NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರೇ… 500 ರೂ. ಆಸೆಗೆ ಬಿದ್ದು 5 ಲಕ್ಷ ರೂ. ಕಳೆದುಕೊಳ್ಳುವ ಮೂರ್ಖರಾಗದಿರಿ

ವಿಜಯಪಥ ಸಮಗ್ರ ಸುದ್ದಿ

ಯಾರಾದರೂ ನಿಮ್ಮನ್ನು ಅವರ ಅರಮನೆಗೆ ಆಹ್ವಾನಿಸಿದಾಗ ನಿಮಗೆ ಇಷ್ಟವಾದರೆ ಹೋಗಿ. ಆದರೆ ಅದಕ್ಕಾಗಿ ನಿಮ್ಮ ಗುಡಿಸಲಿಗೆ ಬೆಂಕಿ ಹಚ್ಚಿ ಹೋಗಬೇಡಿ. ಒಂದು ವೇಳೆ ಆ ದೊರೆಯು ನಿಮ್ಮ ಜೊತೆಗೆ ಜಗಳಮಾಡಿ ನಿಮ್ಮನ್ನು ಅವನ ಅರಮನೆಯಿಂದ ಹೊರ ಹಾಕಿದರೆ ಆಗ ನೀವು ಎಲ್ಲಿಗೆ ಹೋಗುತ್ತೀರಿ? 18 ಮಾರ್ಚ್‌ 1956ರಲ್ಲೇ ಬಾಬಾಸಾಹೇಬ್ ಡಾ‌.ಅಂಬೇಡ್ಕರ್ ಜನರಿಗೆ ಸಲಹೆ ನೀಡಿದ್ದ ಪರಿ ಇದು.

ಅವರು ಇನ್ನು ಮುಂದುವರಿದು ಮಾತನಾಡುತ್ತಾ, ನನಗೆ ಹೊರಗಿನವರಿಂದ ಯಾವುದೇ ಅಪಾಯ ಕಾಣುತ್ತಿಲ್ಲ ಬದಲಿಗೆ ನಮ್ಮ ಜನರಿಂದಲೇ ನಮಗೆ ಅಪಾಯ ಕಾಣುತ್ತಿದೆ, ಇದನ್ನಿ ಇನ್ನಾದರೂ ನಾವು ಸಿರಪಡಿಸಿಕೊಳ್ಳದೆ ಹೋದರೆ ನಮ್ಮ ನಾಶಕ್ಕೆ ನಾವೆ ಪಣತೊಟ್ಟಂತಾಗುತ್ತದೆ ಎಂದು ಹೇಳಿದ್ದರು.

ಬಾಬಾಸಾಹೇಬ್ ಡಾ‌.ಅಂಬೇಡ್ಕರ್ ಅವರ ಈ ಮಾತು ಇಂದು ಸಾರಿಗೆ ನೌಕರರಲ್ಲಿ ಇಲ್ಲದ ಒಗ್ಗಟ್ಟನ್ನು ತೋರಿಸುವ ಜತೆಗೆ ಅವರಿಗೇನಾದರೆ ನನಗೆ ನಾನು ನಮ್ಮ ಕುಟುಂಬ ಚೆನ್ನಾಗಿರಬೇಕು ಎಂಬ ಭಾವನೆಗೆ ಹಿಡಿದ ಕನ್ನಡಿಯಂತಿದೆ. ಅವರಿದ್ದರೆ ನಾವು ನಾವಿದ್ದರೆ ಅವರು ಎಂಬ ನಂಬಿಕೆ ಇಲ್ಲವಾದರೆ ಈ ರೀತಿಯ ಭಾವನ ಮೂಡುವುದು ಸಹಲ ಆದರೆ ನಿಮಾಗಿ ನಾವು ಇದ್ದೇವೆ ನಮ್ಮ ಜತೆ ನಿಲ್ಲಿ ಸಾಕು ಮುಂದೆ ನಿಮಗೆ ಒಳ್ಳೆಯದನ್ನೇ ಮಾಡುತ್ತೇವೆ ಎಂದು ಹೇಳಿದರೆ, ಆ ಮಾತನ್ನು ಕೇಳಬೇಕು.

ಕಾರಣ ಅವರ ಹಿಂದೆ ನೀವು ನಿಂತರೆ ನಿಮಗಾಗಿ ಅವರು ಮುಂದೆ ನಿತ್ತು ಹೋರಾಟ ಮಾಡಿ ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸುತ್ತಾರೆ. ಆ ನಂಬಿಕೆ ನಿಮಗೆ ಇರಬೇಕು. ಆದರೆ ನಂಬಿಕೆಯನ್ನೇ ಇಟ್ಟುಕೊಳ್ಳದೆ ನೀವು ಹಿಂದೆ ನಿಂತರೆ ಪ್ರಯೋಜನಕ್ಕಿಂತ ಅಪಾಯವನ್ನು ಎದುರಿಸುವುದೆ ಹೆಚ್ಚಾಗಿಲಿದೆ. ಹೀಗಾಗಿ ನೀವು ಹಿಂದೆ ನಿಂತು ನಮ್ಮ ಭವಿಷ್ಯ ರೂಪಿಸಿಕೊಳ್ಳುತ್ತೀರೋ ಇಲ್ಲ ನಾವು ಇದ್ದಂತೆ ಇದ್ದು ಬಿಡುತ್ತೇವೆ ಎಂದು ನಮ್ಮ ಕಾಲಮೇಲೆ ನೀವೆ ಕಲ್ಲು ಎತ್ತಿಹಾಕಿಕೊಳ್ಳುತ್ತೀರೋ ಯೋಚಿಸಿ ಮುನ್ನಡೆಯಿರಿ.

ಇನ್ನು ಈ ಮತ್ತೆ ಬೇಡಿಕೆಗಳ ಈಡೇರಿಕೆಗಾಗಿ ಹುಮ್ಮಸ್ಸಿನೊಂದಿಗೆ ಹೋರಾಟಕ್ಕೆ ಇಳಿದ್ದೀರಿ. ಅದು ಬಹುತೇಕ ಸಫಲತೆಯ ಹಾದಿಯಲ್ಲಿಯೇ ಸದ್ಯ ಸಾಗುತ್ತಿತ್ತು. ಹೀಗಾಗಿ ಈ ಹಿಂದೆ ಕೆಲವರು ಮಾಡಿದ ಎಡವಟ್ಟಿನಿಂದ ಇಂದು 2 ಸಾವಿರಕ್ಕೂ ಹೆಚ್ಚು ನೌಕರರು ಬೀದಿಯಲ್ಲಿ ಬಿದ್ದಿದ್ದಾರೆ. ಆ ರೀತಿ ಮತ್ತೆ ಮಾಡಲು ಹೋಗಬೇಡಿ. ನಿಮ್ಮ ನಾಯಿಗೆ ಸಕ್ಕರೆ ಹಾಕಲು ಬಂದವರಿಗೆ ನೀವು ಮಣ್ಣು ಹಾಕುವ ಕೃತ್ಯಕ್ಕೆ ಕೈ ಹಾಕಬೇಡಿ.

1.25 ಲಕ್ಷ ನೌಕರರಿಗೆ ಆದಂತೆ ನನಗೂ ಆಗುತ್ತದೆ ಎಂಬ ದೃಢ ನಿರ್ಧಾರವನ್ನು ತೆಗೆದುಕೊಳ್ಳಿ ಅದನ್ನು ಬಿಟ್ಟು ಯಾರೋ ದೂರದ ಬೆಟ್ಟ ತೋರಿಸಿ ನೋಡು ಎಷ್ಟು ಚೆನ್ನಾಗಿದೆ ಎಂದು ಹೇಳಿದರೆ ಅದನ್ನು ನಂಬುವು ಮೂರ್ಖರಾಗಬೇಡಿ. ಅದು ಕೂಡ ಹತ್ತಿರಕ್ಕೆ ಹೋದರೆ ಕಲ್ಲು ಮುಳ್ಳಿನಿಂದ ಕೂಡಿರುತ್ತದೆ ಎಂಬ ಸತ್ಯವನ್ನು ಅರಿತು ಮುಂದಡಿ ಇಡುವುದನ್ನು ರೂಢಿಸಿಕೊಳ್ಳಿ.

ನೀವು ಮಾಡಿದ ತಪ್ಪಿಗೆ ಇಂದು ನಿಮಗಾಗಿ ಹೋರಾಟಕ್ಕೆ ಇಳಿದ ನೂರಾರು ನೌಕರರು ಇನ್ನು ಅಧಿಕಾರಿಗಳ ಕಿರುಕುಳಕ್ಕೆ ಒಳಗಾಗಿ ಬೇಸತ್ತಿದ್ದಾರೆ. ಅಂಥ ಕೆಲಸವನ್ನು ನೀವು ಮತ್ತೊಮ್ಮೆ ಮಾಡಬೇಡಿ.

ಏಪ್ರಿಲ್‌ನಲ್ಲಿ 14ದಿನ ಹೋರಾಟ ನಡೆದಾಗ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಿದ್ದೀರಿ. ನಿಮ್ಮ ಒಗ್ಗಟ್ಟನ್ನು ಕಂಡ ಸರ್ಕಾರ ಮತ್ತು ಸಾರಿಗೆ ಅಧಿಕಾರಿಗಳೇ ಭಯಗೊಂಡು ಹೌಹಾರಿದರು. ಅವರು ಒಂದು ರೀತಿ ಹುಲಿ ಕಂಡ ಜಿಂಕೆಯಂತೆ ದಿಕ್ಕು ತೋಚದವರಂತೆ ಕಂಗಾಲಾಗಿ ನಿಮ್ಮ ಒಕ್ಕಟ್ಟನ್ನು ಒಡೆಯಲೇ ಬೇಕು ಎಂದು ಹಲವು ವಾಮ ಮಾರ್ಗಗಳಲ್ಲಿ ಆಮೀಷವೊಡ್ಡಿ ಅದರಲ್ಲಿ ಕೊನೇಗೂ ಸಫಲರಾದರು.

ಇನ್ನು ನೀವು ಆಮೀಷವೊಡ್ಡಿದವರಿಗೆ ತಲೆ ಬಾಗಿ ಅವರು ಹೇಳಿದಂತೆ ಕೇಳಿದ್ದೀರಿ. ಅದರಿಂದ ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಅಂದರೇ ಇಡೀ ದೇಶವೇ ನಿಮ್ಮ ಕಡೆ ತಿರುಗಿ ನೋಡುವ ರೀತಿ ನಡೆಯುತ್ತಿದ್ದ ನಿಮ್ಮ ಹೋರಾಟ ದಿಕ್ಕಿಲ್ಲದಂತ್ತಾಯಿತು. ಜತೆಗೆ ಕೊರೊನಾ ಮಹಾಮಾರಿಯೂ ಒಂದು ಕಾರಣವಾಯಿತು.

ಇಂದು ಕೂಡ ಒಂದು ಕ್ವಾಟ್ರು, ಒಂದು ತುಂಡು ಮತ್ತೆ ಕೇವಲ 500 ರೂ. ಕೈಗಿಟ್ಟರೆ ಅದೇ ಸಾಕು ನಾವು ನಮ್ಮವರನ್ನೇ ನಿಂದಿಸುತ್ತೇವೆ ಅವರ ವಿರುದ್ಧವೇ ತಿರುಗಿ ಬೀಳುತ್ತೇವೆ ಎಂಬ ಮನಸ್ಥಿತಿಯಲ್ಲಿ ಇನ್ನು ಕೆಲ ನೌಕರರು ಇದ್ದೀರಿ ಅದನ್ನು ಈಗಲಾದರೂ ಬಿಟ್ಟು ಒಗ್ಗಟ್ಟಿನಿಂದ ನಿಮ್ಮ ನಿಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಮುಂದಾಗಿ. 500 ರೂ. ಆಸೆಗೆ 5 ಲಕ್ಷ ರೂ. ಕಳೆದುಕೊಳ್ಳುವ ಮೂರ್ಖರಾಗದಿರಿ.

ಇನ್ನೂ ಕಾಲ ಮಿಂಚಿಲ್ಲ. ಈಗಲೂ ನಿಮ್ಮಲ್ಲಿ ನಾವು ನೌಕರರ ನಮ್ಮ ಕಾಲನ್ನು ನಾವೇ ಎಳೆದುಕೊಂಡು ಜಾರಿ ಬಿದ್ದು ಇನ್ನೊಬ್ಬರು ಅದನ್ನು ನೋಡಿ ನಗುವಂತೆ ಮಾಡಿಕೊಳ್ಳುವುದು ಬೇಡ ಎಂಬುದನ್ನು ಅರಿಯಿರಿ. ಇದರಿಂದ ನಿಮ್ಮ ಶಕ್ತಿ ಬಲಗೊಳ್ಳುತ್ತ ಹೋಗುತ್ತದೆ.

ಸಮಾಜದಲ್ಲಿ ಇತರರಂತೆ ನಿಮ್ಮ ಕುಟುಂಬಗಳು ಗೌರವಯುತವಾಗಿ ಜೀವನ ನಡೆಸುವುದು ಯಾವಾಗ? ಬ್ರಿಟಿಷರ ಕಾಲದಲ್ಲಿ ಇದ್ದ ದೈನೇಹಿ ಸ್ಥಿತಿಯಲ್ಲೇ ಎಷ್ಟು ದಿನ, ವರ್ಷ ಬದುಕಬೇಕೆಂದುಕೊಂಡಿದ್ದೀರಿ. ಈಗಲಾದರೂ ಎಚ್ಚತ್ತುಕೊಂಡು ಒಗ್ಗಟ್ಟಿನಲ್ಲಿ ಬಲವಿದೆ. ಆ ಬಲದ ಹೋರಾಟದಲ್ಲಿ ಜಯವಿದೆ ಎಂಬುದನ್ನು ಅರಿತುಕೊಳ್ಳಿ.

ನಿಮ್ಮ ಒಗ್ಗಟ್ಟು ನಿಮ್ಮ ಜೀವನ ಉತ್ತಮಗೊಳಿಸಲು ಬುನಾದಿ ಹಾಕುತ್ತದೆ. ಕಾನೂನಾತ್ಮಕವಾದ ನಿಮ್ಮ ಹೋರಾಟಕ್ಕೆ ಎಷ್ಟೇ ಅಡ್ಡಿ ಆತಂಕಗಳು ಎದುರಾದರು ಅದನ್ನು ಕುಟ್ಟಿಪುಡಿಮಾಡುವ ಶಕ್ತಿ ಇದೆ. ಅದಕ್ಕೆ ಈಗ ನಿಮಗಾಗಿ ಸ್ವಯಂ ಪ್ರೇರಣೆಯಿಂದ ನಿವೃತ್ತ ಐಎಎಸ್‌, ಐಪಿಎಸ್‌ ಮತ್ತು ನುರಿತ ಕಾನೂನು ತಜ್ಞರಾದ ಹಿರಿಯ ವಕೀಲರು ನಿಮ್ಮ ಬೆಂಬಲಕ್ಕೆ ಇರುವುದಾಗಿ ಹೇಳುತ್ತಿದ್ದಾರೆ. ಅವರ ಸಹಕಾರ ಪಡೆದು ನಿಮ್ಮ ಗುರಿ ಮುಟ್ಟಲು ಮುಂದಾಗಿ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ