NEWSನಮ್ಮಜಿಲ್ಲೆನಮ್ಮರಾಜ್ಯ

ಸತ್ಯಾಗ್ರಹ ನಿರತ ಸಾರಿಗೆ ನೌಕರರ ಸೆಡ್‌ನಲ್ಲಿ ವಿದ್ಯುತ್‌ ಕಡಿತ ಮಾಡಿಸಿದ ಸರ್ಕಾರ –  ತುಟಿಬಿಚ್ಚದ ವಿಪಕ್ಷಗಳ ನಾಯಕರು

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಸಾರಿಗೆ ನೌಕರರು ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿನ್ನೆಯಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಇಂದು ಸಂಜೆ 6 ಗಂಟೆ ಸುಮಾರಿನಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಭೇಟಿ ನೀಡಿ 7ನೇ ವೇತನ ಆಯೋಗ ಮಾದರಿಯಲ್ಲಿ ನಿಮಗೆ ವೇತನ ಕೊಡುತ್ತೇವೆ ಜತೆಗೆ ವಜಾಗೊಂಡಿರುವ 583 ನೌಕರರನ್ನು ಯಾವುದೇ ಷರತ್ತು ಇಲ್ಲದೆ ಮರು ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿ ಹೋಗಿದ್ದಾರೆ.

ಆದರೆ, ಇತ್ತ ಸಾರಿಗೆ ಸಚಿವರು ಹೋಗುತ್ತಿದ್ದಂತೆ ನೌಕರರು ಮಾಡುತ್ತಿರುವ ಸತ್ಯಾಗ್ರಹದ ನಂ.06ರಲ್ಲಿ ಸೆಡ್‌ಗೆ ಅಧಿಕಾರಿಗಳು ವಿದ್ಯುತ್‌ ದೀಪಗಳನ್ನು ಆಫ್‌ ಮಾಡಿ ಕರೆಂಟ್‌ ಕಟ್‌ ಮಾಡುವ ಮೂಲಕ ಒಂದು ರೀತಿ ಹಿಟ್ಲರ್‌ಗಳಂತೆ ವರ್ತಿಸುತ್ತಿದ್ದಾರೆ.

ಈಗ ಸುಮಾರು ರಾತ್ರಿ 8 ಗಂಟೆಯಾಗಿದ್ದರೂ ಈವರೆಗೂ ನೌಕರರು ಸತ್ಯಾಗ್ರಹ ನಡೆಸುತ್ತಿರುವ ಸೆಡ್‌ಗೆ ಕರೆಂಟ್‌ ಕೊಟ್ಟಿಲ್ಲ. ಇದು ರಾಜ್ಯ ಸರ್ಕಾರದ ಉದ್ದಟತನವನ್ನು ತೋರಿಸುತ್ತದೆ. ಅತ್ತ ಸಾರಿಗೆ ಸಚಿವರನ್ನು ಬಿಟ್ಟು ಹೋರಾಟವನ್ನು ಹತ್ತಿಕ್ಕಲೂ ಯತ್ನಿಸುತ್ತಿರುವ ಬಿಜೆಪಿ ಸರ್ಕಾರ ಇತ್ತ ಕರೆಂಟ್‌ ಕಟ್‌ ಮಾಡುವ ಮೂಲಕ ನೌಕರರಿಗೆ ಹಿಂಸೆ ನೀಡಲು ಹೊರಟಿದೆ.

ಇಂಥ ನಾಚಿಗೆಗೇಡಿನ ಸರ್ಕಾವರನ್ನು ನಾವು ನೋಡೆ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಮ್ಮಿಂದಲೇ ನೀವು ಮುಖ್ಯಮಂತ್ರಿ, ಮಂತ್ರಿಗಳಾಗಿ ಮತ್ತು ವಿಪಕ್ಷ ನಾಯಕರಾಗಿ ಮೆರೆಯುತ್ತಿರುವುದು. ಆದರೂ ನೀವು ಜನರಿಗೆ ಇಷ್ಟು ತೊಂದರೆ ಕೊಡುತ್ತಿರುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಕರೆಂಟ್‌ ಕೊಟ್ಟಿದ್ದರು ಆದರೆ ಈಗ 8 ಗಂಟೆಯಾಗುತ್ತಿದೆ ಈವರೆಗೂ ಕರೆಂಟ್‌ ಕೊಟ್ಟಿಲ್ಲ. ನಮ್ಮ ಸತ್ಯಾಗ್ರಹದಲ್ಲಿ ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಸಹ ಭಾಗವಹಿಸಿದ್ದಾರೆ. ಆದರೆ ಈಗ ನಾವು ಕತ್ತಲೆಯಲ್ಲೆ ಕುಳಿತಿದ್ದೇವೆ ಎಂದು ಪ್ರತಿಭಟನಾನಿರತ ನೌಕರರು ಹೇಳಿದ್ದಾರೆ.

ಈಗಲಾದರೂ ಮಾನ ಮರ್ಯಾದೆ ಇಲ್ಲದಂತೆ ವರ್ತಿಸುತ್ತಿರುವ ಈ ಸರ್ಕಾರ ಹೋರಾಟ ನಿರತ ನೌಕರರನ್ನು ಗೌರವಯುತವಾಗಿ ನಡೆಸಿಕೊಳ್ಳುವದಕ್ಕೆ ಮುಂದಾಗಬೇಕು. ಈ ರೀತಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ನಡೆಯನ್ನು ಇಡೀ ವಿಶ್ವಕ್ಕೆ ಸಾರಿದಂತಾಗುತ್ತದೆ. ಹೀಗಾಗಿ ನೀವು ನೌಕರರ ಹೋರಾಟಕ್ಕೆ ಸ್ಪಂದಿಸಿ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ವಿಪಕ್ಷ ಸ್ಥಾನದಲ್ಲಿರುವ ನಾಯಕರು ಸರ್ಕಾರದ ಈ ನಡೆಯನ್ನು ಖಂಡಿಸುವ ಬದಲಿಗೆ ಸರ್ಕಾರದೊಂದಿಗೆ ಕೈ ಜೋಡಿಸುವ ರೀತಿ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರಜ್ಞಾವಂತ ನಾಗರಿಕರು ಕಿಡಿಕಾರುತ್ತಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ