NEWSನಮ್ಮರಾಜ್ಯರಾಜಕೀಯ

ವೆಸ್ಟೆಂಡ್ ಹೋಟೆಲ್‌ನಲ್ಲಿ ಕಾಲ ಕಳೆದಿದ್ದು ಏಕೆ – ಸರ್ಕಾರಿ ಮನೆ ನೀವು ಕಿತ್ತುಕೊಂಡಿದ್ದಕ್ಕೆ: ಸಿದ್ದು ವಿರುದ್ಧ ಎಚ್‌ಡಿಕೆ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಬಾಗಲಕೋಟೆ: ವೆಸ್ಟೆಂಡ್ ಹೋಟೆಲ್‌ನಲ್ಲಿ ಕಾಲ ಕಳೆದು, ಅಧಿಕಾರ ಕಳಕೊಂಡ ಎಂಬ ಸಿದ್ದರಾಮಯ್ಯ ಟೀಕೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖಾರವಾಗಿಯೇ ಪ್ರತಿಕ್ರಿಯೆ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಎಚ್‌ಡಿಕೆ, ಈ ಬಗ್ಗೆ ಸಾವಿರಾರು ಬಾರಿ ಹೇಳಿದ್ದೇನೆ, ಮೊದಲನೇ ಅಪರಾಧ (ಸಿದ್ದರಾಮಯ್ಯ) ಅವರದ್ದೇ ಆಗಿದೆ. ಜಾರ್ಜ್ ಹೆಸರಲ್ಲಿ ಮನೆ ತಗೊಂಡು ಅದರಲ್ಲಿ ಮುಂದುವರಿದರು. ನನಗೆ ಸರ್ಕಾರಿ ಕ್ವಾಟರ್ಸ್ ಮನೆ ಬಿಟ್ಟುಕೊಡಲಿಲ್ಲ. ಈಗ ಕೇಂದ್ರ ನಾಯಕರೆಲ್ಲ ಬರ್ತಿದ್ದಾರಲ್ಲ, ಅವರು ಎಲ್ಲಿ ವಾಸ್ತವ್ಯ ಮಾಡ್ತಾರೆ ? ವೆಸ್ಟೆಂಡ್ ಹೋಟೆಲ್​​​ನಲ್ಲಿ ನಾನು ಪರ್ಮನೆಂಟ್ ಆಗಿ ಇದ್ದವ್ನಾ ಕೇಳಿ ಎಂದು ಪ್ರಶ್ನಿಸಿದರು.

ನಾನು ಹೋಟೆಲ್​​ನಲ್ಲಿ ಇದ್ಕೊಂಡು ಬೆಳಗ್ಗೆ 9 ರಿಂದ ರಾತ್ರಿ 1 ಗಂಟೆವರೆಗೂ ಕೆಲಸ ಮಾಡ್ತಿದ್ದೆ. ಸಿದ್ದರಾಮಯ್ಯ ಯಾವ ರೀತಿ ಕೆಲಸ ಮಾಡುತ್ತಿದ್ದರು ಎಂಬುದು ಎಲ್ಲಿರಿಗೂ ಗೊತ್ತಿರುವ ವಿಚಾರ. ಮಧ್ಯಾಹ್ನ 1ಗಂಟೆಗೆ ವಿಧಾನಸೌಧ ಖಾಲಿ ಮಾಡಿಕೊಂಡು ಹೋದ್ರೆ…ಎಲ್ಲಿಗೆ ಹೋಗ್ತಿದ್ರು, ಆರು ಗಂಟೆ ಮೇಲೆ ಯಾರಿಗೆ ಸಿಗುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಇನ್ನು ನಾನು ರಾತ್ರಿ 12 ಗಂಟೆವರೆಗೆ ಕೆಲಸ ಮಾಡುತ್ತಿದ್ದೆ. ಕಾಂಗ್ರೆಸ್​​ನ 78 ಶಾಸಕರಿಗೆ ನನ್ನ 14 ತಿಂಗಳ ಆಡಳಿತ ಅವಧಿಯಲ್ಲಿ 19 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೀನಿ. ಇವತ್ತು ಬಿಜೆಪಿ ಸರ್ಕಾರದಲ್ಲಿ ಕೆಲಸ ನಡೆದಿರೋದು, ನಾನು ಸಿಎಂ ಆಗಿದ್ದಾಗ ಕೊಟ್ಟ ದುಡ್ಡಿನಿಂದ ಆಗಿದೆ. ಬಾದಾಮಿಗೆ ಅಭಿವೃದ್ದಿ ಕೆಲಸ ಆಗಿದ್ದು, ನಾನು ಕೊಟ್ಟ ದುಡ್ಡಿನಲ್ಲಿ‌ಯೇ ಎಂದು ತಮ್ಮ ಆಡಳಿತಧಿಯಲ್ಲಿ ನಡೆದ ಅಭಿವೃದ್ಧಿಯ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟರು.

ಸಿದ್ದರಾಮಯ್ಯಗೆ ಬಿಜೆಪಿಯವರಿಂದ ದುಡ್ಡು ತೊಗೊಳ್ಳಾಕೆ ಆಯ್ತಾ ಎಂದು ಪ್ರಶ್ನಿಸಿದ ಅವರು, ಜನರ ಬಳಿಗೆ ಹೋಗಿ ಕೆಲಸ ಹೆಂಗೆ ಮಾಡಬೇಕು ಎಂಬುದನ್ನು ಸಿದ್ದರಾಮಯ್ಯ ಅವರಿಂದ ಕಲಿಯಬೇಕಿಲ್ಲ. ಬಾದಾಮಿಗೆ ತಂದಿದ್ದು ನಾಲ್ಕು ಸಾವಿರ ಕೋಟಿ ಎಲ್ಲಿದೆ ದುಡ್ಡು ಎಂದು ಮರು ಪ್ರಶ್ನೆ ಹಾಕಿದರು.

ಇನ್ನು ಮಳೆಗಾಲದಲ್ಲಿ ಜಲಾವೃತವಾಗುವ ಯಾವುದಾದರೂ ಒಂದು ಹಳ್ಳಿಗೆ ಪುನರ್ ವಸತಿ ಕಲ್ಪಿಸಿದ್ದಾರಾ. 5 ವರ್ಷದಲ್ಲಿ ಬಾದಾಮಿಗೆ ಮೂಲಭೂತ ಸೌಲಭ್ಯವನ್ನಾದ್ರೂ ಕಲ್ಪಿಸಿದ್ದಾರಾ? ಬರಿ ಬೇರೆಯವರ ಬಗ್ಗೆ ಕಾಲೆಳೆದುಕೊಂಡು ಜನಗಳನ್ನು ನಂಬಿಸುವ ಕೆಲಸ ಮಾಡುವ ಬದಲಿಗೆ ತಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನರ ಸೇವೆ ಮಾಡಿದ್ದರೆ ಇವರಿಗೆ ಮತ್ತೊಂದು ಕ್ಷೇತ್ರ ನೋಡಿಕೊಳ್ಳುವ ಗತಿ ಬರುತ್ತಿಲ್ಲ ಎಂದು ಕಿಡಿಕಾರಿದರು.

Leave a Reply

error: Content is protected !!
LATEST
KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ