NEWS

ಎಚ್‌ಐವಿ ನಿಯಂತ್ರಣ ಔಷಧದಿಂದ ಕೊರೊನಾ ರೋಗಿ ಗುಣಮುಖ

ಎರ್ನಾಕುಲಂ ವೈದ್ಯ ಕಾಲೇಜಿನ ಪ್ರಾಂಶುಪಾಲ ಡಾ. ಮ್ಯಾಥ್ಯೂ ನೇತೃತ್ವದಲ್ಲಿ ಚಿಕಿತ್ಸೆ

ವಿಜಯಪಥ ಸಮಗ್ರ ಸುದ್ದಿ

ಕೇರಳ: ತಿರುವನಂತಪುರಂನಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖನಾಗಿದ್ದಾನೆ ಎಂದು ವರದಿಯಾಗಿದೆ.

ಕೇರಳಕ್ಕೆ ಬಂದಿದ್ದ ಇಂಗ್ಲೆಂಡ್‌ನ ವ್ಯಕ್ತಿಗೆ ಎಚ್‌ಐವಿ ನಿಯಂತ್ರಣಕ್ಕೆ ನೀಡುವ ಲೊಪಿನವಿರ್‌ ಮತ್ತು ರಿಟೊನವಿರ್ (lopinavir and ritonavir) ಸಂಯೋಜನೆಯ ಔಷಧವನ್ನು ಮಾ.20ರಂದು ನೀಡಲಾಗಿತ್ತು. ಅದನ್ನು ನೀಡಿದ ಮೂರು ದಿನಗಳ ಬಳಿಕೆ ಆತನ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು ಲ್ಯಾಬ್‌ ವರದಿಯಲ್ಲಿ ಕೊರೊನಾ ಸೋಂಕು ನೆಗೆಟಿವ್‌ ಎಂದು ಬಂದಿದೆ ಎಂದು ಎರ್ನಾಕುಲಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಥಾಮಸ್‌ ಮ್ಯಾಥ್ಯೂ ತಿಳಿಸಿದ್ದಾರೆ.

ಡಾ.ಥಾಮಸ್‌ ಮ್ಯಾಥ್ಯೂ ನೇತೃತ್ವದಲ್ಲಿ ಕೊರೊನಾ ಸೋಂಕಿತನಿಗೆ ಎಚ್‌ಐವಿ ನಿರೋಧಕ ಔಷಧಗಳ ಸಂಯೋಜಿಸಿ ಚಿಕಿತ್ಸೆ ನೀಡಲಾಗಿತ್ತು.  ಚಿಕಿತ್ಸೆಗೆ ಒಳಗಾಗಿದ್ದ ಆತ ಕೇವಲ ಮೂರೇ ದಿನದಲ್ಲೇ ಗುಣಮುಖನಾಗಿದ್ದಾನೆ. ಇದು ವೈದ್ಯಕೀಯ ಲೋಕಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

ಸೋಂಕಿತನಿಗೆ ಎಚ್‌ಐವಿ ನಿಯಂತ್ರಣ ಔಷಧ ನೀಡುವುದಕ್ಕೂ ಮುನ್ನ ವೈದ್ಯರು ಕೇರಳದ ರಾಜ್ಯ ವೈದ್ಯಕೀಯ ಮಂಡಳಿ ಹಾಗೂ ಸೋಂಕಿತ ವ್ಯಕ್ತಿಯ ಅನುಮತಿ ಪಡೆದಿದ್ದರು. ಕೇರಳದಲ್ಲಿ ಈ ಚಿಕಿತ್ಸೆಯನ್ನು ಮೊದಲ ಬಾರಿಗೆ ಬಳಸಲಾಗಿದ್ದು, ಆರಂಭದಲ್ಲಿಯೇ ದೊಡ್ಡ ಯಶಸ್ಸನ್ನು ಪಡೆದಂತ್ತಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೋಗಿಗಳಿಗೂ ಇದೇ ಚಿಕಿತ್ಸೆ ವಿಸ್ತರಿಸುವ ಯೋಚನೆಯಲ್ಲಿ ವೈದ್ಯರು ಇದ್ದಾರೆ ಎಂದು ಹೇಳಲಾಗಿದೆ.
ಈ ಮೊದಲು  ಇದೇ ರೀತಿ ನ್ಯೂಡೆಲ್ಲಿ ಮತ್ತು ಜೈಪುರದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿತ್ತು.  ಎಚ್‌ಐವಿ ಔಷಧದ ಜತೆಗೆ ಮಲೇರಿಯಾ ರೋಗಕ್ಕೆ ಬಳಸುವ ಔಷಧವನ್ನು  ಪ್ರಯೋಗಮಾಡಲಾಗಿತ್ತು. ಆ ಮೂಲಕ ಅಧ್ಯಯನ ನಡೆಸಿದ್ದ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿರುವ ಕ್ವೀನ್ಸ್‌ಲ್ಯಾಂಡ್‌ ವಿಶ್ವವಿದ್ಯಾಲಯದ ಸೋಂಕು ರೋಗಗಳ ತಜ್ಞರ ಗುಂಪು ಎಚ್‌ಐವಿ ಹಾಗೂ ಮಲೇರಿಯಾ ರೋಗದ ಔಷಧಗಳಿಂದ ಕೊರೊನಾ ವೈರಸ್‌ ನಿಯಂತ್ರಣ ಸಾಧ್ಯ ಎಂದು ಹೇಳಿತ್ತು. ಅಷ್ಟೇ ಅಲ್ಲ ಈ ರೀತಿಯ ಸಂಯೋಜಿತ ಚಿಕಿತ್ಸೆ ನೀಡುವುದರಿಂದ ರೋಗಗಳನ್ನು ಗುಣಪಡಿಸಬಹುದು ಎಂದು ಹೇಳಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ