ರಕಾಶ್, ಪ್ರಸಾದ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ