ಬೆಂಗಳೂರು: ಸಾರಿಗೆ ನೌಕರರು ಮತ್ತು ಅಧಿಕಾರಿಗಳ ಮಧ್ಯೆ ಭಾರಿ ಕಂದಕವನ್ನೇ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ಸಫಲವಾಗಿರುವ ಸಾರಿಗೆ ನೌಕರರ ಸಂಘಟನೆಯೊಂದರ ಮುಖ್ಯಸ್ಥ ಈಗಲೂ ತಮ್ಮದೇ ನಡೆಯಬೇಕು ಎಂಬ ಹುಂಬತನದಿಂದ ನೌಕರರನ್ನು ಬೀದಿಗೆ ತರುತ್ತಿದ್ದಾನೆ.
ಕಳೆದ 40 ವರ್ಷಗಳಿಂದಲೂ ನೌಕರರು ಮತ್ತು ಅಧಿಕಾರಿಗಳ ನಡುವೆ ಹೊಂದಾಣಿಕೆಯಾಗದಂತೆ ನೋಡಿಕೊಂಡು ಬಂದಿರುವ ಈತ ನೌಕರರನ್ನು ಅಧಿಕಾರಿಗಳ ವಿರುದ್ಧವೇ ತಿರುಗಿ ಬೀಳುವಂತೆ ಮಾಡಿಕೊಂಡು ತಮಗೆ ಇಷ್ಟ ಬಂದ ರೀತಿಯಲ್ಲಿ ಅಧಿಕಾರಿಗಳನ್ನು ಮತ್ತು ನೌಕರರನ್ನು ಕುಣಿಸುತ್ತಿದ್ದಾನೆ.
ಈತನ ಕುತಂತ್ರ ಬುದ್ಧಿ ಅರಿಯದ ಅಧಿಕಾರಿಗಳು ಮತ್ತು ನೌಕರರು ಒಬ್ಬರಿಗೊಬ್ಬರು ವೈರಿಗಳಂತೆ ಈಗಲೂ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಅಧಿಕಾರಿಗಳು ಮತ್ತು ನೌಕರರ ಮಧ್ಯೆ ಸಂಘರ್ಷ ನಡೆಯುತ್ತಲೇ ಇದೆ.
ಇದನ್ನು ಶಮನ ಮಾಡಬೇಕಾದ ಸಾರಿಗೆ ಸಚಿವರು ಇಲ್ಲ ಉನ್ನತ ಸ್ಥಾನದಲ್ಲಿರುವ ಅಂದರೆ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದಿರುವುದರಿಂದ ಅಧಿಕಾರಿಗಳು ಮತ್ತು ನೌಕರರ ನಡುವಿನ ಸಂಘರ್ಷವನ್ನೇ ದಾಳವಾಗಿ ಮಾಡಿಕೊಂಡು ನೂರಾರು ನೌಕರರ ಮನೆಯ ದೀಪವನ್ನೇ ನಂದಿಸಿದ್ದಾನೆ ಈತ.
ಇನ್ನು ಇದರ ನಡುವೆ ಎಚ್ಚೆತ್ತ ಕೆಲ ನೌಕರರು ಈತನ ನೀಚ ಬುದ್ದಿಯನ್ನು ಕಂಡು ದೂರ ಸರಿಯುತ್ತಿದ್ದಾರೆ. ಆದರೆ, ತನ್ನ ಕುತಂತ್ರವನ್ನು ತಿಳಿದುಕೊಂಡಿರುವ ನೌಕರರನ್ನು ಸದೆ ಬಡಿಯಬೇಕು ಎಂದು ತಮ್ಮ ಪರ ಇರುವ ನೌಕರರನ್ನೇ ತನ್ನಿಂದ ದೂರವಾಗುತ್ತಿರುವ ನೌಕರರ ವಿರುದ್ಧ ಬಿಟ್ಟು ಮತ್ತೆ ಗಲಭೆ ಎಬ್ಬಿಸಿ ಅಂದುಕೊಂಡಂತೆ ಬಣ್ಣಹಚ್ಚಿ ಸಂಸ್ಥೆಯಲ್ಲಿ ವಜಾ ಮಾಡಿಸುವಲ್ಲಿಯೂ ಸಫಲನಾಗುತ್ತಿದ್ದಾನೆ ಈ ಕಿರಾತಕ.
ಇದಾವುದನ್ನು ಅರಿಯದ ಕೆಲ ಅಮಾಯಕ ನೌಕರರು ಮತ್ತು ಅಧಿಕಾರಿಗಳು ಈಗಲೂ ಈತ ಸಾಚ ಎಂದು ತಿಳಿದು ಈತ ಹೇಳಿದಂತೆ ಕೇಳುತ್ತಿದ್ದಾರೆ. ಆದರೆ ಈ ಮುಗ್ದ ನೌಕರರು ಮತ್ತು ಅಧಿಕಾರಿಗಳಿಗೆ ಗೊತ್ತಿಲ್ಲ ಈತ ಎಂಥ ನೀಚ ಎಂಬುವುದು.
ನೂರಾರು ನೌಕರರ ಕುಟಂಬವನ್ನು ಹಾಳು ಮಾಡಿರುವ ಈ ಹೆಣ್ಣುಬಾಕನ ನಡೆಯ ಬಗ್ಗೆ ಕೆಲ ಅಧಿಕಾರಿಗಳು ಮತ್ತು ನೌಕರರಿಗೆ ಬಿಟ್ಟರೆ ಅನೇಕರಿಗೆ ಗೊತ್ತಿಲ್ಲ. ಈತನ ಹೆಣ್ಣುಬಾಕತನಕ್ಕೆ ಮತ್ತು ಕುತಂತ್ರ ಬುದ್ದಿಗೆ ಹತ್ತಾರು ಸಂಸಾರಗಳು ಹಾಳಾಗಿದ್ದು, ಅನೇಕ ಮಕ್ಕಳು ಬೀದಿಗೆ ಬಿದ್ದಿದ್ದಾರೆ ಎಂದರೆ ಅದನ್ನು ನಂಬಲು ಈಗಲೂ ಅನೇಕರು ಸಿದ್ಧರಿಲ್ಲ.. ಆದರೆ ಇದು ಸತ್ಯ.
ಕಚ್ಚೆ ಹರುಕನ ಕಾಮಕ್ಕೆ ಸಿಕ್ಕ ಅನೇಕ ಹಣ್ಣು ಮಕ್ಕಳು ಕೂಡ ಇಂದು ಸಂಸಾರವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ ಎಂಬ ಅಘಾತಕಾರಿ ವಿಷಯ ಎಷ್ಟೋ ಮಂದಿ ನೌಕರರಿಗೆ ಗೊತ್ತಿಲ್ಲ. ಈ ಬಗ್ಗೆ ಒಂದನ್ನು ಹೇಳಲೇಬೇಕು ಸಾರಿಗೆ ನಿಗಮದ ಒಬ್ಬ ಭದ್ರತಾ ಸಿಬ್ಬಂದಿಯ ಕುಟುಂಬವನ್ನೇ ತನ್ನ ಕಾಮದಾಹಕ್ಕೆ ನಾಶ ಮಾಡಿದ್ದಾನೆ ಈ ನೀಚ
ಇನ್ನು ತಾನೇ ಸಾರಿಗೆ ನಿಗಮಗಳಲ್ಲಿ ಸರ್ವಾಧಿಕಾರಿಯಂತೆ ಇರಬೇಕು ಎಂದು ತಮ್ಮ ನೀಚತನದ ವಿರುದ್ಧ ಧ್ವನಿ ಎತ್ತುವ ನೌಕರರನ್ನು ಅಧಿಕಾರಿಗಳ ಮೂಲಕ ವಜಾ, ಅಮಾನತು ಜತೆಗೆ ಪೊಲೀಸ್‌ಠಾಣೆಯಲ್ಲಿ ಕೇಸ್‌ಕೂಡ ಹಾಕಿಸಿ ಅವರನ್ನು ಮೂಲೆಗುಂಪು ಮಾಡುವ ಕುತಂತ್ರ ಬುದ್ಧಿಯನ್ನು ಈಗಲೂ ಮುಂದುವರಿಸಿದ್ದಾನೆ.
ಇನ್ನು ಕಳೆದ 2021ರ ಏಪ್ರಿಲ್‌ನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರ ಸಂಬಂಧ ಎಲ್ಲ ಕೇಸ್‌ಗಳನ್ನು ಕೆಎಸ್‌ಆರ್‌ಟಿಸಿ ವಾಪಸ್ ಪಡೆದುಕೊಂಡಿದೆ ಎಂದು ಅಂದುಕೊಳ್ಳುತ್ತಿದ್ದ ನೌಕರರಿಗೆ ಈಗ ಶಾಕ್‌ಕೊಡುತ್ತಿದ್ದಾನೆ ಈತ. ಮತ್ತೆ ನೌಕರರ ವಿರುದ್ಧದ ಕೇಸ್‌ಗಳನ್ನು ರೀ ಓಪನ್‌ಮಾಡಿಸಿ ವಜಾ ಮಾಡಿಸುವ ಕೃತ್ಯಕ್ಕೆ ಕೈ ಹಾಕಿದ್ದು, ಈತನ ನೀಚತನದಿಂದ ಈಗಾಗಲೇ ಅನೇಕ ಮಂದಿ ವಜಾಗೊಂಡಿದ್ದಾರೆ.
ನೌಕರರಿಗೆ ಸರಿಯಾದ ವೇತನ ಸಿಗಬಾರದು. ನೌಕರರು ಯಾವಾಗಲು ನನ್ನ ಕಾಲ್‌ಕೆಳಗೇ ಇರಬೇಕು. ನಾನು ಹೇಳಿದ್ದನ್ನು ಮಾತ್ರ ಕೇಳಬೇಕು ಕೇಳದವರು ಸಾರಿಗೆ ನಿಗಮಗಳಲ್ಲಿ ಇರಬಾರದು. ಜತೆಗೆ ನೌಕರರಿಗೆ ಕಾನೂನು ಅರಿವು ಮೂಡಿಸುವವರು ನನ್ನ ಶತ್ರುಗಳು ಎಂದು ತಮ್ಮ ಆಪ್ತರೊಂದಿಗೆ ಹೇಳಿಕೊಳ್ಳುವ ಈತ ಈಗಲೂ ಸಾರಿಗೆ ನಿಗಮಗಳಲ್ಲಿ ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾನೆ.
ಇನ್ನು ಯಾವನೋ ಒಬ್ಬ ನೌಕರರ ಮತ್ತು ಅವನ ಕುಟುಂಬ ಬೀದಿಗೆ ಬಿದ್ದರೆ ನಮಗೇನು ನಾವು ಮತ್ತು ನಮ್ಮ ಕುಟುಂಬ ಚನ್ನಾಗಿದ್ದರೆ ಆಯಿತು ಎಂದುಕೊಳ್ಳುವ ಅಧಿಕಾರಿಗಳು ಈತ ಹೇಳಿದಂತೆ ಕೇಳಿ ನೌಕರರ ವಿರುದ್ಧ ವಜಾ ಮಾಡುವುದಕ್ಕೆ ಏನು ದಾಖಲೆಗಳು ಬೇಕೋ ಅದೇ ರೀತಿ ಸೃಷ್ಟಿಸಿ ಕಾನೂನಿನೊಳಗೆ ಕಟ್ಟಿಹಾಕುವ ಮೂಲಕ ವಜಾ ಮಾಡುತ್ತಿದ್ದಾರೆ.
ಆದರೆ, ಸತ್ಯ ಯಾವತ್ತೀಗೂ ಸೆರಗಲ್ಲಿ ಮುಚ್ಚಿಟ್ಟಿರುವ ಕೆಂಡದಂತೆ.. ಅದು ತನ್ನನ್ನು ಸುಟ್ಟೆ ಸುಡುತ್ತದೆ ಎಂಬುದರ ಬಗ್ಗೆ ತಲೆಕಡಿಸಿಕೊಳ್ಳ ಈ ನೀಚನಿಗೆ ಮುಂದೆ ಅಧಿಕಾರಿಗಳು ಮತ್ತು ನೌಕರರೇ ಪಾಠ ಕಲಿಸುತ್ತಾರೆ. ಆ ಕಾಲವೂ ದೂರವಿಲ್ಲ ಎನ್ನುತ್ತಿದ್ದಾರೆ ಈತನ ಕುತಂತ್ರಕ್ಕೆ ಸಿಕ್ಕಿ ವಜಾಗೊಂಡು ನೋವಿನಲ್ಲಿರುವ ನೌಕರರು.