NEWSನಮ್ಮರಾಜ್ಯಬೆಂಗಳೂರು

NWKRTC : ಸೀನಿಯಾರಿಟಿ ಗಾಳಿಗೆ ತೂರಿ ಹಣಕೊಟ್ಟವರಿಗೆ ಡ್ಯೂಟಿ ಕೊಡುವ ಹುಬ್ಬಳ್ಳಿ ಗ್ರಾಮಾಂತರ ಘಟಕ ಒಂದರ ಅಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಘಟಕ ಒಂದರಲ್ಲಿ ಸೀನಿಯಾರಿಟಿಯನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದವರಿಗೆ ಡ್ಯೂಟಿ ಕೊಡುವ ಮೂಲಕ ಭಾರಿ ಭ್ರಷ್ಟಾಚಾರದಲ್ಲಿ ಡಿಪೋ ಮಟ್ಟದ ಅಧಿಕಾರಿಗಳು ತೊಡಗಿದ್ದಾರೆ.

ಹೌದು! NWKRTC ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಘಟಕ-1ರಲ್ಲಿ ATS ಮೇಡಂ ಮುಲ್ಲಾ, TI ಹಂಚಾಟೆ, TI ಸವಿತಾ ಹಾಗೂ TCಗಳಾದ ಪಾಟೀಲ್, ನಂದೇರ ಇವರೆಲ್ಲರೂ ಸೇರಿ ಮೊನ್ನೆ (01.03.2023) ಸೀನಿಯಾರಿಟಿ ಕೌನ್ಸಿಲಿಂಗ್‌ ನಡೆದಿತ್ತು. ಅದರಂತೆ 01.04.2023 ರಿಂದ ಸೀನಿಯಾರಿಟಿ ಪ್ರಕಾರ ಡ್ಯೂಟಿ ಕೊಡುವುದು ಪ್ರಾರಂಭವಾಗಿದೆ.

ಆದರೆ, ಈ ಅಧಿಕಾರಿಗಳು ಸೇವಾ ಹಿರಿತನ (Seniority)ದಂತೆ ಡ್ಯೂಟಿ ಕೊಡುವ ಬದಲಿಗೆ ತಮಗೆ ಯಾರು ಲಂಚಕೊಡುತ್ತಾರೋ ಅವರಿಗೇ ಕಾನೂನನ್ನು ಗಾಳಿಗೆ ತೂರಿ, ಬೇಕಾದ ಅನುಸೂಚಿ ಮಾರ್ಗ ಕೊಟ್ಟಿದ್ದಾರೆ ಎಂದು ವಂಚಿತ ನೌಕರರು ಆರೋಪಿಸಿದ್ದಾರೆ.

ಅಲ್ಲದೆ ಜೂನಿಯರ್‌ಗಳಿಗೆ ಡ್ಯೂಟಿಕೊಟ್ಟಿದ್ದು ಭಾರಿ ಹಗರಣ ನಡೆಸಿದ್ದಾರೆ. ಅದಕ್ಕೆ ಸಾಕಷ್ಟು ದಾಖಲೆಗಳನ್ನು ನೌಕರರು ಕಲೆ ಹಾಕಿದ್ದಾರೆ. ಆ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದು ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಘಟಕದಲ್ಲಿ TI ಆಗಿರುವ ಹಂಚಾಟೆ ಎಂಬುವರು ಸುಮಾರು 2016ರಿಂದ ಘಟಕ ಒಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ಡಿಸೆಂಬರ್‌ 2022ರ ಹಿಂದೆ ನವಲಗುಂದ ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಜನವರಿ 2023ರಂದು ಮತ್ತೇ ಗ್ರಾಮಾಂತರ ಘಟಕಕ್ಕೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದರು. ಸದ್ಯ 05.05.2023ರಂದು ಹುಬ್ಬಳ್ಳಿ ಗೋಕುಲ್ ಬಸ್‌ ಸ್ಟ್ಯಾಂಡ್ ಇಂಚಾರ್ಜ್‌ ಆಗಿ ವರ್ಗಾವಣೆಗೊಂಡಿದ್ದಾರೆ. ಆದರೆ ಮತ್ತೆ ಯಾವಾಗ ಇಲ್ಲಿಗೆ ಬರುತ್ತಾರೋ ಎಂಬ ಭಯ ನೌಕರರನ್ನು ಕಾಡುತ್ತಿದೆ. ಕಾರಣ ಮೇಲಧಿಕಾರಿಗಳ ಕುಮ್ಮಕ್ಕಿನಿಂದ ಮತ್ತೆ ಬಂದರೆ ನೌಕರರಿಗೆ ತಲೆ ನೋವು ತಪ್ಪಿದ್ದಲ್ಲ ಎಂದು ಹೇಳುತ್ತಿದ್ದಾರೆ.

ಟಿಸಿ ಪಾಟೀಲ್ ಎಂಬುವರು 2018 ರಿಂದ ಗ್ರಾಮಾಂತರ ಘಟಕ ಒಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಸ್ಥಳೀಯರಾಗಿರುವುದರಿಂದ ನೌಕರರನ್ನು ಬೆದರಿಸುವ ಕೆಲಸದಲ್ಲಿ ಸದಾ ಮುಂದಿರುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.

ಮತ್ತೊಬ್ಬ ಟಿಸಿ ನಂದೆರ ಮೂಲತಃ 1ನೆಯ ಘಟಕದಲ್ಲಿ ನಿರ್ವಾಹಕರಾಗಿದ್ದು ಈಗ ಬಡ್ತಿ ಪಡೆದು (2022ರಲ್ಲಿ) ಇದೆ ಘಟಕದಲ್ಲಿ ಟಿಸಿ ಆಗಿದ್ದಾರೆ. ಆದರೆ ನಿರ್ವಾಹಕರಾಗಿ ಸೇವೆ ಸಲ್ಲಿಸುವಾಗ ಅನುಭವಿಸಿದ ಸಮಸ್ಯೆಗಳನ್ನು ಮರೆತಿರುವ ಇವರು ಸದ್ಯ ನೌಕರರನ್ನು ಕಾಡುವ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದು ತಮ್ಮ ಮೇಲಿನ ಅಧಿಕಾರಿಗಳ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.

ಇನ್ನು ಸೇವಾ ಹಿರಿತನವನ್ನು ಗಾಳಿಗ ತೂರಿ ತಮಗೆ ಇಷ್ಟ ಬಂದವರಿಗೆ ಅಂದರೆ ಜೂನಿಯರ್‌ ನೌಕರರಿಗೆ ಉದಾ: ಬ್ಯಾಡ್ಜ್ ನಂಬರ್ 7342, 7519, 7340 ನಿರ್ವಾಹಕರು (2014ರಲ್ಲಿ ಸೇವೆಗೆ ಸೇರಿದ್ದಾರೆ) ಇವರಿಗೆ ಸೀನಿಯಾರಿಟಿ ಆಧಾರದ ಮೇರೆಗೆ ನೈಟ್ ಸರ್ವೀಸ್, 3 ದಿನದ ನೌಕರಿ ಹಾಗೂ ಸಿಂಗಲ್ ವಿಜಯಪುರ ಹೀಗೆ ಡ್ಯೂಟಿ ಕೊಟ್ಟಿದ್ದಾರೆ. ಇದರಿಂದ ಸೇವಾ ಹಿರಿತನದ ನೌಕರರಿಗೆ ಸರಿಯಾಗಿ ಡ್ಯೂಟಿ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಡ್ಯೂಟಿ ಚಾರ್ಟ್ ಹಚ್ಚೋದು ಒಂದು ಕೊಡೋದು ಮತ್ತೊಂದು: ಇನ್ನೊಂದು ಪ್ರಮುಖವಾದ ವಿಷಯ ಏನೆಂದರೆ, ಡ್ಯೂಟಿ ಚಾರ್ಟ್ ಹಚ್ಚೋದು ಒಂದು ಡ್ಯೂಟಿಗೆ ಕಳುಹಿಸುವುದು ಮತ್ತೊಂದು. ಹೀಗಾಗಿ ಸೇವಾ ಹಿರಿತನದಲ್ಲಿ ಕೆಲವರಿಗೆ ಈವರೆಗೂ ಅವರಿಗೆ ಸರಿಯಾಗಿ ಸೀನಿಯಾರಿಟಿ ಪ್ರಕಾರ ಕರ್ತವ್ಯ ನಿರ್ವಹಿಸಲು ಕೊಡದೇ ಕಾಡುತ್ತಿದ್ದಾರೆ. ಕಾರಣ ಕೆಲವರಿಗೆ ಅಂದರೆ ಹಣ ಕೊಟ್ಟವರಿಗೆ ಕರ್ತವ್ಯ ಸರಿಹೊಂದಿಸುವ ಕೆಲಸ (Adjust) ಮಾಡಬೇಕು. ಇಲ್ಲದಿದ್ದರೆ ಲಂಚಕೊಟ್ಟವರು ತಿರುಗಿ ಬೀಳುತ್ತಾರೆ. ಹೀಗಾಗಿ ಸೇವಾ ಹಿರಿತನದ ನೌಕರರನ್ನು ಕಡೆಗಣಿಸುವ ಕೆಲಸವನ್ನು ಇವರು ಮಾಡುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ.

ಇನ್ನು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಯಾರು ಯಾವಾಗ ಕೆಲಸಕ್ಕೆ ಸೇರಿದ್ದಾರೆ. ಅವರಿಗೆ ಕೊಟ್ಟಿರುವ ಡ್ಯೂಟಿ ಯಾವುದು ಅವರು ಮಾಡುತ್ತಿರುವ ಡ್ಯೂಟಿ ಯಾವುದು ಎಂಬುದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿದರೆ ಈ ಅಧಿಕಾರಿಗಳ ಕರಾಳ ಮುಖ ಬಯಲಿಗೆ ಬರಲಿದೆ ಎಂದು ನೌಕರರು ಹೇಳುತ್ತಿದ್ದಾರೆ.

ಹೀಗೆ ಗ್ರಾಮಾಂತರ ಘಟಕ ಒಂದರಲ್ಲಿ ಬೇಕಾ ಬಿಟ್ಟಯಾಗಿ ಕರ್ತವ್ಯ ನೀಡುತ್ತಿದ್ದು, ಕೆಲವರಿಗೆ ಮಾನಸಿಕವಾಗಿ ತೊಂದರೆ ಆಗಿದೆ. ಕೆಲವು ಅನುಸೂಚಿ ಮಾರ್ಗಗಳನ್ನು ಬಚ್ಚಿಟ್ಟು ಕೆಲವರಿಗೆ ನೌಕರಿ ಫಿಕ್ಸ್ ಮಾಡಿದ್ದಾರೆ. ಹೀಗಾಗಿ ಸೇವಾ ಹಿರಿತನ ಮತ್ತು ಪ್ರಾಮಾಣಿಕವಾಗಿ ಡ್ಯೂಟಿ ಮಾಡುತ್ತಿರುವ ನೌಕರರಿಗೆ ಅನ್ಯಾಯವಾಗುತ್ತಿದೆ. ಅದನ್ನು ಕೇಳುವ ಯಾವ ಸಂಘಟನೆಗಳು ಇಲ್ಲವಲ್ಲ ಎಂಬ ಕೊರಗು ಒಂದು ಕಡೆಯಾದರೆ, ಇದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎಂಬುವುದು ಮತ್ತೊಂದುಕಡೆ ಕಾಡುತ್ತಿದೆ.

ಇನ್ನು ಸಂಘಟನೆಗಳ ಪದಾಧಿಕಾರಿಗಳು ಕೇಳಲು ಹೋದರೆ ಇನ್ನಿಲ್ಲದ ಆರೋಪಗಳನ್ನು ಮಾಡಿ ಆ ಸಂಘಟನೆಯ ನೌಕರರನ್ನು ಅಮಾನತು, ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪವು ನೌಕರರ ವಲಯದಿಂದ ಕೇಳಿ ಬರುತ್ತಿದೆ. ಒಟ್ಟಾರೆ ಇದಕ್ಕೆಲ್ಲ ಮೇಲಧಿಕಾರಿಗಳು ಕಡಿವಾಣಹಾಕಿ ಸೇವಾ ಹಿರಿತನ ಮೇರೆಗೆ ಪ್ರತಿಯೊಬ್ಬರಿಗೂ ಡ್ಯೂಟಿ ಕೊಡುವ ವ್ಯವಸ್ಥೆ ಮಾಡುವರೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

error: Content is protected !!
LATEST
ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು?