NEWSನಮ್ಮಜಿಲ್ಲೆಶಿಕ್ಷಣ-ಸಂಸ್ಕೃತಿ

ಶರಣರಿಂದ ಕಾಯಕದ ಮೂಲಕ ಭ್ರಷ್ಟಾಚಾರ ಮುಕ್ತ ಸಮಾಜದ ಪರಿಕಲ್ಪನೆ: ಬಸವಲಿಂಗ ಶಿವಯೋಗಿ ಸ್ವಾಮೀಜಿ

ವಿಜಯಪಥ ಸಮಗ್ರ ಸುದ್ದಿ

ಪಿರಿಯಾಪಟ್ಟಣ : ಕಾಯಕ ಸೇವೆಯ ಮೂಲಕ ಭ್ರಷ್ಟಾಚಾರ ಮುಕ್ತ ಸಮಾಜದ ಪರಿಕಲ್ಪನೆ ಕೊಟ್ಟವರು ಶಿವಶರಣರು ಎಂದು ತೋಂಟದಾರ್ಯ ಸಂಸ್ಥಾನ ಮಠದ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ತಿಳಿಸಿದರು.

ಪಟ್ಟಣದದಲ್ಲಿ ಸೋಮವಾರ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದವತಿಯಿಂದ ಏರ್ಪಡಿಸಲಾಗಿದ್ದ ಪ್ರತಿಭಾಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಯ್ದಕ್ಕಿಮಾರಯ್ಯ, ಆಯ್ದಕ್ಕಿಲಕ್ಕಮ್ಮ ನಂತಹ ದಂಪತಿಗಳಿ ನಿತ್ಯ ಅಕ್ಕಿ ಆಯುವ ಕೆಲಸ ಮಾಡಿ ಅದರಲ್ಲಿ ದಾಸೋಹ ನೀಡುವ ಮೂಲಕ ಭ್ರಷ್ಟಾಚಾರ ಮುಕ್ತ ಸಮಾಜ ಮಾದರಿಯಾಗಿದ್ದರು 12ನೇಶತಮಾನದ ಬಸವಣ್ಣನವರ ನೇತೃತ್ವದ ಶರಣಶರಣೆಯರ ಜೀವನ ಇಂದಿನ ಸಮಾಜಕ್ಕೆ ಆದರ್ಶವಾಗಿದ್ದು ಅವರ ಆಚಾರವಿಚಾರಗಳನ್ನು ಅಳವಿಸಿಕೊಳ್ಳಬೇಕು ಎಂದರು.

ಮಕ್ಕಳಿಗೆ ಕೇವಲ ಅಂಕಗಳಿಕೆಯಲ್ಲದೆ ಶುದ್ಧ ನಡೆ ನುಡಿಯ ಸಂಸ್ಕೃತಿಯನ್ನು ಕಲಿಸಬೇಕು ಆಗ ಮಾತ್ರ ಸರ್ವತೋಮುಖ ಅಭಿವೃದ್ದಿಯಾಗಲು ಸಾಧ್ಯ. ಜಾತಿರಹಿತ ಸಮಾಜದ ಆಚೆಗೂ ಶರಣರು ಗಂಡುಹೆಣ್ಣು ಎಂಬುದು ಇಲ್ಲವೆಂದು ಲಿಂಗಬೇದವನ್ನು ದೂರಮಾಡಿ ಮನುಷ್ಯಜಾತಿ ತಾನೊಂದೆ ವಲಂ ಎಂಬ ಮಾತನ್ನು ಸತ್ಯಮಾಡಿದ್ದರು ಎಂದು ತಿಳಿಸಿದರು.

ಸಾಕ್ಷರತಾ ಇಲಾಖೆ ನಿವೃತ್ತ ಉಪನಿರ್ದೇಶಕ ಸಿ.ಆರ್.ನಾಗರಾಜಯ್ಯ ಮಾತನಾಡಿ ಅನುಭವ ಮತ್ತು ಅನುಭಾವವನ್ನು ಹೊಂದಿರುವ ಏಕೈಕ ಧರ್ಮವೆಂದರೆ ವೀರಶೈವ ಧರ್ಮವಾಗಿದೆ. ಎಲ್ಲದೇವರನ್ನು ಅಂಗೈಯಲ್ಲಿ ತಂದು ನಿಲ್ಲಿಸಿ ದೇಹವೇ ದೇಗುಲ ಎಂದ ಶರಣರ ತತ್ವಗಳು ಇಂದಿಗೂ ಆದರ್ಶಪ್ರಯಾವಾಗಿದೆ. ಸರ್ವ ಜನಾಂಗದ ಹಿತವನ್ನು ಬಯಸಿ ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಇರುವುದು ವೀರಶೈವಲಿಂಗಾಯಿತ ಧರ್ಮಕ್ಕೆ ಮಾತ್ರವಾಗಿದೆ ಎಂದು ತಿಳಿಸಿದರು.

ತಾಲೂಕು ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ ಸಮಾಜದಲ್ಲಿ ನಿವೃತ್ತರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿ ಗೌರವಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದು ವೀರಶೈವ ನೌಕರರ ಅಭಿವೃದ್ದಿಗೆ ಸದಾ ಸಂಘ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಎಚ್.ಸಿ.ಬಸವರಾಜು, ವೀರಶೈವ ನೌಕರರ ಕ್ಷೇಮಾಭಿವೃದಿದ ಸಂಘದ ಜಿಲ್ಲಾಧ್ಯಕ್ಷ ಆಲೂರು ಬಸವರಾಜು, ತಾ.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನವೀನ್‌ಕುಮಾರ್, ಅರಸಿಕೇರೆ ಕೃಷಿ ಸಹಾಯಕನಿರ್ದೇಶಕ ಎ.ಪಿ.ಶಿವಕುಮಾರ್, ವೈದ್ಯಾಧಿಕಾರಿಗಳಾದ ಡಾ.ಎಂ.ಜಿ.ಸುನೀಲ್, ಡಾ.ಮಧುಸೂಧನ್, ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ನೌಕರರಾದ ಪ್ರಮೀಳಾದೇವಿ, ಎಚ್.ಎಸ್.ಪುಟ್ಟರಾಜು, ರಾಜೇಶ್ವರಿ ರವನ್ನು ಮತ್ತು ನೂತನ ಬಡ್ತಿ ಮುಖ್ಯಶಿಕ್ಷಕರು, ಸಿಆರ್‌ಪಿಗಳು, ಮತ್ತು ಸರಿಗಮಪರ ಸೀಸನ್-19ಕ್ಕೆ ಆಯ್ಕೆಯಾದ ಗುರುಪ್ರಸಾದ್ ಮತ್ತು ಎಸ್‌ಎಸ್‌ಎಲ್‌ಸಿ,ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷರ ಸಂಘದ ಅಧ್ಯಕ್ಷರಾದ ನಾಗಶೆಟ್ಟಿ, ಅನುದಾನಿತ ಶಾಲೆ ಸಂಘದ ಅಧ್ಯಕ್ಷ ಆರಾಧ್ಯಕಿಶೋರ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ.ಶಿವಮೂರ್ತಿ, ಉಪಾಧ್ಯಕ್ಷ ಧರ್ಮಪಾಲ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಹದೇವಪ್ಪ, ನಿರ್ದೇಶಕರಾದ ಪಂಚಾಕ್ಷರಿ, ಸರ್ವಮಂಗಳ, ಎಂ.ಎಸ್.ಪ್ರಸನ್ನ, ಯುವರಾಜ್, ಪ್ರಭುಸ್ವಾಮಿ, ಕೆ.ಪಿ.ಮಹದೇವಪ್ಪ, ಕೆ.ಸಿ.ಸತೀಶ್, ಲೋಕೇಶ್, ದಿನೇಶ್‌ ಆರಾಧ್ಯ ಸೇರಿದಂತೆ ಮತ್ತಿತರರು ಇದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ