NEWSನಮ್ಮಜಿಲ್ಲೆನಮ್ಮರಾಜ್ಯ

ಹುಚ್ಚರ ಸಂತೆಯಂತಾಗುತ್ತಿವೆ ಸಾರಿಗೆ ನಿಗಮಗಳು : ತಲೆಕೆಟ್ಟ ಅಧಿಕಾರಿಗಳ ಆದೇಶಕ್ಕೆ ನೌಕರರು ಹೈರಾಣು

ವಿಜಯಪಥ ಸಮಗ್ರ ಸುದ್ದಿ
  • ಅಧಿಕಾರಿಗಳ ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದ ಸಚಿವ ಶ್ರೀರಾಮುಲು

  • ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಂಘಟನೆಗಳ ಒತ್ತಾಯ

  • ಎಂಡಿ ಕುರ್ಚಿಯಲ್ಲಿ ಕುಳಿತ ಜವಾಬ್ದಾರಿ ಇಲ್ಲದ ಐಎಎಸ್‌ ಅಧಿಕಾರಿಗಳು

ಮಂಗಳೂರು: ಸಾರಿಗೆ ನಿಗಮಗಳಲ್ಲಿ ಯಾವುದೂ ಸರಿಯಿಲ್ಲ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ನಿಗಮದಲ್ಲಿರುವ ಕೆಲ ತಲೆಕೆಟ್ಟ ಅಧಿಕಾರಿಗಳು. ನಾವು ಹೇಳಿದಂತೆ ಮಾಡಬೇಕು. ಇಲ್ಲಿ ನಾವು ಮಾಡುವುದೆಲ್ಲವೂ ಕಾನೂನು ಅದನ್ನು ನೀವು ಪಾಲಿಸಬೇಕಷ್ಟೆ ಎಂದು ಹುಚ್ಚರಂತೆ ತಮಗಿಷ್ಟ ಬಂದ ಆದೇಶವನ್ನು ಅಸಂವಿಧಾನಿಕವಾಗಿ ಮಾಡುತ್ತಲೇ ಇರುತ್ತಾರೆ.

ಈ ಅಧಿಕಾರಿಗಳ ಈ ಹುಚ್ಚಾಟ ಆದೇಶದಿಂದ ನಿತ್ಯ ಒಂದಲ್ಲೊಂದು ಸಮಸ್ಯೆಗೆ ನೌಕರರು ಸಿಲುಕಲುತ್ತಿದ್ದು, ಅವರು ಸರಿಯಾಗಿ ತಮ್ಮ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ಹೌದು! ಇಲ್ಲಿ ಸಂವಿಧಾನಕ ಕಾನೂನು ಎಂಬುವುದೆ ಇಲ್ಲ. ನಿಗಮದಲ್ಲಿ ಇರುವುದು ಸರ್ವಾಧಿಕಾರಿ, ಹಿಟ್ಲರ್‌ ಕಾನೂನು.

ಸಿಗಮಗಳ ಘಟಕ ವ್ಯವಸ್ಥಾಪಕರಿಗೆ ಮೇಲಿನ ಅಧಿಕಾರಿಗಳು ಕೆಲಸಕೊಡದೆ ಘಟಕಗಳಲ್ಲಿ ಸುಮ್ಮನೆ ಕೂರಿಸಿರುವಂತೆ ಕಾಣಿಸುತ್ತಿದೆ, ಕೆಲ ಡಿಎಂಗಳು ಹೊರಡಿಸುತ್ತಿರುವ ಆದೇಶ. ಇವರ ಈ ಆದೇಶದಿಂದ ನೌಕರರು ಹೈರಾಣಾಗುತ್ತಿದೆ.

ಹುಚ್ಚರ ರೀತಿ ಆದೇಶ ಹೊರಡಿಸಿದ ಮಂಗಳೂರು ಕೆಎಸ್‌ಆರ್‌ಟಿಸಿ ಘಟಕ -1ರ ಡಿಎಂ: ಮಂಗಳೂರು ಕರೆಸ್‌ಆರ್‌ಟಿಸಿ ಘಟಕ -1ರ ಎಲ್ಲಾ ನಿರ್ವಾಹಕ ಸಿಬ್ಬಂದಿಗಳು ವಾಹನಗಳ ಅನುಸೂಚಿ ಕಾರ್ಯಾಚರಣೆ ಮುಗಿಸಿ ಘಟಕಕ್ಕೆ ಬಂದಾಗ ಭದ್ರತಾ ಶಾಖೆ ಬಳಿ ಇರಿಸಲಾಗಿರುವ ಕಸದ ಡ್ರಮ್‌ನಲ್ಲಿ ವಾಹನದ ಲಗೇಜ್‌ಕ್ಯಾರಿಯರ್‌ ಹಾಗೂ ಸೀಟ್‌ಗಳಲ್ಲಿ ಪ್ರಯಾಣಿಕರು ಎಸೆದು ಹೋಗಿರುವ ಪೇಪರ್‌, ಪ್ಲಾಸ್ಟಿಕ್‌ಬಾಟಲ್‌ಗಳನ್ನು ಹಾಕಬೇಕು. ಇದನ್ನು ಉಲ್ಲಂಘಿಸಿದರೆ ಆಪಾದ ಪತ್ರ ಜಾರಿ ಮಾಡಲಾಗುವುದು ಎಂದು ಮಂಗಳೂರು ಕೆಎಸ್‌ಆರ್‌ಟಿಸಿ ಘಟಕ -1ರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಪುತ್ತೂರು ವಿಭಾಗದ ಬಿ.ಸಿ.ರೋಡ್‌ಘಟಕದ ವ್ಯವಸ್ಥಾಪಕರು ಇದೇ ರೀತಿ ಆದೇಶ ಹೊರಡಿಸಿದ್ದರು. ಅವರ ವಿರುದ್ಧ ಪ್ರಯಾಣಿಕರೆ ತಿರುಗಿಬಿದ್ದು ಛೀಮಾರಿ ಹಾಕಿದ್ದರು. ಅದರ ನಡುವೆಯೇ ಈಗ ಮಂಗಳೂರು ಕೆಎಸ್‌ಆರ್‌ಟಿಸಿ ಘಟಕ -1ರ ವ್ಯವಸ್ಥಾಪಕ ಈ ಆದೇಶ ಹೊರಡಿಸಿದ್ದು, ನೌಕರರ ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದಿಷ್ಟೇ ಅಲ್ಲ ನಿರ್ವಾಹಕರು ಈ ಕೆಲಸ ಮಾಡದಿದ್ದಲ್ಲಿ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂಬ ಎಚ್ಚರಿಕೆ ಒಳಗೊಂಡ ಆದೇಶವನ್ನು ಹೊರಡಿಸಿದ್ದಾರೆ.

ಆದರೆ, ಘಟಕ ವ್ಯಸ್ಥಾಪಕರ ಈ ಆದೇಶಕ್ಕೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದು, ನಮಗೆ ಕಸ ಹೊಡೆಯುವ ಕೆಲಸವನ್ನು ಕೊಡಲು ಇವರಾರು. ನಮ್ಮ ಕೆಲಸವನ್ನು ನಾವು ನೆಮ್ಮದಿಯಿಂದ ಮಾಡಲು ಬಿಡುತ್ತಿಲ್ಲವಲ್ಲ. ನಾವೆ ಎಲ್ಲ ಕೆಲಸ ಮಾಡಿದೆ ಸ್ವಚ್ಛಗೊಳಿಸುವುದಕ್ಕೇ ನೇಮಿಸಿಕೊಂಡಿರುವ ಕಾರ್ಮಿಕರನ್ನು ಇವರು ಏನು ಮಾಡುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.

ಒಟ್ಟಾರೆ ಘಟಕ ವ್ಯವಸ್ಥಾಪಕರು ನಿರ್ವಾಹಕರಿಗೆ ಅವರದಲ್ಲದ ಕೆಲಸವನ್ನು ಹಚ್ಚುತ್ತಿರುವುದಕ್ಕೆ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಮೌಖಿಕ ಆದೇಶವೇ ಕಾರಣ ಎಂದು ನೌಕರರ ಆರೋಪಿಸಿದ್ದಾರೆ.

ಈ ರೀತಿ ಚಾಲನಾ ಸಿಬ್ಬಂದಿಯನ್ನು ಹಿಂಸಿಸುತ್ತಿದ್ದರೂ ಇದಕ್ಕು ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ನಡೆದುಕೊಳ್ಳುತ್ತಿರುವುದು ನೌಕರರಲ್ಲಿ ಅಸಮಾಧಾನ ತರಿಸುತ್ತಿದೆ. ಒಬ್ಬ ಜವಾಬ್ದಾರಿಯುತ್‌ ಎಂಡಿ ಸ್ಥಾನದಲ್ಲಿರುವ ಐಎಎಸ್‌ ಅಧಿಕಾರಿಯೊಬ್ಬರು ಇಂಥ ನಡೆಗೆ ಕಡಿವಾಣ ಹಾಕುವ ಬದಲಿಗೆ ಅವರನ್ನೇ ಪ್ರೋತ್ಸಾಹಿಸುವ ರೀತಿ ನಡೆಉಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.

ಇನ್ನು ಈ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಲು ಮುಂದಾಗುತ್ತಿಲ್ಲ. ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾರದಷ್ಟು ಆಗದ ಇವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ ಎಂದು ನೌಕರರ ಸಂಘಟನೆಗಳ ಪದಾಧಿಕಾರಿಗಳು ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಮೊದಲು ಪುತ್ತೂರು ಘಟಕದಲ್ಲಿ ಆರಂಭವಾದ ಕಿರುಕುಳ ಈಗ ಮಂಗಳೂರು ಘಟಕವನ್ನು ತಲುಪಿದ್ದು, ಮುಂದೆ ಇದು ರಾಜ್ಯಾದ್ಯಂತ ಇರುವ ಎಲ್ಲ ಘಟಕಗಳಿಗು ವಿಸ್ತರಿಸುವ ಮುನ್ಸೂಚನೆಯನ್ನು ಸ್ವತಃ ಎಂಡಿ ಅವರೆ ಕೊಡುತ್ತಿರುವಂತೆ ಕಾಣುತ್ತಿದೆ.

ಇನ್ನಾದರೂ ಇಂತಹ ಹುಚ್ಚಾಟದ ಆದೇಶಗಳಿಗೆ ಕಡಿವಾಣಹಾಕಿ ನೌಕರರು ಅವರ ಕೆಲಸವನ್ನು ಅವರು ಬಿಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ