ಸಾಲಿಗ್ರಾಮ: ಮಹಿಳೆಯರು ಒಗ್ಗಟ್ಟಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಾ.ರಾ. ಮಹೇಶ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಶಾಸಕ ಸಾ.ರಾ.ಮಹೇಶ್ ಪತ್ನಿ ಅನಿತಾ ಮಹೇಶ್ ಮನವಿ ಮಾದ್ದಾರೆ.
ಕೆ,ಆರ್.ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ತಮ್ಮ ಪತಿಯ ಪರವಾಗಿ ಮತಯಾಚನೆ ನಡೆಸಿ ಮಾತನಾಡಿದರು.
ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಕಗ್ಗರೆಯಲ್ಲಿ ಸಾರಾ ನಿಧಿ ಗಾರ್ಮೆಂಟ್ಸ್ ಆರಂಭಿಸಲಾಗಿದ್ದು ಈಗ 1000 ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ. ಆದರೆ ನಮ್ಮ ಉದ್ದೇಶ ಸುಮಾರು 5000 ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸಿ ಕೊಡುವುದಾಗಿದೆ ಎಂದರು.
ಈ ಗಾರ್ಮೆಂಟ್ಸ್‌ಗೆ ತಾಲೂಕಿನ 80,000 ಮಹಿಳೆಯರನ್ನು ಶೇರುದಾರರನ್ನಾಗಿ ಮಾಡಿದ್ದು ಅಷ್ಟು ಮಹಿಳೆಯರ ಹೆಸರಿನಲ್ಲಿ ತಲಾ ಒಂದು ಸಾವಿರ ರೂ. ಶೇರು ಹಣವನ್ನು ಸಾರಾ ಮಹೇಶ್ ಅವರು ನೀಡಿದ್ದಾರೆ. ಆ ಮೂಲಕ ಮುಂದಿನ ದಿನಗಳಲ್ಲಿ ಗಾರ್ಮೆಂಟ್ಸ್ ನಿಂದ ಬರುವ ಆದಾಯವನ್ನು ಕೂಡ ಶೇರುದಾರ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಹಾಕುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಸಾ.ರಾ.ಮಹೇಶ್ ಅವರು ಕ್ಷೇತ್ರದಲ್ಲಿ ಯಾವುದೇ ರೀತಿಯ ಪಕ್ಷ ಹಾಗೂ ಜಾತಿ ರಾಜಕೀಯವನ್ನು ಮಾಡದೆ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಮಹಿಳೆಯರು ನೀಡುವ ಮೂಲಕ ಭಾರಿ ಅಂತರದ ಗೆಲುವನ್ನು ತಂದುಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಮದ ವಿವಿಧ ಭಾಗಗಳಲ್ಲಿ ಅನಿತಾ ಮಹೇಶ್ ಅವರಿಗೆ ಬಾಗಿನ ನೀಡಿ ಅಭಿನಂದಿಸಿದರು. ಜಿ.ಪಂ. ಮಾಜಿ ಅಧ್ಯಕ್ಷ ಸಾ.ರಾ. ನಂದೀಶ್ ಅವರ ಪತ್ನಿ ಸುನಿತಾ ನಂದೀಶ್, ಮಮತಾ, ಶೃತಿ, ರುಕ್ಮಿಣಿ, ರೇಣುಕಾ, ಗ್ರಾ.ಪಂ. ಅಧ್ಯಕ್ಷೆ ನಂದಿನಿ ರಮೇಶ್, ಉಪಾಧ್ಯಕ್ಷೆ ಶೈಲಜಾ ಯೋಗೇಶ್, ಸದಸ್ಯರುಗಳಾದ ಪ್ರದೀಪ್.
ಲತಾ ಲೋಕೇಶ್, ಚನ್ನಂಗೆರೆ ಗ್ರಾ.ಪಂ. ಅಧ್ಯಕ್ಷೆ ಸವಿತಾ ಕುಚೇಲ, ಮುಖಂಡರಾದ ಎಚ್.ಟಿ.ಅನಂತ, ದೇವೇಗೌಡ, ರಾಮೇಗೌಡ, ಎಚ್.ಟಿ.ಶ್ರೀನಿವಾಸ್, ಎಚ್.ಎನ್.ರಮೇಶ್, ಬಂಡಹಳ್ಳಿ ಕುಚೇಲ, ಕೃಷ್ಣ, ಗೋಪಿ, ಸುರೇಶ್, ಕಿಟ್ಟಪ್ಪ,
ಮಹಿಳೆಯರು, ಯುವಕರು ಸೇರಿದಂತೆ ಹಲವರು ಇದ್ದರು.