ಮಂಡ್ಯ: ಲಾಕ್‍ಡೌನ್ ಇದ್ದರೂ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತ್ತಿತಲೇ ಇದೆ. ಮಂಗಳವಾರ (ಏ.7) ಒಂದೇ ದಿನ 12 ಹೊಸ ಕೊರೊನಾ ಪ್ರಕರಣ ದಾಖಲಾಗಿದೆ. ಈ ಮೂಲಕ ರಾಜ್ಕದಲ್ಲಿ ಒಟ್ಟು 175 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಮಂಗಳವಾರ 12 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಅವರಲ್ಲಿ ಮಂಡ್ಯದ ಮೂವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ನ್ಯೂಡೆಲ್ಲಿಯ ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿ ಬಂದವರ ನಿರ್ಲಕ್ಷ್ಯದಿಂದ ದಿನೇದಿನೆ ಕೊರೊನಾ ಸೋಂಕಿತರ ಪಟ್ಟಿ ಬೆಳೆಯುತ್ತಿದೆ. ಅಲ್ಲದೆ ಅವರ ಜತೆ ಪ್ರಾಥಮಿಕ ಸಂಪರ್ಕದಲ್ಲಿರುವವರಿಗೂ ಕೊರೊನಾ ಪಾಸಿಟಿವ್ ಆಗುತ್ತಿದೆ.
ಸೋಂಕು ದೃಢ ಪಟ್ಟವರ ವಿವರ
ರೋಗಿ 164 – 33 ವರ್ಷದ ಪುರುಷ. ಬಾಗಲಕೋಟೆಯ ಮುಧೋಳ್ ನಿವಾಸಿ. ಮಾರ್ಚ್ 13 ರಿಂದ 18ರವರೆಗೆ ನ್ಯೂಡೆಲ್ಲಿಯ ತಬ್ಲೀಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಈಗ ಬಾಗಲಕೋಟೆಯ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 165 – 41 ವರ್ಷದ ಮಹಿಳೆ. ಬಾಗಲಕೋಟೆ ನಿವಾಸಿ. ಇವರು 125ರ ಸೋಂಕಿತ ರೋಗಿಯ ನೆರೆಹೊರೆಯವರು. ಬಾಗಲಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗಿ 166 – 80 ವರ್ಷ ವೃದ್ಧೆ. ಗದಗ ಜಿಲ್ಲೆಯವರು. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ, ಸೋಂಕಿತರ ಜತೆ ಸಂಪರ್ಕವೂ ಇಲ್ಲ. ಆದರೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ ಬಂದಿದೆ. ಗದಗ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 167 – 29 ವರ್ಷದ ಪುರುಷ. ಬೆಂಗಳೂರು ನಗರದ ನಿವಾಸಿ. ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಿಸಲಾಗಿದೆ.
ರೋಗಿ 168 – 50 ವರ್ಷದ ವ್ಯಕ್ತಿ. ಬೆಂಗಳೂರು ನಗರದ ನಿವಾಸಿ. ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿ ಬಂದಿದ್ದ. ಸದ್ಯ ಚಿಕಿತ್ಸೆಗೆ ಒಳಪಡಿಸಲಾಗಿದೆ.
ರೋಗಿ 169 – 35 ವರ್ಷದ ಬೆಂಗಳೂರು ನಗರದ ನಿವಾಸಿ. ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದ್ದ ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 170 – 68 ವರ್ಷ ವೃದ್ಧ. ಬೆಂಗಳೂರು ನಗರದ ನಿವಾಸಿ. ದುಬೈನಿಂದ ಬಂದಿದ್ದಾರೆ . ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ಮುಂದುವರಿದಿದೆ.
ರೋಗಿ 171 – 32 ವರ್ಷದ ಪುರುಷ. ಮಂಡ್ಯ ನಿವಾಸಿ. ಈತ ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿದ್ದ 134, 135, 136, 137 ಮತ್ತು 138 ಸೋಂಕಿತರ ಜತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 172 – 36ವರ್ಷದ ಪುರುಷ. ಮಂಡ್ಯ ನಿವಾಸಿ. ಈತ ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿದ್ದ 134, 135, 136, 137 ಮತ್ತು 138 ಸೋಂಕಿತರ ಜತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 173 – 65 ವರ್ಷದ ಪುರುಷ. ಮಂಡ್ಯ ನಿವಾಸಿ. ಈತ ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿದ್ದ 134, 135, 136, 137 ಮತ್ತು 138 ಸೋಂಕಿತರ ಜತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 174 – 28 ವರ್ಷದ ಮಹಿಳೆ. ಕಲಬುರಗಿ ನಿವಾಸಿ. ರೋಗಿ ನಂ. 124 ಸೊಸೆಯ ಸಂಪರ್ಕದಿಂದ ಬಂದಿದೆ. ಸದ್ಯ ಕಲಬುರಗಿ ಆಸ್ಪತ್ರೆ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 175 – 57 ವರ್ಷದ ಪುರುಷ. ಕಲಬುರಗಿ ನಿವಾಸಿ. ಟ್ರಾವೆಲ್ ಹಿಸ್ಟರಿ ಇರದೇ ಇದ್ದರೂ ಅತಿ ಹೆಚ್ಚು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಲಬುರಗಿ ಆಸ್ಪತ್ರೆ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.