ಮೈಸೂರು: ನಗರದ ಬೋಟಿ ಬಜಾರ್ ರಸ್ತೆಯಲ್ಲಿ ಕಾರಿನಲ್ಲಿ ಬಂದ ಅಪರಿಚಿತ ಕಿಡಿಗೇಡಿಗಳು ಚಿಲ್ಲರೆ ಕಾಸುಗಳನ್ನು ಬಿಸಾಡಿ ಹೋಗಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಇಂದು (ಏ.22) ಬೆಳಗ್ಗೆ ಕಾರಿನಲ್ಲಿ ಬಂದಿರುವ ಕಿಡಿಗೇಡಿಗಳು ರಸ್ತೆಯಲ್ಲಿ ಜನರ ಎದುರಿಗೇ ಕಾಸುಗಳನ್ನು ಬಿಸಾಡಿ ಹೋಗಿದ್ದಾರೆ. ಇದರಿಂದ ಗಾಬರಿಗೊಂಡ ಜನರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರಿಗೆ ಫೋನ್ ಮಾಡಿದ್ದರು.
ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳು ನಾಣ್ಯಗಳನ್ನು ಸ್ಯಾನಿಟೈಸರ್ ನಿಂದವಾಷ್ ಮಾಡಿ ಎತ್ತಿಕೊಂಡು ಹೋಗಿದ್ದಾರೆ. ಜನತೆಯಲ್ಲಿ ಭೀತಿಯನ್ನು ಸೃಷ್ಟಿಸುವ ಸಲುವಾಗಿಯೇ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದಾರೆ.
ಜನತೆ ಇಂಥ ಕಿಡಿಗೇಡಿಗಳು ಮಾಡುವ ಕೃತ್ಯಕ್ಕೆ ಭಯಪಡಬೇಡಿ ನಿಮ್ಮ ರಕ್ಷಣೆಗೆ ನಾವಿದ್ದೇವೆ. ಈ ರೀತಿ ಮತ್ತೆಲ್ಲಿಯಾದರೂ ಕಂಡು ಬಂದಲ್ಲಿ ನಮ್ಮ ಗಮನಕ್ಕೆ ತನ್ನಿ ಎಂದು ಪೊಲೀಸರು ಧೈರ್ಯ ತುಂಬಿದ್ದಾರೆ.
ಕೊರೊನಾ ವೈರಸ್ ಭೀತಿಯ ಬೆನ್ನಲ್ಲೇ ಈ ನಾಣ್ಯ ಚೆಲ್ಲಿರುವುದು ಜನರಲ್ಲಿ ಕೆಲಕಾಲ ಆತಂಕ ಹುಟ್ಟಿಸಿತ್ತು. ಇನ್ನು ಪೊಲೀಸರು ಹತ್ತಿರದಲ್ಲಿರುವ ಸಿಸಿ ಕ್ಯಾಮರಾ ಫೂಟೇಜ್ ವೀಕ್ಷಿಸಿ, ಕಾರಿನಲ್ಲಿ ಬಂದವರಾರೆಂದು ಪತ್ತೆ ಹಚ್ಚಿ ಅವರನ್ನು ಶಿಕ್ಷೆಗೆ ಒಳಪಡಿಸುತ್ತೇವೆ ಎಂದು ತಿಳಿಸಿದ್ದಾರೆ.