ಬೆಂಗಳೂರು: ಕಬ್ಬಿನ ಉಪ ಉತ್ಪನ್ನಗಳಿಂದ ಟನ್ ಕಬ್ಬಿಗೆ 126 ರೂ. ಲಾಭ ಬರುತ್ತದೆ ಅದರಲ್ಲಿ ಮೊದಲನೇ ಕಂತಾಗಿ ರೈತರಿಗೆ ಎಪ್ಆರ್‌ಪಿಗೆ ಹೆಚ್ಚುವರಿಯಾಗಿ 50 ರೂ. ನೀಡುವಂತೆ ಕಾರ್ಖಾನೆಗಳಿಗೆ ಆದೇಶ ಹೊರಡಿಸುವುದಾಗಿ ಸಕ್ಕರೆ ಸಚಿವ ಮುನೇನಕೊಪ್ಪ ತಿಳಿಸಿದ್ದಾರೆ.
ಇಂದು ನಡೆದ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ಈ ವಿಷಯ ತಿಳಿಸಿದರು. ಆದರೆ, ಸರ್ಕಾರದ ನಿಲುವನ್ನು ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬುರ್ ಶಾಂತಕುಮಾರ್ ತಿರಸ್ಕಾರ ಮಾಡಿ ಚಳವಳಿ ಮುಂದುವರಿಯುತ್ತದೆ ಎಂದು ಹೇಳಿದರು.
ಬಳಿಕ ಸಚಿವರು ನಾಳೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ನಿಮ್ಮ ಹೋರಾಟವನ್ನು ಅಂತ್ಯಗೊಳಿಸಿ ಎಂದು ಮನವಿ ಮಾಡಿದರು ಆದರೆ ಅವರ ಮನವಿಗೆ ರೈತರು ಸ್ಪಂದಿಸಿಲ್ಲ. ನೀವು ಉತ್ತಮ ದರ ನಿಗಮ ಮಾಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಸಕ್ಕರೆ ಕಾರ್ಖಾನೆಗಳು ಯೆಥನಾಲ್ ಉತ್ಪಾದನೆಗೆ ಪ್ರೋತ್ಸಾಹಧನ, ಕಡಿಮೆ ಬಡ್ಡಿ ಸಾಲ, ಎಥೆನಾಲ್ ಖಚಿತ ಖರೀದಿ ಭರವಸೆ, ತೆರಿಗೆ ವಿನಾಯಿತಿ, ವಿದ್ಯುತ್ ಖರೀದಿ ಭರವಸೆ, ಕಡಿಮೆ ಬಡ್ಡಿ ಧನಸಹಾಯ, ಸಕ್ಕರೆ ರಪ್ತು ಪ್ರೋತ್ಸಾಹದ, ಇನ್ನಿತರ ಸವಲತ್ತುಗಳನ್ನು ಸರ್ಕಾರದಿಂದ ಪಡೆದು, ಸರ್ಕಾರದ ಆದೇಶಗಳನ್ನು ಪಾಲಿಸಬೇಕು.
ಸಕ್ಕರೆ ಕಾರ್ಖಾನೆಗಳು ಕಟಾವ್ ಕೂಲಿ ಸಾಗಾಣಿಕೆ ವೆಚ್ಚವನ್ನು 250 ರಿಂದ 300 ಏರಿಕೆ ಮಾಡಿದ್ದಾರೆ. ಈ ವೆಚ್ಚವನ್ನು ಕಡಿಮೆ ಮಾಡಿದರೆ ಟನ್‌ಗೆ ರೈತರಿಗೆ 150 -200 ರೂ. ಉಳಿಯಬಹುದು ಈ ದಿಕ್ಕಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಉತ್ತರ ಪ್ರದೇಶ್, ಪಂಜಾಬ್, ಹರಿಯಾಣ , ತಮಿಳುನಾಡು ತೆಲಂಗಾಣ ರಾಜ್ಯಗಳಲ್ಲೂ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗದಿ ಮಾಡಿದ್ದಾರೆ, ಅದನ್ನು ಗಮನಿಸಿ ಹೆಚ್ಚುವರಿ ಬೆಲೆ ನಿಗದಿಮಾಡಲಿ, ಸಕ್ಕರೆ ಇಳುವವರಿಯಲ್ಲಿ ಮೋಸ ತಪ್ಪಿಸಿದರೆ ರೈತರಿಗೆ ಶೇಕಡಾ ಒಂದು ಇಳುವರಿಗೆ 300 ರೂ. ಹೆಚ್ಚಳವಾಗುತ್ತದೆ. ಈ ಎಲ್ಲವನ್ನು ಸರ್ಕಾರ ಗಮನಿಸಿ ತೀರ್ಮಾನ ಮಾಡಿ ಎಂದು ಸಚಿವರಿಗೆ ತಿಳಿಸಿದರು.
ಈ ನಡುವೆ 14ನೇ ದಿನದ ಧರಣಿ ಮುಂದುವರಿಯುತ್ತದೆ ಎಂದ ಕುರುಬೂರು ಶಾಂತಕುಮಾರ್ ವಿವರಿಸಿದರು. ಸಭೆಯಲ್ಲಿ ಕಬ್ಬು ಖರೀದಿ ಮಂಡಳಿ ಸದಸ್ಯರು, ಕೈಗಾರಿಕ ಇಲಾಖೆ ಕಾರ್ಯದರ್ಶಿ, ಪಂಕಜ್ ಕುಮಾರ್ ಪಾಂಡೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತ ಶಿವಾನಂದ ಕೆಲ್ಕರಿ ಮುಂತಾದವುರಿದ್ದರು.