NEWSಬೆಂಗಳೂರುರಾಜಕೀಯ

ಸಂಸದ ಪ್ರತಾಪ್‌ ಸಿಂಹರ ವೀರಾವೇಶದ ಭಾಷಣದಿಂದ ಚುನಾವಣೆ ಗೆಲ್ಲಲು ಆಗುವುದಿಲ್ಲ : ತೋಟದಪ್ಪ ಬಸವರಾಜು

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಸಂಸದ ಪ್ರತಾಪ್‌ ಸಿಂಹ ಅವರ ವೀರಾವೇಶದ ಭಾಷಣದಿಂದ ಚುನಾವಣೆ ಗೆಲ್ಲಲು ಆಗುವುದಿಲ್ಲ ಎಂದು ನಿಕಟ ಪೂರ್ವ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಹೇಳಿದ್ದಾರೆ.

ಸಿದ್ದರಾಮಯ್ಯನ ಹುಂಡಿಯಲ್ಲಿ ನಡೆದ ಘಟನೆ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಬಾರಿ ನಾನು ಪ್ರತಾಪ್ ಸಿಂಹ ಅವರನ್ನು ಚುನಾವಣೆಪ್ರಚಾರಕ್ಕೆ ಕರೆದಾಗ ಘಟಸರ್ಪ ಕಂಡಂತೆ ಬೆಚ್ಚಿ ಬಿದ್ದಿದ್ದರು. ಆದರೆ, ಈ ಬಾರಿ ರಣೋತ್ಸಾಹದಿಂದ ವರುಣಾದಲ್ಲಿ ಅಬ್ಬರಿಸುತ್ತಿದ್ದಾರೆ ಎಂದು ವ್ಯಂಗ್ರಯವಾಡಿದ್ದಾರೆ.

ಕಳೆದ ಬಾರಿ ಭಾರತೀಯ ಜನತಾ ಪಾರ್ಟಿ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ತತ್ವ ಸಿದ್ಧಾಂತಕ್ಕಾಗಿ ಚುನಾವಣೆ ಎದುರಿಸಿತ್ತು. ಈ ಬಾರಿ ನಾವೇನು ಕಮ್ಮಿ ಇಲ್ಲ ಎಂಬಂತೆ ಕಾಂಗ್ರೆಸ್‌ನ ಕುತಂತ್ರಗಳಿಗೆ ತಕ್ಕಂತೆ, ಎಲ್ಲ ರೀತಿಯಲ್ಲೂ ತಯಾರಾಗಿ ಚುನಾವಣೆ ಎದುರಿಸುತ್ತಿದೆ ಎಂದು ಕಾಲೆಳೆದಿದ್ದಾರೆ.

ಇನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು, ಶ್ಯಾಮ್ ಪ್ರಕಾಶ್ ಮುಖರ್ಜಿ ಇವರ ತತ್ವ ಆದರ್ಶಗಳು ಕಣ್ಮರೆಯಾಗುತ್ತಿವೆ ಹಣ ಬಲ ಜಾತಿ ಬಲ ತೋಳ್ಬಲದ ಮೂಲಕ ಎಲ್ಲರೂ ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದಾರೆ. ಇದು ಸಂವಿಧಾನ ವಿರೋಧಿಯಾಗಿದೆ. ಇದರಿಂದಾಗಿ ನಮ್ಮ ಕಾರ್ಯಕರ್ತ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಹಣದ ಮೂಲಕ ಜಾತಿ ಜಾತಿಗಳ ನಡುವೆ ಇರುವ ಸಾಮರಸ್ಯವನ್ನು ಕದಡಿ ಚುನಾವಣೆ ಗೆಲ್ಲಲು ಹೊರಟಿರುವುದು ಅಪಾಯಕಾರಿ ಬೆಳವಣಿಗೆ. ನಾವೆಲ್ಲ ಒಂದು ನಾವೆಲ್ಲ ಹಿಂದೂ ಎನ್ನುವುದು ಒಂದು ಕಡೆ, ನಾವೆಲ್ಲ ಜಾತ್ಯತೀತರು ಎನ್ನುವುದು ಇನ್ನೊಂದು ಕಡೆ. ಈ ಸಿದ್ಧಾಂತವನ್ನು ಯಾರು ಪಾಲಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸೋಮಣ್ಣ ಹಾಗೂ ಸಿದ್ದರಾಮಯ್ಯನವರು ಚಿಂತಿಸಿ. ನಿಮ್ಮ ಹಿಂದೆ ಇರುವ ಗಂಜಿ ಗಿರಾಕಿಗಳು ಜೈಕಾರ ಹಾಕುವವರು, ಹಣಕ್ಕಾಗಿ ಜಾತಿಗಾಗಿ ನಿಮ್ಮ ಹಿಂದೆ ಇರುವವರನ್ನು ದೂರವಿಟ್ಟು ಚುನಾವಣೆ ಎದುರಿಸಿ. ಹಿಂದೆ ದಿವಂಗತ ರಾಜಶೇಖರ್ ಮೂರ್ತಿಯವರು ಹಾಗೂ ಶ್ರೀನಿವಾಸ ಪ್ರಸಾದ್ ಅವರ ನಡುವೆ ನಡೆದಿದ್ದ ಜಿದ್ದಿನ ರಾಜಕಾರಣ ಅಮಾಯಕರನ್ನು ಬಲಿ ಪಡೆದಿದೆ. ಆ ರೀತಿ ವರುಣಾದಲ್ಲೂ ಆಗುವುದು ಬೇಡ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿರುವ ಮಹಾಮೇಧಾವಿಗಳು ಇವರನ್ನು ಅವರದೇ ಲೋಕಸಭಾ ಕ್ಷೇತ್ರದ ಚಾಮುಂಡೇಶ್ವರಿ, ಹುಣಸೂರು, ನರಸಿಂಹರಾಜ ಅಥವಾ ಜಿಲ್ಲೆಯ ಕೆ.ಆರ್. ನಗರ ಇವುಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಜವಾಬ್ದಾರಿ ನೀಡಿ ಅಥವಾ ಅವರೇ ತೆಗೆದುಕೊಳ್ಳಲಿ ಎಂದು ತೋಟದಪ್ಪ ಬಸವರಾಜು ಮನವಿ ಮಾಡಿದ್ದಾರೆ.

ವಿ.ಸೋಮಣ್ಣನವರು ಹಾಗೂ ಸಿದ್ದರಾಮಯ್ಯನವರು ನುರಿತ ರಾಜಕಾರಣಿ ಮುತ್ಸದ್ದಿಗಳಾಗಿದ್ದೀರಿ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು?