NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಸುಲಿಗೆ ಕೋರ ಲಂಚಬಾಕ ಕೆಎಸ್‌ಆರ್‌ಟಿಸಿ ಅಧಿಕಾರಿ ಬಸವರಾಜು ಮತ್ತೆ ಡಿಸಿಯಾಗಿ ನೇಮಕ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಕೆ.ಆರ್‌.ಬಸವರಾಜು ಅವರನ್ನು ಕಳೆದ ಜುಲೈ ತಿಂಗಳಿನಲ್ಲಿ ಬಿಎಂಟಿಸಿಯ ಖಾಲಿ ಇದ್ದ ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಹುದ್ದೆಗೆ ವರ್ಗಾವಣೆ ಮಾಡಿ ಕೆಎಸ್‌ಆರ್‌ಟಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಮಾಡಿದ್ದರು.

ಅಂದರೆ ಸುಮಾರು 6 ತಿಂಗಳುಗಳ ಕಾಲ ನೌಕರರು ನೆಮ್ಮದಿಯಾಗಿದ್ದರು. ಆದರೆ ಸಾರಿಗೆ ನೌಕರರು ಈಗ ಮತ್ತೆ ಲಂಚಕೊಡುವ ಇಕ್ಕಟ್ಟಿಗೆ ಸಿಲುಕುವ ಸಂದರ್ಭವನ್ನು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರೇ ತಂದೊಡ್ಡಿದ್ದು ನಮಗೆ ತಲೆನೋವಾಗಿ ಪರಿಣಮಿಸಲಿದೆ ಎಂದು ಸಾರಿಗೆಯ ಚಿಕ್ಕಮಗಳೂರು ವಿಭಾಗದ ನೌಕರರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ತುಮಕೂರು: ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಲಂಚಾವತಾರ- ದಿನಕ್ಕೆ 1ಲಕ್ಷ ರೂ. ಸೂಟ್‌ಕೇಸ್‌ ಇಲ್ಲದೆ ಮನಗೇ ಹೋಗಲ್ಲ

ಅಲ್ಲದೆ ನಮ್ಮ ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಕೆ.ಆರ್‌.ಬಸವರಾಜು ಅವರ ವರ್ಗಾವಣೆಯನ್ನು ರದ್ದುಮಾಡಿ ನಮಗೆ ನೌಕರರ ಸ್ನೇಹಿ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಲ್ಲಿ ಮನವಿ ಮಾಡಿದ್ದಾರೆ.

ಹೌದು! ಕೆಎಸ್‌ಆರ್‌ಟಿಸಿ ತುಮಕೂರು ವಿಭಾಗದ ವಿಭಾಗೀಯ ನಿಂತ್ರಣಾಧಿಕಾರಿಯಾಗಿದ್ದ ವೇಳೆ ವಿಭಾಗದ ಬಹುತೇಕ ಎಲ್ಲ ನೌಕರರಿಗೂ ಹಿಂಸೆ ನೀಡಿ ವಿಭಾಗವನ್ನು ಲಂಚಯುಕ್ತವಾಗಿ ಮಾರ್ಪಡಿಸಿದ್ದ ಖ್ಯಾತಿ ಹೊಂದಿರುವ ಬಸವರಾಜು ಅವರನ್ನು ಮತ್ತೆ ಇಂದು ಚಿಕ್ಕಮಗಳೂರಿಗೆ ಸಾರಿಗೆ ಡಿಸಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ಈ ಆದೇಶವನ್ನು ತಡೆ ಹಿಡಿಯಬೇಕು ಎಂದು ನೌಕರರ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವಿಜಯಪಥ ವರದಿ ಪರಿಣಾಮ- ಕೊನೆಗೂ ಎತ್ತಂಗಡಿಯಾದ ಲಂಚಬಾಕ ತುಮಕೂರು ಸಾರಿಗೆ ಡಿಸಿ ಬಸವರಾಜು – ನಿಟ್ಟುಸಿರು ಬಿಟ್ಟ ನೌಕರರು

ತುಮಕೂರು ವಿಭಾಗೀಯ ನಿಯಂತ್ರಣ ಅಧಿಕಾರಿಯಾಗಿದ್ದಾಗ ಬಸವರಾಜು ಸಂಸ್ಥೆಯಲ್ಲಿ ಭ್ರಷ್ಟಾಚಾರ ಎಸಗಿದ್ದು, ನೌಕರರಿಂದ ಲಂಚ ಪಡೆದ ಆರೋಪ ಸೇರಿದಂತೆ 40 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇವರ ವಿರುದ್ಧ ಆರೋಪಪಟ್ಟಿ ಸಿದ್ದಪಡಿಸಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಆದರೆ, ಈತನನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸ್ಥಾನದಲ್ಲಿರುವ ಕೆಲ ಭ್ರಷ್ಟ ಅಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರ ಕಣ್ಣು ತಪ್ಪಿಸಿ ಇನ್ನೂ ಆ ಆರೋಪ ಪಟ್ಟಿಯನ್ನು ಮರೆ ಮಾಚಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಎಲ್ಲದರ ಬಗ್ಗೆ ವಿಜಯಪಥ.ಇನ್‌ ಆನ್‌ಲೈನ್‌ ಸುದ್ದಿ ಮಾಧ್ಯಮ ಸರಣಿ ವರದಿ ಮಾಡಿತ್ತು. ಅಲ್ಲದೆ ಇವರ ಲಂಚವತಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ವಿಜಯಪಥದಲ್ಲಿ ವರದಿ ಬಂದಿದ್ದನ್ನು ಗಮನಿಸಿದ ಎಂಡಿ ಅನ್ಬುಕುಮಾರ್‌ ಅವರು ಕೆಲ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ್ದರು. ಅಲ್ಲದೆ ಈತನ ವರ್ಗಾವಣೆ ಮಾಡಿ ಎಂದು ತಾಕೀತು ಮಾಡಿದ್ದರಿಂದ ಸದ್ಯ ಕೆಎಸ್‌ಆರ್‌ಟಿಸಿ ಬಿಟ್ಟು ಬಿಎಂಟಿಸಿಗೆ ವರ್ಗಾವಣೆ ಗೊಂಡಿದ್ದರು.

ಆದರೆ ಮತ್ತೆ ಇಂಥ ಭ್ರಷ್ಟ ಅಧಿಕಾರಿಗಳು ಆಯಕಟ್ಟಿನ ಸ್ಥಳಲ್ಲಿ ಇದ್ದರೆ ನೌಕರರು ಮಾನಸಿಕ ಒತ್ತಡಕ್ಕೆ ಒಳಗಾಗಿ ಅಪಘಾತಗಳು ಸಂಭವಿಸುವುದು ಹೆಚ್ಚಾಗಲಿವೆ. ಹೀಗಾಗಿ ಈತನ ಭ್ರಷ್ಟಾಚಾರಕ್ಕೆ ಉತ್ತೇಜ ನೀಡುವಂತ ಕೆಲಸಕ್ಕೆ ಸಂಸ್ಥೆಯ ಅಧ್ಯಕ್ಷರಾಗಲಿ ಅಥವಾ ಅಧಿಕಾರಿಗಳಾಗಲಿ ಮುಂದಾಗಬಾರದು ಎಂದು ನೌಕರರು ಮನವಿ ಮಾಡಿದ್ದಾರೆ.

ಅಂದು ಕೆ.ಆರ್. ಬಸವರಾಜು ಅವರ ಲಂಚಬಾಕತನಕ್ಕೆ ಸ್ಪಂದಿಸದ ಅದೆಷ್ಟೋ ಪ್ರಾಮಾಣಿಕ ಅಧಿಕಾರಿಗಳು ವಿಭಾಗದಿಂದ ವರ್ಗಾವಣೆಗೊಂಡಿದ್ದರು. ಇನ್ನು ಕೆಲ ಅಧಿಕಾರಿಗಳು ಒತ್ತಡಕ್ಕೆ ಸಿಲುಕಿ ನಿತ್ಯ ಯಾತನೆ ಅನುಭವಿಸಿದ್ದರು. ಅಲ್ಲದೆ ನಿಗಮದ ಚಾಲನಾ ಸಿಬ್ಬಂದಿ ಸೇರಿದಂತೆ ಇತರ ನೌಕರರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಿಕಿರಿ ಅನುಭವಿಸಿದ್ದರು.

ಈಗ ಬಸವರಾಜು ಅವರನ್ನು ಚಿಕ್ಕಮಗಳೂರು ಸಾರಿಗೆ ವಿಭಾಗಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಿರುವುದು ಮತ್ತೆ ನೌಕರರ ಸುಲಿಗೆಗೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರೇ ರಹದಾರಿ ಕಲ್ಪಸಿದಂತಾಗುತ್ತಿದೆ ಎಂದು ನೌಕರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

1 Comment

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ