Breaking NewsNEWSದೇಶ-ವಿದೇಶನಮ್ಮರಾಜ್ಯ

ವಿಶ್ವ ಹೆಮ್ಮಾರಿ ಕೊರೊನಾ ಭೀತಿ: ಹಲವು ರೈಲುಗಳ ಸಂಚಾರಕ್ಕೆ ಮಾ.20ರಿಂದ ತಾತ್ಕಾಲಿಕ ತಡೆ

ನೈಋತ್ಯ ರೈಲ್ವೆ, ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಪ್ರಿಯಾ ಶೆಟ್ಟಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು:  ಕೊರೊನಾ ರೋಗಾಣು (COVID-19) ಹರಡುವಿಕೆಯ ಹಿನ್ನೆಲೆಯಲ್ಲಿ  ಕೆಲವು  ರೈಲುಗಳ ಸೇವೆಗಳನ್ನು ಸಂಪೂರ್ಣವಾಗಿ ತಾತ್ಕಾಲಿಕವಾಗಿ ಇಂದಿನಿಂದ ಮಾ.31ರವರೆಗೆ ರದ್ದುಗೊಳಿಸಿರುವುದಾಗಿ   ನೈಋತ್ಯ ರೈಲ್ವೆ, ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಜನಸಂಪರ್ಕಾಧಿಕಾರಿ ಪ್ರಿಯಾ ಶೆಟ್ಟಿ ತಿಳಿಸಿದ್ದಾರೆ.

ಯಾವಯಾವ ರೈಲುಗಳ ಸೇವೆಗೆ ತಡೆ

  1. ರೈಲು ಗಾಡಿ ಸಂಖ್ಯೆ 16023/16024 ಮೈಸೂರು-ಯಲಹಂಕ-ಮೈಸೂರು, ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಮಾ.20 ರಿಂದ ಮಾ.31 ರವರೆಗೆ
  2. ರೈಲು ಗಾಡಿ ಸಂಖ್ಯೆ 16557/16558 ಮೈಸೂರು-ಕೆ.ಎಸ್.ಆರ್. ಬೆಂಗಳೂರು- ಮೈಸೂರು, ರಾಜ್ಯರಾಣಿ ಎಕ್ಸ್ ಪ್ರೆಸ್ ರೈಲು ಮಾ. 20 ರಿಂದ ಮಾ. 31ರವರೆಗೆ.
  3. ರೈಲು ಗಾಡಿ ಸಂಖ್ಯೆ 17325 ಬೆಳಗಾವಿಯಿಂದ ಮೈಸೂರು ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಮಾ. 21ರಿಂದ ಏ.1 ರವರೆಗೆ.
  4. ರೈಲು ಗಾಡಿ ಸಂಖ್ಯೆ 17326 ಮೈಸೂರಿನಿಂದ ಬೆಳಗಾವಿ ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಮಾ. 20 ರಿಂದ 31ರವರೆಗೆ.
  5. ರೈಲು ಗಾಡಿ ಸಂಖ್ಯೆ 11065 ಮೈಸೂರಿನಿಂದ ರೇಣಿಗುಂಟ ವಾರದ ಎಕ್ಸ್ ಪ್ರೆಸ್ ರೈಲು ಮಾ. 20 ಮತ್ತು 27 ರಂದು ಪ್ರಾರಂಭವಾಗುವ ಪ್ರಯಾಣ ಸೇವೆ ಇರುವುದಿಲ್ಲ.
  6. ರೈಲು ಗಾಡಿ ಸಂಖ್ಯೆ 11066 ರೇಣಿಗುಂಟದಿಂದ ಮೈಸೂರು ವಾರದ ಎಕ್ಸ್ ಪ್ರೆಸ್ ರೈಲು ಮಾ. 21 ಮತ್ತು 28 ರಂದು ಪ್ರಾರಂಭವಾಗುವ ಪ್ರಯಾಣ ಸೇವೆ.
  7. ರೈಲು ಗಾಡಿ ಸಂಖ್ಯೆ 16217 ಮೈಸೂರಿನಿಂದ ಸಾಯಿನಗರ ಶಿರಡಿ ವಾರದ ಎಕ್ಸ್ ಪ್ರೆಸ್ ರೈಲು ಮಾ. 23 ಮತ್ತು ಮಾ.30 ರಂದು ಪ್ರಾರಂಭವಾಗುವ ಪ್ರಯಾಣ ಸೇವೆ ಇರುವುದಿಲ್ಲ.
  8. ರೈಲು ಗಾಡಿ ಸಂಖ್ಯೆ 16218 ಸಾಯಿನಗರ ಶಿರಡಿಯಿಂದ ಮೈಸೂರು ವಾರದ ಎಕ್ಸ್ ಪ್ರೆಸ್ ರೈಲು ಮಾ. 24 ಮತ್ತು ಮಾ.31 ರಂದು ಪ್ರಯಾಣ ಸೇವೆ ಇರುವುದಿಲ್ಲ.
  9. ರೈಲು ಗಾಡಿ ಸಂಖ್ಯೆ 12079/12080 ಹುಬ್ಬಳ್ಳಿ-ಕೆ.ಎಸ್.ಆರ್. ಬೆಂಗಳೂರು- ಹುಬ್ಬಳ್ಳಿ, ಜನಶತಾಬ್ದಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಮಾ. 20 ರಿಂದ 31ರವರೆಗೆ ಪ್ರಯಾಣ ಸೇವೆ ಇರುವುದಿಲ್ಲ.
  10. ರೈಲು ಗಾಡಿ ಸಂಖ್ಯೆ 06539/06540 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ವಿಷೇಶ ಎಕ್ಸ್ ಪ್ರೆಸ್ ರೈಲು ಮಾ. 20, 24, 25, 26, 27 ಮತ್ತು ಮಾ.31 ರಂದು ಪ್ರಯಾಣ ಸೇವೆ ಇರುವುದಿಲ್ಲ.
  11. ರೈಲು ಗಾಡಿ ಸಂಖ್ಯೆ 16541 ಯಶವಂತಪುರದಿಂದ ಪಂಡರಾಪುರ ವಾರದ ಎಕ್ಸ್ ಪ್ರೆಸ್ ರೈಲು ಮಾ.19 ಮತ್ತು 26 ರಂದು ಪ್ರಯಾಣ ಸೇವೆ ಇರುವುದಿಲ್ಲ.
  12. ರೈಲು ಗಾಡಿ ಸಂಖ್ಯೆ 16542 ಪಂಡರಾಪುರದಿಂದ ಯಶವಂತಪುರ ವಾರದ ಎಕ್ಸ್ ಪ್ರೆಸ್ ರೈಲು ಮಾ.20 ಮತ್ತು 27 ರಂದು ಪ್ರಯಾಣ ಸೇವೆ ಇರುವುದಿಲ್ಲ.
  13. ರೈಲು ಗಾಡಿ ಸಂಖ್ಯೆ 19667 ಉದಯಪುರದಿಂದ ಮೈಸೂರು ವಾರದ ಹಮ್ ಸಫರ್ ರೈಲು ಮಾ. 23 ಮತ್ತು 30 ರಂದು ಪ್ರಯಾಣ ಸೇವೆ ಇರುವುದಿಲ್ಲ.
  14. ರೈಲು ಗಾಡಿ ಸಂಖ್ಯೆ 19668 ಮೈಸೂರಿನಿಂದ ಉದಯಪುರ ವಾರದ ಹಮ್ ಸಫರ್ ರೈಲು ಮಾ.26 ಮತ್ತು ಏ.2 ರಂದು ಪ್ರಯಾಣ ಸೇವೆ ಇರುವುದಿಲ್ಲ ಎಂದು ಜನಸಂಪರ್ಕಾಧಿಕಾರಿ ಪ್ರಿಯಾ ಶೆಟ್ಟಿ ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ ನಿರಂತರ ಮಳೆ- BBMP ಎಲ್ಲ ಅಧಿಕಾರಿಗಳು ಸನ್ನದ್ಧರಾಗಿ: ತುಷಾರ್ ಗಿರಿನಾಥ್