ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ 15 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489ಕ್ಕೆ ಏರಿಕೆ ಆಗಿದೆ.
ರಾಜ್ಯದ ರಾಜಧಾನಿಯಲ್ಲಿ ಇಂದು ಮಧ್ಯಾಹ್ನದ ವರೆಗೆ 6 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 126ಕ್ಕೆ ಏರಿಕೆ ಆಗಿದೆ.
ಬೆಂಗಳೂರಿನ 6, ಬೆಳಗಾವಿಯಲ್ಲಿ 6, ಮಂಡ್ಯ, ಬಂಟ್ವಾಳ ಮತ್ತು ಚಿಕ್ಕಬಳ್ಳಾಪುರದಲ್ಲೂ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.
ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಇಂದು ಮಧ್ಯಾಹ್ನದ ವರೆಗೆ ತಲಾ ಆರು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಬೆಂಗಳೂರಿನ ಐವರು ಪುರುಷರು ಮತ್ತು ಓರ್ವ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇನ್ನು ಬೆಳಗಾವಿಯ ಹಿರೇಬಾಗೇವಾಡಿಯ ಇಬ್ಬರು ಪುರುಷರು ಮತ್ತು ನಾಲ್ವರು ಮಹಿಳೆಯರಿಗೆ ಸೋಂಕು ತಗುಳಿದೆ.
ಇನ್ನು ಮಂಡ್ಯ ಮತ್ತು ಮತ್ತು ಚಿಕ್ಕಬಳ್ಳಾಪುರದಲ್ಲಿ ಪುರುಷು ಹಾಗೂ ಬಂಟ್ವಾಳದಲ್ಲಿ ಮಹಿಳೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು 489ಕ್ಕೆ ಏರಿಕೆಯಾಗಿದ್ದು, ಅವುಗಳಲ್ಲಿ 18 ಮಂದಿ ಮೃತಪಟ್ಟಿದ್ದಾರೆ. 153 ಮಂದಿ ಗುಣಮುಖರಾಗಿದ್ದಾರೆ.
ಇದನ್ನೂ ಓದಿರಿ ಏ.24ರ ಸಂಜೆ ವೇಳೆಗೆ 29 ಕೊರೊನಾ ಹೊಸ ಸೋಂಕಿತರು ಪತ್ತೆ
ದೇಶದಲ್ಲಿ 24,506 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 24,506 , ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 775 ಮಂದಿ ಮೃತಪಟ್ಟಿದ್ದಾರೆ. 5,063 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 28,34,136 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 1,97,373 ಜನರು ಮೃತಪಟ್ಟಿದ್ದಾರೆ. 8,07,593 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.