NEWSನಮ್ಮಜಿಲ್ಲೆನಮ್ಮರಾಜ್ಯ

ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 4 ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ನಮಗೆ ಬೇಡ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಕೊಡಬೇಕು. ಅದೂ ಕೂಡ ವಿಧಾನಸಭೆ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್‌ ಮನವಿ ಮಾಡಿದರು.

vijayapatha.in - ವಿಜಯಪಥ.ಇನ್‌ ನಿಮಗೆ ವಿಶ್ವಾಸನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅನಿಸಿದರೆ ನಮಗೆ ಆರ್ಥಕವಾಗಿ ಬಲ ನೀಡಿ. ಇನ್ನಷ್ಟು ಸತ್ಯನಿಷ್ಠ ವರದಿಗಳನ್ನು ಮಾಡುವುದಕ್ಕೆ ಬೆಂಬಲ ನೀಡಿ.   ಕನಿಷ್ಠ 100 ರೂ. ಒಮ್ಮೆಗೆ ಹಾಕಿ. ನಮ್ಮನ್ನು ಪ್ರೋತ್ಸಾಹಿಸಿ. 

ಸಾರಿಗೆ ನೌಕರರ ಒಕ್ಕೂಟ ನಗರದ ಟೌನ್‌ಹಾಲ್‌ನಲ್ಲಿ ಇಂದು ಆಯೋಜಿಸಿದ್ದ ಸಾಧಕರಿಗೆ ಮತ್ತು ಮುಷ್ಕರ ವೇಳೆ ನಿವೃತ್ತರಾದ ನೌಕರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೌಕರರ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸಾರಿಗೆ ನಿಗಮಗಳ ಅಭಿವೃದ್ಧಿಯೂ ಪ್ರಮುಖವಾಗಿದೆ. ಹೀಗಾಗಿ ಸಾರಿಗೆ ಸಚಿವರು, ಅಧಿಕಾರಿಗಳು ಅಧ್ಯಕ್ಷರು ಈ ನಿಟ್ಟಿನಲ್ಲಿ ನೌಕರರ ಪರ ನಿಂತಿದ್ದದಾರೆ. ಅವರಿಗೆ ಅಭಿನಂದನೆ. ಜತೆಗೆ ಮುಷ್ಕರದ ವೇಳೆ ನಿವೃತ್ತರಾದ ನೌಕರರು ಮತ್ತು ನೌಕರರ ಪ್ರತಿಭಾವಂತ ಮಕ್ಕಳಿಗೆ ಅಭಿನಂದನೆ ಸಲ್ಲಿಸಬೇಕಿದ್ದು ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಎಂದರು.

ಇನ್ನು ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಪ್ರೊ. ಕೆ.ಈ. ರಾಧಾಕೃಷ್ಣ ಅವರು ನಮ್ಮ ಸಾರಿಗೆ ನೌಕರರ ಕಷ್ಟಗಳನ್ನು ಅರಿತು ಅವುಗಳನ್ನು ಈಡೇರಿಸುವುದಕ್ಕೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು ಅವರ ನಮ್ಮ ಪರ ಕಾಳಜಿಗೆ ನಾವು ಚಿರರುಣಿಯಾಗಿದ್ದೇವೆ.

ಅಂತ್ಯೆಯೆ 2019ರಲ್ಲಿ ಇದೇ ಟೌನ್‌ಹಾಲ್‌ಮುಂದೆ ನಾವು ಧ್ವನಿ ಎತ್ತಿದೆವು. ಅಂದಿನ ನಮ್ಮ ಕೂಗು ನಮಗೆ ಸರ್ಕಾರಿ ನೌಕರರನ್ನಾಗಿ ಮಾಡಬೇಕು. ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು ಎಂಬುವುದಾಗಿತ್ತು. ಅಂದು ಸರ್ಕಾರಿ ನೌಕರರಿಗೆ ಆರನೇ ವೇತನ ಆಯೋಗದಂತೆ ವೇತನ ಹೆಚ್ಚಳವಾದಾಗಲೇ ನಮಗೂ ಆಗಬೇಕು. 4 ವರ್ಷಕೊಮ್ಮೆ ಮುಷ್ಕರ ಮಾಡಿ ಜನರಿಗೆ ತೊಂದರೆ ಕೊಡುವುದು ಬೇಡ ಎಂಬ ದೃಷ್ಟಿಯಿಂದ ನೌಕರರು ಒಗ್ಗಟ್ಟಾದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಅಂದು ನಮಗೆ ಭರವಸೆ ಕೊಟ್ಟಿದ್ದರು. ನಮ್ಮ ಸರ್ಕಾರ ಬಂದರೆ ನಿಮಗೆ ಖಂಡಿತ ಎಲ್ಲ ಸೌಲಭ್ಯಗಳನ್ನು ಕೊಡುತ್ತೇವೆ ಎಂದು ಹೇಳಿದ್ದರು. ಅದಕ್ಕೆ ಈಗ ಬದ್ಧವಾಗಬೇಕಿದೆ ಅವರು ಕೊಟ ಮಾತನ್ನು ತಪ್ಪುವುದಿಲ್ಲ ಎಂಬ ಭರವಸೆ ನಮಗಿದೆ ಎಂದು ಹೇಳಿದರು.

ಇನ್ನು ಹಿಂದಿನ ಸರ್ಕಾರ ನೌಕರರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಬದಲಿಗೆ ಮುಷ್ಕರಕ್ಕೆ ಸರ್ಕಾರವೇ ಪ್ರಚೋದನೆ ಕೊಟ್ಟಿತು. ಬಳಿಕ ಸುಮಾರು 2500 ಮಂದಿಯನ್ನು ವಜಾ, ವರ್ಗಾವಣೆ ಅಮಾನತು ಮತ್ತು ಪೊಲೀಸ್‌ಕೇಸ್‌ಗಳನ್ನು ಹಾಕಿ ಜೈಲಿಗೂ ಕಳುಹಿಸಿತು. ಇಷ್ಟೆಲ್ಲ ಆದರೂ ಅಂದಿನ ಸರ್ಕಾರ ನಮಗೆ ಯಾವುದೇ ಸೌಲಭ್ಯಗಳನ್ನು ಕೊಡಲಿಲ್ಲ ಪರಿಣಾಮವನ್ನು ಈಗ ಆ ಪಕ್ಷದ ಮುಖಂಡರು ಪ್ರತ್ಯಕ್ಷವಾಗಿ ನೋಡುತ್ತಿದ್ದಾರೆ.

ಈಗ ಕಾಂಗ್ರೆಸ್‌ ಸರ್ಕಾರ ಚುನಾವಣೆ ಪ್ರಣಾಳಿಕೆಯಂತೆ ನಮಗೆ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ಈ ವೇದಿಕೆ ಮೂಲಕ ಒತ್ತಾಯಿಸುತ್ತಿದ್ದೇವೆ. ಇನ್ನು ರಾಜ್ಯದಲ್ಲಿ ಇರುವ 72 ನಿಗಮಗಳಲ್ಲೂ 4 ವರ್ಷಕ್ಕೊಮ್ಮೆ ಎಂಬ ಅಗ್ರಿಮೆಟ್‌ಇಲ್ಲ ವೇತನ ಆಯೋಗ ಮಾದರಿಯಲ್ಲೇ ವೇತನ ಹೆಚ್ಚಳವಾಗುತ್ತಿದೆ. ಅದೇ ನಮ್ಮಲ್ಲೂ ಆದರೆ ನೌಕರರು ಅನುಭವಿಸುವ ನೋವು ಕೊನೆಯಾಗುತ್ತದೆ ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು.

ಸಾರಿಗೆ ಸಚಿವರು ಸಹ ಕಾಲ ಕಾಲಕ್ಕೆ ನಿಗಮಗಳಿಗೆ ಬರಬೇಕಿರುವ ಅನುದಾನವನ್ನು ಕೊಡಿಸುತ್ತಿದ್ದೀರಾ, ಹೀಗಾಗಿ ಯಾಕೆ ಅಭಿನಂದನೆ ಮಾಡುತ್ತೀರಾ ಎಂದು ಕೇಳಿದರಿಗೆ ಈ ಮೂಲಕ ಉತ್ತರಕೊಡುತ್ತಿದ್ದೇವೆ. ಸಮಸ್ತ ಸಾರಿಗೆ ನೌಕರರಿಗೆ ಸಂಸ್ಥೆಗಳಿಗೆ ಹಾಗೂ ನಾಡಿನ ಜನತೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ನಡೆಯುತ್ತಿದೆ. ಅದನ್ನು ನಾವು ಮನಸ್ಸಾರ ಗೌರವಿಸಬೇಕು ಎಂದರು.

ಇನ್ನು ವೇತನ ವಿಷಯ ಬಂದರೆ ನಮಗೆ ದೊಡ್ಡ ಸಮಸ್ಯೆ ಆಗುತ್ತಿದೆ. ವೇತನ ಹೆಚ್ಚಳದ ವೇಳೆ ವೈಜ್ಞಾನಿಕವಾಗಿ ಮಾಸ್ಟರ್ ಪೇ ಸ್ಕೇಲ್ ಇಲ್ಲ. ಹೀಗಾಗಿ ನಮಗೆ ವೇತನ ಮಾದರಿಯಲ್ಲಿ ವೇತನ ಕೊಡಬೇಕು ಎಂಬುದರ ಬಗ್ಗೆ ಗಮನ ಕೊಡಬೇಕು. ನಾಮಗೆ ನೀವು ಏನಾದರೂ ಕೊಡಬೇಕು ಎಂದರೆ ಅದು ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಕೊಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ಈ ಮೂಲಕ ನಾಲ್ಕು ವರ್ಷಕ್ಕೊಮ್ಮೆ ಆಗುತ್ತಿರುವ ಈ ಜಂಜಾಟವನ್ನು ತಪ್ಪಿಸಬೇಕು. ಇನ್ನು ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವುದಕ್ಕೆ ಯಾವುದೇ ಮಾನ್ಯತೆ ಪಡೆದ ಸಂಘಟನೆ ಇಲ್ಲವಾಗಿದೆ. ಕಾರಣ ಚುನಾವಣೆ ನಡೆದಿಲ್ಲ. 1992ರಲ್ಲಿ ಚುನಾವಣೆ ಆಗಿರುವುದು ಬಿಟ್ಟರೆ ಇನ್ನೂ ಯಾವುದೇ ಚುನಾವಣೆ ಆಗಿಲ್ಲ. ಇದರಿಂದ ನೌಕರರಿಗೆ ವಿರುದ್ಧವಾಗಿ ಹೋಗುವ ಸಂಘಟನೆಗಳ ಮನವಿಯನ್ನು ಆಲಿಸದೆ ನೌಕರರ ಮನದಾಳದಂತೆ ವೇತನ ಕೊಡಬೇಕು. ಜತೆಗೆ ಸಂಘಟನೆಗಳ ಚುನಾವಣೆ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಇನ್ನು ನೌಕರರಿಗೆ ಉಚಿತ ಆರೋಗ್ಯ ಸೌಲಭ್ಯ ಕೊಡಬೇಕು. ಎಲೆಕ್ಟ್ರಿಕ್‌ಬಸ್‌ಗಳನ್ನು ತುಂಬಿಸಿಕೊಳ್ಳಲಾಗುತ್ತಿದೆ. ಆದರೆ ಇದು ಖಾಸಗೀಕರಣಕ್ಕೆ ಮುನ್ನುಡಿಯಾಗುತ್ತಿದೆ. ಇದನ್ನು ನಿಲ್ಲಿಸಿ ನಿಗಮದಿಂದಲೇ ನೇರ ನೇಮಕ ಮಾಡಿಕೊಳ್ಳಬೇಕು. ತಾರತಮ್ಯಗಳಿಲ್ಲದ ಸರಿ ಸಮಾನವೇತ ವೇತನ ನಮಗೆ ಕೊಡಬೇಕು ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಸಾರಿಗೆ ಸಚಿವರಲ್ಲಿ ನಿವೇದಿಸಿದರು.

Comments are closed.

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು!